ಮುಂಬೈ : ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿರುವ 'ರಾಮಾಯಣ' ಸಿನಿಮಾ, ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು 1,384.50 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 760.60 ಕೋಟಿ ಹಾಗೂ ಗ್ರಾಸ್ 909.00 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಸಾವಿರ ಕೋಟಿ ಕ್ಲಬ್ ಸೇರಲಿದೆ. ಇದಕ್ಕೆ ಪೂರಕವಾಗಿ ಸಾಗರೋತ್ತರ ಮಾರುಕಟ್ಟೆಯಲ್ಲೂ ಸಿನಿಮಾ 475.50 ಕೋಟಿ ರೂಪಾಯಿ ಬಾಚಿಕೊಂಡಿದೆ.
ಮೊದಲ ವಾರದಲ್ಲಿ ಭಾರತದಲ್ಲಿ 564.60 ಕೋಟಿ ನೆಟ್ ಹಾಗೂ 675.05 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಈ ಚಿತ್ರ, ಎರಡನೇ ವಾರಾಂತ್ಯದಲ್ಲೂ (ದಿನ 9 ರಿಂದ 11) ತನ್ನ ಅಬ್ಬರವನ್ನು ಮುಂದುವರಿಸಿದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರದ ಮೂರು ದಿನಗಳಲ್ಲಿ ಒಟ್ಟು 196.00 ಕೋಟಿ ನೆಟ್ ಹಾಗೂ 233.95 ಕೋಟಿ ಗ್ರಾಸ್ ಗಳಿಕೆ ಕಂಡಿದೆ. ವಿಶೇಷವಾಗಿ 11ನೇ ದಿನವಾದ ಭಾನುವಾರ ಒಂದೇ ದಿನ ದೇಶಾದ್ಯಂತ 75.00 ಕೋಟಿ ನಿವ್ವಳ ಹಾಗೂ 89.50 ಕೋಟಿ ಗ್ರಾಸ್ ಗಳಿಕೆ ದಾಖಲಾಗಿದೆ.
11ನೇ ದಿನದ ಭಾಷಾವಾರು ಗಳಿಕೆಯಲ್ಲಿ ಹಿಂದಿ ಆವೃತ್ತಿಯು 55.00 ಕೋಟಿ ರೂಪಾಯಿ ಕಲೆಹಾಕಿ ಮುಂಚೂಣಿಯಲ್ಲಿದೆ. ಉಳಿದಂತೆ ಕನ್ನಡದಲ್ಲಿ 5.75 ಕೋಟಿ, ಮಲಯಾಳಂನಲ್ಲಿ 5 ಕೋಟಿ, ತಮಿಳಿನಲ್ಲಿ 4.75 ಕೋಟಿ ಹಾಗೂ ತೆಲುಗಿನಲ್ಲಿ 4.50 ಕೋಟಿ ರೂಪಾಯಿ ಗಳಿಸುವ ಮೂಲಕ ಎಲ್ಲಾ ಭಾಷೆಗಳಲ್ಲೂ ಚಿತ್ರ ಉತ್ತಮ ಪ್ರದರ್ಶನ ಕಾಯ್ದುಕೊಂಡಿದೆ.