ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ ಹಾಗೂ ಪ್ರಮೋದ್ ಜಯ ನಿರ್ದೇಶನದ "ದಿಲ್ ಖುಷ್" ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ಈ ಚಿತ್ರವನ್ನು ಅನಿರುದ್ದ್, ವಿ.ಮನೋಹರ್, ಯಶ್ ಶೆಟ್ಟಿ, ಅಶ್ವತ್ಥ್ ನೀನಾಸಂ, "ಉಪಾಧ್ಯಕ್ಷ" ಚಿತ್ರದ ನಾಯಕಿ ಮಲೈಕ, ರೂಪಿಕ ಮುಂತಾದವರು ವೀಕ್ಷಿಸಿ ಚಿತ್ರ ಚೆನ್ನಾಗಿದೆ,ಯಶಸ್ವಿಯಾಗಲಿ ಎಂದು ಹಾರೈಸಿದರು. ಚಿತ್ರವು ಕನ್ನಡ ಪ್ರೇಕ್ಷಕರ ಹೃದಯ ಗೆದ್ದು ಮುನ್ನುಗ್ಗುತ್ತಿರುವಾಗಲೇ ತೆಲುಗಿನಿಂದ ಬೇಡಿಕೆ ಬಂದಿದ್ದು ಚಿತ್ರತಂಡ ಈಗಾಗಲೇ ಡಬ್ಬಿಂಗ್ ಗೆ ತಯಾರಿ ಮಾಡಿಕೊಂಡಿದೆ. ಬೇಡಿಕೆಯಲ್ಲಿದಾಗಲೇ ಸಿನಿಮಾ ತಲುಪಿಸಬೇಕೆಂಬ ಉತ್ಸಾಹದಲ್ಲಿರುವ ಚಿತ್ರತಂಡ ಮತ್ತು ನಿರ್ದೇಶಕ ಪ್ರಮೋದ್ ಜಯ ಅವರು "ಇದು ಕನ್ನಡಿಗರ ಗೆಲುವು, ಕನ್ನಡಿಗರು ನೀಡಿದ ಗೆಲುವು " ಎಂದು ದಿಲ್ ಖುಷ್ ಇಂದ ಮಾತನಾಡಿದರು.
ಸಾಕಷ್ಟು ಸಿನಿಮಾಗಳಲ್ಲಿ ಕಾರ್ಯ ನಿರ್ವಹಿಸಿರುವ ಪ್ರಮೋದ್ ಜಯ ಅವರು ನಿರ್ದೇಶಿಸಿರುವ ಚೊಚ್ಚಲ ಚಿತ್ರವಿದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ.
"ದಿಲ್ ಖುಷ್" ಚಿತ್ರದ ನಾಯಕನಾಗಿ ರಂಜಿತ್ ನಟಿಸಿದ್ದಾರೆ. ಸ್ಪಂದನ ಸೋಮಣ್ಣ ಈ ಚಿತ್ರದ ನಾಯಕಿ. ರಂಗಾಯಣ ರಘು, ಧರ್ಮಣ್ಣ ಕಡೂರು, ರವಿ ಭಟ್, ಅರುಣ ಬಾಲರಾಜ್, ರಘು ರಾಮನಕೊಪ್ಪ, ಸೂರ್ಯ ಪ್ರವೀಣ್, ಮಧುಸೂದನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.