ಮಂಗಳೂರು : ಇಫಿಮ್ಜಿ ಸ್ಟುಡಿಯೋಸ್ ಇಂಡಿಯನ್ ಫಿಲ್ಡ್ ಫ್ಯಾಶನ್ ಮೀಡಿಯಾ ನೆಟ್‌ವರ್ಕ್ ವತಿಯಿಂದ ಒಂಭತ್ತು ಭಾಷೆಗಳಲ್ಲಿ 3 ಚಲನಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಇಫ್ಟಿಮ್‌ಗಿ ಸ್ಟುಡಿಯೋದ ಸಿಇಒ ಮರಿ ಗಿರಿ ರೆಡ್ಡಿ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಸುಮಾರು ರೂಪಾಯಿ 90 ಕೋಟಿ ವೆಚ್ಚದಲ್ಲಿ ಮೂರು ಚಲನಚಿತ್ರಗಳ ನಿರ್ಮಾಣವಾಗಲಿದ್ದು, ಡಿಸೆಂಬರ್‌ನಲ್ಲಿ ಮಂಗಳೂರಿನಿಂದಲೇ ಶೂಟಿಂಗ್ ಆರಂಭವಾಗಲಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಇತ್ಯಾದಿ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಲಾಗುವುದು ಎಂದರು. ಪ್ಯಾನ್ ಇಂಡಿಯಾ ಚಲನಚಿತ್ರ ಯೋಜನೆಗಳ ಭಾಗವಾಗಿ ಮೂರು ಚಿತ್ರಗಳನ್ನು ಏಕಕಾಲದಲ್ಲಿ ಆರಂಭಿಸಿ ವರ್ಷದೊಳಗೆ ಶೂಟಿಂಗ್ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಮಂಗಳೂರಿನ ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿಯೇ ಚಿತ್ರದ ಲಾಂಚ್ ಆಗಲಿದೆ ಎಂದು ಅವರು ತಿಳಿಸಿದರು.
ಮಂಗಳೂರು, ಚಿಕ್ಕಮಗಳೂರು, ಕೂರ್ಗ್, ಊಟಿ, ಕೊಡೈಕೆನಾಲ್, ಕೇರಳ ಹಾಗೂ ವಿದೇಶಗಳಲ್ಲೂ ಚಿತ್ರೀಕರಣ ನಡೆಯಲಿದೆ. ಡಿಸೆಂಬರ್ 6ರಂದು ಶಿವಮೊಗ್ಗ ಪ್ರೆಸ್ ಕ್ಲಬ್‌ನಲ್ಲಿ ಚಿತ್ರಗಳ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ವಿವರಿಸಿದರು.