image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುಷ್ಪ-2 ಸೀಕ್ವೆಲ್ ನಲ್ಲಿ ಶ್ರೀಲೀಲಾ‌ ಕಮಾಲ್...ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್

ಪುಷ್ಪ-2 ಸೀಕ್ವೆಲ್ ನಲ್ಲಿ ಶ್ರೀಲೀಲಾ‌ ಕಮಾಲ್...ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್

ಟಾಲಿವುಡ್ ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಪುಷ್ಪ-2. ಡಿಸೆಂಬರ್ 5ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿರುವ ಅಲ್ಲು ಅರ್ಜುನ್ ಸಿನಿಮಾದಿಂದ ಹೊಸ ಸಮಾಚಾರ ಹೊರಬಿದ್ದಿದೆ. ಪುಷ್ಪ ಸೀಕ್ವೆಲ್ ಸ್ಪೆಷಲ್ ನಂಬರ್ ಗೆ ಯಾರು ಹೆಜ್ಜೆ ಹಾಕಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಟಾಲಿವುಡ್ ಹೊಸ ಸೆನ್ಸೇಷನ್, ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಪುಷ್ಪರಾಜ್ ಜೊತೆ ಸೊಂಟ ಬಳುಕಿಸಿದ್ದಾರೆ. ಪೋಸ್ಟರ್ ಮೂಲಕ ಚಿತ್ರತಂಡ ಶ್ರೀಲೀಲಾರನ್ನು ಪರಿಚಯಿಸಿದೆ.

ಪುಷ್ಪ ಮೊದಲ ಅಧ್ಯಾಯದಲ್ಲಿ ಹೂ ಅಂತಾವಾ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಹಾಕಿತ್ತು. ಸಮಂತಾ ಹಾಗೂ ಅಲ್ಲು ಅರ್ಜುನ್ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದ ಸಾಂಗ್ ಸಖತ್ ಸೌಂಡ್ ಮಾಡಿತ್ತು. ಡಿಎಸ್ ಪಿ ಮ್ಯೂಸಿಕ್, ಸ್ಯಾಮ್ ಕುಣಿತ ಎಲ್ಲವೂ‌ ಮೋಡಿ ಮಾಡಿತ್ತು. ಈಗ ಪುಷ್ಪ ಸೀಕ್ವೆಲ್ ರಣಕಣದಲ್ಲಿ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಹಾಗೂ ಐಕಾನ್ ಸ್ಟಾರ್ ಗಣೇಶ್ ಆಚಾರ್ಯ ಕೊರಿಯೋಗ್ರಫಿಗೆ ಕುಣಿದು ಕುಪ್ಪಳಿಸಿದ್ದಾರೆ.  

ಶ್ರೀಲೀಲಾ ಅಭಿನಯದ ಜೊತೆಗೆ ನೃತ್ಯದಲ್ಲಿಯೂ ಪ್ರವೀಣೆ. ಆಕೆಯ ಡ್ಯಾನ್ಸ್ ಇಷ್ಟಪಡುವ ಒಂದು ವರ್ಗವಿದೆ. ಇನ್ನು ಅಲ್ಲು ಅರ್ಜುನ್ ಡ್ಯಾನ್ಸ್ ಬಗ್ಗೆ ಹೇಳೋದೇ ಬೇಡ. ಡ್ಯಾನ್ಸಿಂಗ್ ಸ್ಟಾರ್ ಹಾಗೂ ಡ್ಯಾನ್ಸಿಂಗ್ ಕ್ವೀನ್ ಇಬ್ಬರು ಜಬರ್ದಸ್ತ್ ಆಗಿ ಪುಷ್ಪ‌ ಸೀಕ್ವೆಲ್ ವಿಶೇಷ ಕುಣಿದಿದ್ದಾರೆ.

ಸುಕುಮಾರ್ ನಿರ್ದೇಶನದಲ್ಲಿ ಪುಷ್ಪ‌ 2 ಬಹಳ ಅದ್ಧೂರಿಯಾಗಿ ತಯಾರಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಿದ್ದಾರೆ. ಫಹಾದ್ ಫಾಸಿಲ್, ಧನಂಜಯ್, ಅನಸೂಯ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಹೆಚ್ಚು ಕಡಿಮೆ ಅದೇ ತಂಡ ಸೀಕ್ವೆಲ್‌ನಲ್ಲಿ ಮುಂದುವರೆದಿದೆ. 'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಮತ್ತೊಮ್ಮೆ ಪುಷ್ಪರಾಜ್ ಆಗಿ ಸ್ಟೈಲಿಶ್ ಸ್ಟಾರ್ ಆರ್ಭಟ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗುತ್ತಿದೆ.

Category
ಕರಾವಳಿ ತರಂಗಿಣಿ