image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

100 ಕೋಟಿ ಕ್ಲಬ್ ಸೇರಿದ ‘ಆಡುಜೀವಿತಂ’

100 ಕೋಟಿ ಕ್ಲಬ್ ಸೇರಿದ ‘ಆಡುಜೀವಿತಂ’

ನ್ಯಾಷನಲ್ ಅವಾರ್ಡ್ ವಿಜೇತ ಬ್ಲೆಸ್ಸಿ ಅವರು ‘ಆಡುಜೀವಿತಂ’ ಚಿತ್ರಕ್ಕಾಗಿ ಹಲವು ವರ್ಷ ಮುಡಿಪಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಪೃಥ್ವಿರಾಜ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ.  ಪೃಥ್ವಿರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ.

ಪೃಥ್ವಿರಾಜ್​ ಸುಕುಮಾರನ್ (Prithviraj Sukumaran)​ ನಟನೆಯ ‘ಆಡುಜೀವಿತಂ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎಂಟು ದಿನಗಳಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಮೊದಲ ಮಲಯಾಳಂ ಸಿನಿಮಾ ಎನ್ನುವ ಖ್ಯಾತಿಗೆ ಈ ಚಿತ್ರ ಪಾತ್ರವಾಗಿದೆ. ಸಿನಿಮಾ ನೋಡಿದ ಅನೇಕರು ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ, ಚಿತ್ರದ ಗಳಿಕೆ ಹೆಚ್ಚುತ್ತಿದೆ. ಮುಂದಿನ ವಾರಗಳಲ್ಲಿ ಸಾಲು ಸಾಲು ರಜೆ ಇರುವುದರಿಂದ ಸಿನಿಮಾಗೆ ಸಹಕಾರಿ ಆಗಲಿದೆ.ನ್ಯಾಷನಲ್ ಅವಾರ್ಡ್ ವಿಜೇತ ಬ್ಲೆಸ್ಸಿ ಅವರು ‘ಆಡುಜೀವಿತಂ’ ಚಿತ್ರಕ್ಕಾಗಿ ಹಲವು ವರ್ಷ ಮುಡಿಪಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಪೃಥ್ವಿರಾಜ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ.  ಪೃಥ್ವಿರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಗ್ಲೋಬಲ್ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಮಾಡಿರೋ ಬಗ್ಗೆ ಮಾಹಿತಿ ನೀಡಿದ್ದಾರೆ.

2008ರಲ್ಲಿ ನಿರ್ದೇಶಕ ಬ್ಲೆಸ್ಸಿ ಅವರು ಪೃಥ್ವಿರಾಜ್ ಅವರಿಗೆ ಈ ಸಿನಿಮಾ ಬಗ್ಗೆ ಹೇಳಿದ್ದರು. ಸಿನಿಮಾದ ಕಥೆ ಅವರಿಗೆ ಇಷ್ಟ ಆಯಿತು. ಆ ಬಳಿಕ ಸಾಕಷ್ಟು ವರ್ಷ ಶ್ರಮ ಹಾಕಿ ಸಿನಿಮಾ ಮಾಡಲಾಯಿತು. ಈ ಚಿತ್ರ 2024ರಲ್ಲಿ ರಿಲೀಸ್ ಆಗಿದೆ. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಗಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.

ಆಡುಜೀವಿತಂ’ ಸಿನಿಮಾದಲ್ಲಿ ಅಮಲಾ ಪೌಲ್, ಕೆಆರ್ ಗೋಕುಲ್ ಮೊದಲಾದವರು ನಟಿಸಿದ್ದಾರೆ. ಕೇರಳದ ನಜೀಬ್ ಹೆಸರಿನ ವ್ಯಕ್ತಿ ಸೌದಿ ಅರೇಬಿಯಾಗೆ ಕೆಲಸ ಅರಸಿ ಹೋಗುತ್ತಾರೆ. ಅಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಹಲವು ವರ್ಷಗಳ ಸ್ಟ್ರಗಲ್ ಬಳಿಕ ಅವರು ದೇಶಕ್ಕೆ ಮರಳುತ್ತಾರೆ. ಈ ಕಥೆಯನ್ನು ಸಿನಿಮಾ ಹೊಂದಿದೆ.

Category
ಕರಾವಳಿ ತರಂಗಿಣಿ