image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

"ಉಡಾಳ"ನಿಗೆ ಮೊದಲ ಹಂತದ ಚಿತ್ರೀಕರಣ ಪೂರ್ಣ

"ಉಡಾಳ"ನಿಗೆ ಮೊದಲ ಹಂತದ ಚಿತ್ರೀಕರಣ ಪೂರ್ಣ

ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲಂಸ್ ಲಾಂಛನದಲ್ಲಿ ದಾವಣಗೆರೆಯ *ರವಿ ಶಾಮನೂರು* ಹಾಗೂ *ಯೋಗರಾಜ್ ಭಟ್* ಅವರು ನಿರ್ಮಿಸುತ್ತಿರುವ, *ಅಮೋಲ್ ಪಾಟೀಲ್* ನಿರ್ದೇಶನದಲ್ಲಿ *ಪೃಥ್ವಿ ಶಾಮನೂರು* ನಾಯಕನಾಗಿ ನಟಿಸುತ್ತಿರುವ *"ಉಡಾಳ"* ಚಿತ್ರಕ್ಕೆ ಬಿಜಾಪುರದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ. 

ಚಿತ್ರದ ನಾಯಕ ಪೃಥ್ವಿ ಈ ಚಿತ್ರದಲ್ಲಿ ಗೈಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 25 ದಿನಗಳ ಮೊದಲ ಹಂತದ ಚಿತ್ರೀಕರಣದಲ್ಲಿ ಹಾಡು, ನೃತ್ಯ ಹಾಗೂ ಮಾತಿನ ಭಾಗದ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಲಾಗಿದೆ. ಈ ಭಾಗದ ಚಿತ್ರೀಕರಣ ಸಂಪೂರ್ಣ ಬಿಜಾಪುರದಲ್ಲೇ ನಡೆದಿದೆ. ಈಗಾಗಲೇ ಚಿತ್ರದ ಮುಕ್ಕಾಲು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.   ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಅಮೋಲ್ ಪಾಟೀಲ್ ತಿಳಿಸಿದ್ದಾರೆ.

"ಉಡಾಳ" ಪಕ್ಕಾ ಕಮರ್ಷಿಯಲ್ ಜಾನರ್ ಚಿತ್ರವಾಗಿದೆ. ಲವ್, ಕಾಮಿಡಿ ಸೇರಿದಂತೆ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ‌. ಯೋಗರಾಜ್ ಭಟ್ ಅವರ ಜೊತೆಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೋಲ್ ಪಾಟೀಲ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ, ಅಮೋಲ್ ಪಾಟೀಲ್ ಬಿಜಾಪುರ ಮೂಲದವರು ಎನ್ನುವುದು ಮತ್ತೊಂದು ವಿಶೇಷ.

ತಮ್ಮ ಮೊದಲ ಚಿತ್ರ "ಪದವಿಪೂರ್ವ" ದಲ್ಲೇ ಪೃಥ್ವಿ ಶಾಮನೂರು ಪ್ರೇಕ್ಷಕರ ಮನ ಗೆದ್ದಿದ್ದರು. ಪ್ರಸ್ತುತ ಅವರು ನಾಯಕರಾಗಿ ನಟಿಸುತ್ತಿರುವ "ಉಡಾಳ" ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಯಿದೆ. ಪೃಥ್ವಿ ಶಾಮನೂರು ಅವರಿಗೆ ನಾಯಕಿಯಾಗಿ  ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ.  ಬಲ ರಾಜವಾಡಿ, ಸುಮಿತ್, ಹರೀಶ್ ಹಿರಿಯೂರು, ಮಾಳು ನಿತ್ನಾಳ್, ಪ್ರವೀಣ್ ಗೋಕಾಕ್, ದಯಾನಂದ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

 

ಯೋಗರಾಜ್ ಭಟ್ ಅವರು ಚಿತ್ರದ ಹಾಡುಗಳನ್ನು ರಚಿಸಿದ್ದು, ಚೇತನ್ ಡ್ಯಾವಿ ಸಂಗೀತ ನೀಡಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಗ್ರಹಣ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಹಾಗೂ ಮೋಹನ್, ರಘು ಅವರ ನೃತ್ಯ ನಿರ್ದೇಶನ "ಉಡಾಳ" ಚಿತ್ರಕ್ಕಿದೆ.

 

ಇದೇ ವರ್ಷದ ಕೊನೆಯಲ್ಲಿ ಸಿನಿಮಾ  ಬಿಡುಗಡೆ ಮಾಡುವ ಸಾಧ್ಯತೆ ಇದೆ.

Category
ಕರಾವಳಿ ತರಂಗಿಣಿ