ರಾವುಲ ವೆಂಕಟೇಶ್ವರ ರಾವ್ ಅರ್ಪಿಸುವ, ಅನ್ವಿಕ ಆರ್ಟ್ಸ್ ಮತ್ತು ಎ ಐ ಎಂಟರ್ಟೈನ್ಮೆಂಟ್ ನಿರ್ಮಿಸಿರುವ ಚಿತ್ರ , ಆದಿ ಪರ್ವ ಇದೇ ನವಂಬರ್ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ತೆಲುಗು ಕನ್ನಡ ತಮಿಳು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ತೆಲುಗಿನ ಸೂಪರ್ ಸ್ಟಾರ್ ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಜಮಿನಿ ಸುರೇಶ್, ಎಸ್ತರ್ ಸತ್ಯ ಪ್ರಕಾಶ್ ಇನ್ನು ಹಲವರು ತಾರಾಗಣದಲ್ಲಿದ್ದಾರೆ.
ಚಿತ್ರವು 1974 ರಿಂದ 1990ರ ಸಮಯದಲ್ಲಿ ನಡೆಯುವ ಕಥೆ. ಹೈದ್ರಾಬಾದ್ ಸುತ್ತಮುತ್ತ ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಐವರು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ಹರೀಶ್ ಸೊಂಡೆಕೊಪ್ಪ ಅವರ ಛಾಯಾಗ್ರಣವಿದೆ
ಈ ಹಿಂದೆ ದಂಡು, ಕ್ಯೂ ಚಿತ್ರವನ್ನು ನಿರ್ದೇಶನ ಮಾಡಿದಂತಹ ಸಂಜೀವಿ ಮೆಗೋಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಜನ ಮೆಚ್ಚುಗೆ ಗಳಿಸಿವೆ. ಭಾರಿ ಕುತೂಹಲವಿರುವ ಚಿತ್ರ ಆದಿ ಪರ್ವ ನವೆಂಬರ್ 8ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ.