"ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ" ಇದು ನಟ ಡಾಲಿ ಧನಂಜಯ ಅವರು ಹೇಳಿದ ಮಾತು. ಆ ಮಾತೇ ಚಲನಚಿತ್ರದ ಶೀರ್ಷಿಕೆಯಾಗಿರುವುದು ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ "ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ" ಚಿತ್ರದ ಟ್ರೇಲರ್ ಅನ್ನು ಕೋಲಾರ ಜಿಲ್ಲೆಯ ವೇಮಗಲ್ ನಲ್ಲಿ ನಟ ಡಾಲಿ ಧನಂಜಯ ಬಿಡುಗಡೆ ಮಾಡಿದರು. ನಟ ಶರಣ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇಬ್ಬರು ನಟರು ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶ್ರೀರಾಮ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿ.ಎಸ್ ವೆಂಕಟೇಶ್ ಅವರು ನಿರ್ಮಿಸಿರುವ ಈ ಚಿತ್ರದ ರಚನೆ ಹಾಗೂ ನಿರ್ದೇಶನ ಮಂಜು ಕವಿಯವರದು. ಸುಚೇಂದ್ರ ಪ್ರಸಾದ್ ಹಾಗೂ ಸಂಗೀತ ರವರು ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದು, ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ಲಾವಣ್ಯವೈಭವಿ ನಟಿಸಿದ್ದಾರೆ.
ಚಂದ್ರಪ್ರಭ ಗೊಬ್ರಗಾಲ, ಮುಖೇಶ್, ಶಿವರೆಡ್ಡಿ, ಮೂಗು ಸುರೇಶ್, ಜಗದೀಶ್ ಕೊಪ್ಪ, ಟೆನ್ನಿಸ್ ಕೃಷ್ಣ, ರೇಖಾ ದಾಸ್, ಸಿಲ್ಲಿ ಲಲ್ಲಿ ಶ್ರೀನಿವಾಸ್ ಗೌಡ್ರು, ಚಿದಾನಂದ, ವಿನೋದ್, ತಾರಾ, ಚೈತ್ರ ಕೊಟ್ಟೂರು, ಪವಿತ್ರ ,ಧನುಷ್,ಯಶೋದಮ್ಮ, ನಾಗರಾಜ್,ಸುರೇಶ್ ಉದ್ಬೂರು ಮುಂತಾದವರು ತಾರಾಬಳಗದಲ್ಲಿದ್ದಾರೆ.
ವೆಂಕಿ ಯುಡಿಐ ಸಂಕಲನ , ರೇಣು ಕುಮಾರ್ ಛಾಯಾಗ್ರಹಣವಿರುವ ಈ ನಿರ್ದೇಶನ ತಂಡದಲ್ಲಿ ಎಸ್.ಜೆ ಸಂಜಯ್, ಗಿರೀಶ್ ಸಾಕಿ, ಸಂಗೀತ ಶೆಟ್ಟಿ, ರಾಜಿ ಕಾರ್ಯ ನಿರ್ವಹಿಸಿದ್ದಾರೆ.
ಕುಟುಂಬ ಸಮೇತ ನೋಡಬಹುದಾದ ಈ ಚಿತ್ರವನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎಂದು ನಿರ್ಮಾಪಕ ಸಿ ಎಸ್ ವೆಂಕಟೇಶ್ ಅವರು ತಿಳಿಸಿದ್ದಾರೆ.