image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಯಂರವಿ ನಟನೆಯ 'ಜೀನಿ' ಫಸ್ಟ್ ಲುಕ್..

ಜಯಂರವಿ ನಟನೆಯ 'ಜೀನಿ' ಫಸ್ಟ್ ಲುಕ್..

ಸೈರನ್ ಸಿನಿಮಾ ಸೂಪರ್ ಹಿಟ್ ಬಳಿಕ ತಮಿಳು ನಟ ಜಯಂರವಿ ಜೀನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನನ್ ಜೂನಿಯರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಜೀನಿಯಲ್ಲಿ ಜಯಂರವಿ ಹೊಸ ಅವತಾರ ತಾಳಿದ್ದಾರೆ.

ಜೀನಿ ಫ್ಯಾಂಟಸಿ ಸಿನಿಮಾ. ಇದೇ ಮೊದಲ ಬಾರಿಗೆ ಜಯಂರವಿ ಫ್ಯಾಂಟಸಿ ಕಥೆಯಲ್ಲಿ ಬಣ್ಣ ಹಚ್ಚಿದ್ದಾರೆ. ಹೀಗಾಗಿ ಫಸ್ಟ್ ಲುಕ್ ಕೂಡ ವಿಭಿನ್ನವಾಗಿದೆ. ಸರಪಣಿಯಲ್ಲಿ ಬಂಧಿಯಾಗಿರುವ ಜಯಂರವಿ, ಜುಟ್ಟು ಕಟ್ಟಿ ಸ್ಟೈಲೀಶ್ ಲುಕ್ ನಲ್ಲಿ ಮಿಂಚಿದ್ದಾರೆ. 

ಜಯಂರವಿ ನಾಯಕನಾಗಿ ನಟಿಸಿರುವ ಕಲ್ಯಾಣಿ ಪ್ರಿಯದರ್ಶನ್, ಕೃತಿ ಶೆಟ್ಟಿ ಮತ್ತು ವಾಮಿಕಾ ಗಬ್ಬಿ ನಾಯಕಿಯರಾಗಿ ನಟಿಸಿದ್ದಾರೆ. ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 

 

ಜೀನಿ ಚಿತ್ರದ 75%  ಶೂಟಿಂಗ್ ಕಂಪ್ಲೀಟ್ ಆಗಿದ್ದು, ಕೇವಲ 3 ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಇನ್ನೂ 10 ದಿನಗಳಲ್ಲಿ  ಆ ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಲ್ಲಿ ತೊಡಗಿಸಿಕೊಳ್ಳಲಿದೆ. 

ವೆಲ್ಸ್ ಫಿಲ್ಮ್ ಇಂಟರ್‌ನ್ಯಾಶನಲ್‌ನ ಡಾ. ಇಶಾರಿ ಕೆ. ಗಣೇಶ್ ಜೀನಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮಹೇಶ್ ಮುತ್ತುಸ್ವಾಮಿ ದೃಶ್ಯಗಳನ್ನು ಕ್ಯಾ,ಮೆರಾ ಹ್ಯಾಂಡಲ್ ಮಾಡಿದ್ದು, ಪ್ರದೀಪ್ ಇ ರಾಗವ್ ಸಂಕಲನ,  ಯಾನಿಕ್ ಬೆನ್ ಆಕ್ಷನ್ ದೃಶ್ಯಗಳ ನಿರ್ದೇಶನ ಚಿತ್ರಕ್ಕಿದೆ.

 

Category
ಕರಾವಳಿ ತರಂಗಿಣಿ