image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಟ ಶಶಿಕುಮಾರ್ ಎನ್‌ಗೆ 'ಬೆಸ್ಟ್ ಪ್ರಾಮಿಸಿಂಗ್ ಆಕ್ಟರ್' ಪ್ರಶಸ್ತಿ

ನಟ ಶಶಿಕುಮಾರ್ ಎನ್‌ಗೆ 'ಬೆಸ್ಟ್ ಪ್ರಾಮಿಸಿಂಗ್ ಆಕ್ಟರ್' ಪ್ರಶಸ್ತಿ

ಶಿವಮೊಗ್ಗ: 2025ನೇ ಸಾಲಿನಲ್ಲಿ ಬಿಡುಗಡೆಯಾದ 'ಅದೊಂದಿತ್ತು ಕಾಲ' ಚಲನಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಶಿವಮೊಗ್ಗದ ಪ್ರತಿಭಾವಂತ ನಟ ಶಶಿಕುಮಾರ್ ಎನ್ ಅವರಿಗೆ "ಬೆಸ್ಟ್ ಪ್ರಾಮಿಸಿಂಗ್ ಆಕ್ಟರ್ ಇನ್ ಕನ್ನಡ ಫಿಲ್ಮ್ ಇಂಡಸ್ಟ್ರಿ - 2026" ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಚಿತ್ರಸಂತೆ ಸಿನಿಮಾ ಸಂಸ್ಥೆಯು ಶಶಿಕುಮಾರ್ ಅವರ ಅಭಿನಯದ ಅದ್ಭುತ ಪ್ರತಿಭೆಯನ್ನು ಗುರುತಿಸಿ ಈ ಗೌರವವನ್ನು ನೀಡಿದೆ. ಕೀರ್ತಿ ನಿರ್ದೇಶನದ ಈ ಚಿತ್ರವನ್ನು ಭುವನ್ ಸುರೇಶ್ ಹಾಗೂ ಗಿರೀಶ್ ನಾಗಪ್ಪ ನಿರ್ಮಿಸಿದ್ದು, ವಿನಯ್ ರಾಜ್‌ಕುಮಾರ್ ನಾಯಕನಾಗಿ ಮತ್ತು ಅದಿತಿ ಪ್ರಭುದೇವ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಜಿ. ಕಾಸರಗೋಡು ಛಾಯಾಗ್ರಹಣ ಹಾಗೂ ರಾಘವೇಂದ್ರ ವಿ. ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ರಸಂತೆ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ವಿ. ಗೌಡ, ನಟ ಪೃಥ್ವಿ ಅಂಬರ್, ನಟಿ ಸಾನ್ವಿ ಶ್ರೀವಾತ್ಸವ ಹಾಗೂ ಪ್ರಸಿದ್ಧ ಸಂಗೀತ ನಿರ್ದೇಶಕ ಮನೋಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಿವಮೊಗ್ಗ ಮೂಲದ ಕಲಾವಿದನಿಗೆ ಲಭಿಸಿರುವ ಈ ಗೌರವವು ಜಿಲ್ಲೆಯ ಕಲಾಭಿಮಾನಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

Category
ಕರಾವಳಿ ತರಂಗಿಣಿ