image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ರಾಮಾಯಣ' ಚಿತ್ರದ ಸ್ವೀಡನ್ ಪ್ರದರ್ಶನ: ಪ್ರೇಕ್ಷಕರ ಪ್ರೀತಿ ಹಾಗೂ ಜಟಾಯು ಪಾತ್ರದ ಅನುಭವ ಹಂಚಿಕೊಂಡ ಅನುಪಮ್ ಖೇರ್

'ರಾಮಾಯಣ' ಚಿತ್ರದ ಸ್ವೀಡನ್ ಪ್ರದರ್ಶನ: ಪ್ರೇಕ್ಷಕರ ಪ್ರೀತಿ ಹಾಗೂ ಜಟಾಯು ಪಾತ್ರದ ಅನುಭವ ಹಂಚಿಕೊಂಡ ಅನುಪಮ್ ಖೇರ್

ಮುಂಬೈ : ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಾಣದ 'ರಾಮಾಯಣ: ಪಾರ್ಟ್ 1' ಸಿನಿಮಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನವೆಂಬರ್ 5ರಂದು ಜಾಗತಿಕವಾಗಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿರುವ ಈ ಬೃಹತ್ ಬಜೆಟ್ ಸಿನಿಮಾದಲ್ಲಿ ಹಿರಿಯ ನಟ ಅನುಪಮ್ ಖೇರ್ ಜಟಾಯು ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಚಿತ್ರದ ವಿಶೇಷ ಪ್ರೀಮಿಯರ್ ಪ್ರದರ್ಶನದಲ್ಲಿ ಭಾಗವಹಿಸಿದ್ದ ಅನುಪಮ್ ಖೇರ್, ಅಲ್ಲಿನ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆ ಕಂಡು ಅತ್ಯಂತ ಭಾವುಕರಾಗಿದ್ದಾರೆ. ಚಿತ್ರ ಪ್ರದರ್ಶನದ ಬಳಿಕ ವಿದೇಶಿ ಪ್ರೇಕ್ಷಕರು ಕಣ್ಣೀರಿನೊಂದಿಗೆ ಅವರನ್ನು ಭೇಟಿಯಾಗಿ ಕೈಕುಲುಕಿ, ಜಟಾಯು ಪಾತ್ರದ ಧ್ವನಿ ಹಾಗೂ ಕಥೆಯ ನಿರೂಪಣೆಗೆ ಧನ್ಯವಾದ ತಿಳಿಸಿದರು.

ಸಮಾಜಿಕ ಜಾಲತಾಣಗಳಲ್ಲಿ ಈ ಅನುಭವವನ್ನು ಹಂಚಿಕೊಂಡ ಅನುಪಮ್ ಖೇರ್, "ರಾಮಾಯಣ ಕೇವಲ ಭಾರತದ ಕಥೆಯಲ್ಲ, ಇದು ಭಾಷೆ ಮತ್ತು ಗಡಿಗಳನ್ನು ಮೀರಿದ ಕಾಲಾತೀತ ಮಹಾಕಾವ್ಯ. ಭಾರತದಿಂದ ಹೊರಬಂದ ಇಂತಹ ಶ್ರೇಷ್ಠ ಸಿನಿಮಾ ವಿದೇಶದಲ್ಲೂ ಜನರ ಮನ ಮುಟ್ಟಿರುವುದನ್ನು ಕಂಡು ಭಾರತೀಯನಾಗಿ ಹೆಮ್ಮೆ ಎನಿಸುತ್ತಿದೆ" ಎಂದು ಬರೆದುಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ