image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತೆರೆಗೆ ಬರಲು ಸಿದ್ಧನಾದ ರಾವುತ

ತೆರೆಗೆ ಬರಲು ಸಿದ್ಧನಾದ ರಾವುತ

ರಾವುತ ಚಿತ್ರವು ಇತ್ತೀಚಿಗೆ ಹಾಡುಗಳು ಬಿಡುಗಡೆ ಮಾಡಿದ್ದು, ಇನ್ನೇನು ತೆರೆಗೆ ಬರಲು ಸಿದ್ಧತೆ ನಡೆಸಿದ್ದಾರೆ ಚಿತ್ರದ ನಿರ್ಮಾಪಕ ಈರಣ್ಣ ಸುಭಾಷ್ ಬಡಿಗೇರ್ ಅವರು. ಉತ್ತರ ಕರ್ನಾಟಕದ ಭಾಷ ಶೈಲಿಯಲ್ಲಿರುವ ಚಿತ್ರ, ಗಂಡುಗಲಿ ಕುಮಾರರಾಮ ಕಾಲಘಟ್ಟದ ಕಥೆಯನ್ನ ಒಳಗೊಂಡ ಚಿತ್ರವಾಗಿದ್ದು, ಇನ್ನೇನು ಚಿತ್ರದ ಪ್ರಮುಖ ವಿಡಿಯೋ ಸಾಂಗ್ ನ್ನು ದೀಪಾವಳಿ ದಿನವೇ ಬಿಡುಗಡೆ ಮಾಡುತ್ತಾರೆ.

ಗುರು ಅಭಿನವ,  ಶ್ರೀ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳ ಅವರ  ಆರ್ಶಿವಾದದೊಂದಿಗೆ ಸಿನಿಮಾ ಬಿಡುಗಡೆ ಮಾಡುತ್ತೇವೆ.  ಕೊಪ್ಪಳದಲ್ಲಿ ಪ್ರೀಮಿಯರ್ ಶೋ ಮಾಡುವುದಾಗಿ ನಿರ್ದೇಶಕ ಸಿದ್ದುವಜ್ರಪ್ಪ ತಿಳಿಸಿದ್ದಾರೆ. ಚಿತ್ರವು ಹಲವಾರು ತಂತ್ರಜ್ಞರಿಂದ, ಸಿನಿಮಾ ವಿತರಣೆಕಾರರಿಂದ ಉತ್ತಮ ಅಭಿಪ್ರಾಯ ಪಡೆದುಕೊಂಡಿದೆ.

ಹಲವಾರು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ರಾವುತ ಮುಂದೆ ರಾಜ್ಯ ಪ್ರಶಸ್ತಿ ಗೆ ಲಗ್ಗೆ ಇಡುವ ವಿಶ್ವಾಸವನ್ನು ನಿರ್ದೇಶಕ ಸಿದ್ದುವಜ್ರಪ್ಪ ವ್ಯಕ್ತಪಡಿಸಿದ್ದಾರೆ. ಆಗಾಗಿ ಚಿತ್ರದ ತಂಡ ಉತ್ತರ ಕರ್ನಾಟಕದ ಕಡೆ ಪಯಣ ಬೆಳಸಲು ಸಿದ್ಧವಾಗಿದೆ. ಚಿತ್ರದ ನಾಯಕ ನಟ ರಾಜ್ ಪ್ರವೀಣ್ ನಟಿಸಿದ್ದು ನಾಯಕಿಯಾಗಿ ಭವಾನಿ ಪುರೋಹಿತ್ ನಟಿಸಿದ್ದಾರೆ. ಸಹನಟರಾಗಿ ನರಸಿಂಹ ಮೂರ್ತಿ, ರಾಘವ್ ಗೌಡಪ್ಪ, ಮಾರೇಶ,ಹರ್ಷ, ಶ್ರೀಶೈಲ, ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತ ಸುಚಿನ್ ಶರ್ಮ ನೀಡಿದ್ದು, ಸಂಕಲನ ಅರವಿಂದ್ ರಾಜ್ ಮಾಡಿದ್ದಾರೆ, ಕಥನ ವಚನ ನಿರ್ದೇಶನ ಸಿದ್ದು ವಜ್ರಪ್ಪ ನಿಭಾಯಿಸಿದ್ದಾರೆ.

Category
ಕರಾವಳಿ ತರಂಗಿಣಿ