ಮಂಗಳೂರು: ಎಸ್ ಬಿ ಗ್ರೂಪ್ಸ್ ಅರ್ಪಿಸುವ, ಶಿಯಾನ ಪ್ರೊಡಕ್ಷನ್ ಹೌಸ್ ನಿರ್ಮಾಣದ "ಪಿಲಿಪಂಜ" ಸಿನಿಮಾದ ಶಿರ್ಷಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ನಿತ್ಯಾನಂದ ಸೇವಾಶ್ರಮದಲ್ಲಿ ನಡೆಯಿತು. ಹಿರಿಯ ತುಳು ರಂಗಭೂಮಿ ಹಾಗೂ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಶೀರ್ಷಿಕೆ ಬಿಡುಗಡೆ ಮಾಡುತ್ತಾ, "ಪಿಲಿಪಂಜ" ಒಂದು ವಿಭಿನ್ನ ಹಾಗೂ ಕುತೂಹಲ ಮೂಡಿಸುವ ಟೈಟಲ್ ಆಗಿದಗದು, ಇದೊಂದು ವಿಭಿನ್ನ ಚಿತ್ರವಾಗಿ ಮೂಡಿ ಬರುವುದರಲ್ಲಿ ಸಂಶಯವಿಲ್ಲ. ಒಂದೊಳ್ಳೆ ಕಥೆಯೊಂದಿಗೆ ಚಿತ್ರ ತಂಡ ನಮ್ಮ ಮುಂದೆ ಬರುತ್ತಿದೆ. ತುಳುನಾಡಿನ ಜನತೆ ಈ ಚಿತ್ರವನ್ನು ಗೆಲ್ಲಿಸಿ ಕೊಡ ಬೇಕು. ಗುರು ನಿತ್ಯಾನಂದರ ಆಶೀರ್ವಾದ ಚಿತ್ರ ತಂಡದ ಮೇಲಿರಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಿಯಾನ ಪ್ರೊಡಕ್ಷನ್ ಹೌಸ್ ನ ಪ್ರತೀಕ್ ಪೂಜಾರಿ, ಚಿತ್ರದ ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯುಷರ್ ರಮೇಶ್ ರೈ ಕುಕ್ಕುವಳ್ಳಿ, ಮುಂಬಯಿಯ ರಂಗ ನಿರ್ದೇಶಕ, ಭ್ರಾಮರಿ ಸುದ್ದಿವಾಹಿನಿಯ ರೂವಾರಿ ಬಾಬಾ ಪ್ರಸಾದ್ ಅರಸ, ಪ್ರಕಾಶ್ ಶೆಟ್ಟಿ ಧರ್ಮನಗರ, ರಾಜೇಶ್ ಕಣ್ಣೂರು, ರಕ್ಷಣ್ ಮಾಡೂರು, ಅಕ್ಷತ್ ವಿಟ್ಲ, ಸುರೇಶ್ ಬಲ್ಮಠ,ಅಭಿಷೇಕ್ ಕುಲಾಲ್, ಚಿತ್ರದ ಸಂಕಲನಕಾರ ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು.
ನವೆಂಬರ್ 7ಕ್ಕೆ ಮಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಗೊಳ್ಳಲಿದ್ದು, ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರು, ರವಿ ರಾಮಕುಂಜ, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರೂಪಾಶ್ರೀ ವರ್ಕಾಡಿ, ಪ್ರಕಾಶ್ ಶೆಟ್ಟಿ ಧರ್ಮನಗರ, ರಕ್ಷಣ್ ಮಾಡೂರು, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳಾರ್ , ದಿಶಾ ರಾಣಿ ಮುಂತಾದವರು ನಟಿಸಲಿದ್ದಾರೆ.