ಬೆಂಗಳೂರು : ಎದ್ದೇಳು ಮಂಜುನಾಥ ಸಿನಿಮಾ ಖ್ಯಾತಿಯ ಚಿತ್ರ ನಿರ್ದೇಶಕ ಗುರುಪ್ರಸಾದ್ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಅವರು ತನ್ನ ಮಾದನಾಯಕನಹಳ್ಳಿಯ ಅಪಾರ್ಟೆಂಟ್ ನಲ್ಲಿ ನೇಣಿಗೆ ಶರಣಾಗಿದ್ದು ಸಾಲಗಾರರ ಕಾಟದಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಮೊದಲ ಮದುವೆ ಕೌಟುಂಬಿಕ ಕಲಹದಿಂದ ಮುರಿದು ಬಿದ್ದ ಕಾರಣ ಇತ್ತೀಚಿಗೆ ಎರಡನೇ ಮದುವೆ ಆಗಿದ್ದರು. ಜೊತೆಗೆ ಸಾಲು ಸಾಲು ಚಿತ್ರಗಳಲ್ಲಿ ಸೋಲು ಕಂಡಿದ್ದರು. ಗುರುಪ್ರಸಾದ್ 5 ಕನ್ನಡ ಚಿತ್ರಗಳನ್ನ ನಿರ್ದೇಶಿಸಿದ್ದರು.
ಸದ್ಯ ಕೊಳೆತ ಸ್ಥಿತಿಯಲ್ಲಿ ಗುರುಪ್ರಸಾದ್ ಶವ ಪತ್ತೆಯಾಗಿದ್ದು ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದಬಂದಿಲ್ಲ. ವಾರದ ಹಿಂದೆಯೇ ಸೂಸೈಡ್ ಮಾಡಿಕೊಂಡಿರಬಹುದು ಎನ್ನಲಾಗಿದೆ.