ಭಾರತೀಯ ಚಿತ್ರರಂಗದ ದಿಗ್ಗಜರಾದ ಶ್ರೀಯುತ ಪುಟ್ಟಣ್ಣ ಕಣಗಾಲ್ರವರು, ಶ್ರೀಯುತ ಲಕ್ಷ್ಮೀನಾರಾಯಣ್ರವರು, ಶ್ರೀಯುತ ಸಿದ್ದಲಿಂಗಯ್ಯನವರು ಹಾಗೂ ಇನ್ನಿತರ ಹಿರಿಯ ನಿರ್ದೇಶಕರುಗಳು ಕಟ್ಟಿ ಬೆಳೆಸಿರುವ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ(ಕಾನ್ಸಿಡ)ದ ವತಿಯಿಂದ ಪುಟ್ಟಣ್ಣ ಕಣಗಾಲ್ ಅವರ ಹುಟ್ಟುಹಬ್ಬವನ್ನು
ಕೊಂಡಜ್ಜಿ ಸಭಾಭವನದಲ್ಲಿ ನಾಳೆ ಬೆಳಿಗ್ಗೆ 9-30ಕ್ಕೆ ಚಿತ್ರರಂಗದ ಗಣ್ಯರೊಂದಿಗೆ ನಮ್ಮ ಸಂಘವು ಆಚರಿಸುತ್ತಿದೆ. ವಿಶೇಷವಾಗಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದ್ದು, ಸದಸ್ಯರೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.