ಮಡಿಕೇರಿ ಸುತ್ತಮುತ್ತ ಹಾಗೂ ಭಗವತಿ ಕಾರ್ಟೇಜ್ನಲ್ಲಿ 'ಮೋನಿ ಎಸ್ಟೇಟ್' ಕನ್ನಡ ಚಲನಚಿತ್ರದ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ಮೋನಿ ಸಿನಿ ಕ್ರಿಯೇಶನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮುಹೂರ್ತವು ಕಣ್ಣಳ್ಳಿಯ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ನೆರವೇರಿತ್ತು. ಚಿತ್ರದಲ್ಲಿ ಮೋಹನ್ ನಾಯಕನಾಗಿ ಹಾಗೂ ಸ್ನೇಹ ಜಾದವ್ ನಾಯಕಿಯಾಗಿ ಅಭಿನಯಿಸುತ್ತಿದ್ದು, ಸಹನಿರ್ಮಾಪಕರಾದ ಸಂಜು ಶ್ರೀ ಮಹಾದೇವ್ ಅವರು ಇದೇ ಮೊದಲ ಬಾರಿಗೆ ನಾಯಕರಾಗಿ ಬಣ್ಣ ಹಚ್ಚುತ್ತಿದ್ದಾರೆ. ರಘು ರೂಗಿ (ಹುಬ್ಬಳ್ಳಿ) ಅವರು ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ, ಛಾಯಾಗ್ರಹಣ ಹಾಗೂ ನಿರ್ದೇಶನವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ ನೀಡಿದ್ದು, ಕೃಷ್ಣ ಎಂ. ಚೆನಕೆರೆ ಸಂಕಲನ ಮಾಡಿದ್ದಾರೆ.