image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ: ನ್ಯಾಚುರಲ್ ಸ್ಟಾರ್ ನಾನಿ ಮನದಾಳದ ಮಾತು

ಬೆಂಗಳೂರಿಗೆ ಬಂದರೆ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ: ನ್ಯಾಚುರಲ್ ಸ್ಟಾರ್ ನಾನಿ ಮನದಾಳದ ಮಾತು

ಬೆಂಗಳೂರು: ತೆಲುಗು ಚಿತ್ರರಂಗದ ‘ನ್ಯಾಚುರಲ್ ಸ್ಟಾರ್’ ಖ್ಯಾತಿಯ ನಟ ನಾನಿ ಅಭಿನಯದ ಬಹುನಿರೀಕ್ಷಿತ ನೂತನ ಆ್ಯಕ್ಷನ್ ಡ್ರಾಮಾ ‘ದಿ ಪ್ಯಾರಡೈಸ್’ (The Paradise) ಸಿನಿಮಾದ ಪ್ರಚಾರಾರ್ಥವಾಗಿ ಬೆಂಗಳೂರಿನಲ್ಲಿ ಅದ್ಧೂರಿ ಪತ್ರಿಕಾಗೋಷ್ಠಿ ಜರುಗಿತು.

ಕನ್ನಡದಲ್ಲೇ ಪ್ರೀತಿಯಿಂದ ಮಾತು ಆರಂಭಿಸಿದ ನಾನಿ, ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ಇನ್ನಷ್ಟು ಹೆಚ್ಚು ಕನ್ನಡ ಕಲಿಯುವುದಾಗಿ ಭರವಸೆ ನೀಡಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ನಗರಕ್ಕೆ ಬಂದಾಗಲೆಲ್ಲ ಸಿಗುವ ಅದ್ಭುತ ಆತಿಥ್ಯ ಹಾಗೂ ಕನ್ನಡಿಗರ ವಿಶಾಲ ಮನೋಭಾವವನ್ನು ಸ್ಮರಿಸಿದ ಅವರು, "ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಳಿದ ಕ್ಷಣದಿಂದಲೇ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ. ಯಾವುದೇ ಭಾಷೆಯ ಉತ್ತಮ ಚಿತ್ರ ಬಂದರೂ ಪ್ರೀತಿಯಿಂದ ಬೆಂಬಲಿಸುವ ಕನ್ನಡಿಗರ ಹೃದಯವೈಶಾಲ್ಯಕ್ಕೆ ನಾನು ಸದಾ ಚಿರಋಣಿ" ಎಂದರು.

ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ ಅವರು, "ಇದು ನನ್ನ ವೃತ್ತಿಜೀವನದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಅತಿ ಹೆಚ್ಚು ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ ಚಿತ್ರ. ಇದೊಂದು ಪಕ್ಕಾ ತಾಯಿ ಮತ್ತು ಮಗನ ಬಾಂಧವ್ಯದ ಕಥೆಯಾಗಿದ್ದು, ಅದ್ಭುತ ಆ್ಯಕ್ಷನ್ ಎನರ್ಜಿ ಹಾಗೂ ದೃಶ್ಯ ವೈಭವದೊಂದಿಗೆ ತೆರೆಯ ಮೇಲೆ ಮೂಡಿಬಂದಿದೆ.

ಅನಿರುದ್ಧ್ ಸಂಗೀತ ಮತ್ತು ಶ್ರೀಕಾಂತ್ ಅವರ ನಿರ್ದೇಶನವಿರುವ ಈ ಚಿತ್ರದಲ್ಲಿ ಮೋಹನ್ ಬಾಬು, ಸೊನಾಲಿ ಕುಲಕರ್ಣಿ, ರಾಘವ್ ಜುಯಲ್ ಹಾಗೂ ಕಾಯಾಡು ನಟಿಸಿದ್ದಾರೆ. ಸೆಪ್ಟೆಂಬರ್ 24ರಂದು ಸಿನಿಮಾ ದೊಡ್ಡ ಪರದೆಯ ಮೇಲೆ ಅದ್ಭುತ ಅನುಭವ ನೀಡಲಿದೆ" ಎಂದು ತಿಳಿಸಿದರು. ಪೋಸ್ಟರ್‌ನಲ್ಲಿರುವ ವಿಶಿಷ್ಟ ಜಡೆ ಹೇರ್‌ಸ್ಟೈಲ್ ಕುರಿತು ಉತ್ತರಿಸಿ, ಕಥೆಯಲ್ಲಿ ಅದಕ್ಕೆ ಆಳವಾದ ಕಾರಣವಿದೆ ಎಂದರು.

Category
ಕರಾವಳಿ ತರಂಗಿಣಿ