ತುಳುನಾಡಿನ ದೈವದ ಕಾರ್ನಿಕವನ್ನು ಜಗತ್ತಿನಗಲಕ್ಕೂ ಸಾರಿದ ಕಾಂತರ ಚಿತ್ರ ತಂಡ ಕಾಂತರ ಪ್ರಿಕ್ವೆಲ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಚಿತ್ರ ಪ್ರೇಮಿಗಳ ನಿರೀಕ್ಷೆಗೆ ತಕ್ಕಂತೆ ಚಿತ್ರ ತಯಾರಿಸಲಾಗುತ್ತಿದೆ. ಕಾಂತರ ಪ್ರಕ್ವೆಲ್ ಗೆ RRR ಸಿನಿಮಾದ ಆಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್ ಸಾಹಸ ನಿರ್ದೇಶನ ಮಾಡಲಿದ್ದು, ಟೊಡರ್ ಲ್ಯಾಜರೋವ್ ಬಲ್ಗೇರಿಯಾದಿಂದ ಕುಂದಾಪುರಕ್ಕೆ ಆಗಮಿಸಿದ್ದಾರೆ. ಅವರನ್ನು ಕಾಂತರ ಚಿತ್ರ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಆತ್ಮೀಯವಾಗಿ ಸ್ವಾಗತಿಸಿದರು.