image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯಶಸ್ವಿಯಾಗಿ ಎಪ್ಪತ್ತೈದು ದಿನಗಳನ್ನು ಪೂರೈಸಿದ ಕೃಷ್ಣಂ ಪ್ರಣಯ ಸಖಿ

ಯಶಸ್ವಿಯಾಗಿ ಎಪ್ಪತ್ತೈದು ದಿನಗಳನ್ನು ಪೂರೈಸಿದ ಕೃಷ್ಣಂ ಪ್ರಣಯ ಸಖಿ

ತ್ರಿಶೂಲ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ "ಕೃಷ್ಣಂ ಪ್ರಣಯ ಸಖಿ" ಚಿತ್ರ ಯಶಸ್ವಿ ಎಪ್ಪತ್ತೈದು ದಿನಗಳನ್ನು ಪೂರೈಸಿದೆ. ಶತದಿನೋತ್ಸವದತ್ತ ಸಾಗುತ್ತಿದೆ.

ಈಗಲೂ ಕರ್ನಾಟಕದ ಹಲವು ಕಡೆ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಮಾತನ್ನು ದೂರ ಮಾಡಿರುವ ಈ ಚಿತ್ರ, ಫ್ಯಾಮಿಲಿ ಆಡಿಯನ್ಸ್ ನ‌ ಮನ ಗೆದ್ದಿದೆ.‌ ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳಂತೂ ಸಾಮಾಜಿಕ ಜಾಲತಾಣಳಲ್ಲಿ ಹೊಸ ದಾಖಲೆಯನ್ನೇ ನಿರ್ಮಾಣ ಮಾಡಿದೆ. 

 ಚಿತ್ರ ಎಪ್ಪತ್ತೈದು ದಿನಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ, ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಾಯಕ ಗಣೇಶ್, ಚಿತ್ರತಂಡಕ್ಕೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ತುಂಬು‌ ಹೃದಯದ ಧನ್ಯವಾದ ತಿಳಿಸಿದ್ದಾರೆ. .

Category
ಕರಾವಳಿ ತರಂಗಿಣಿ