image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರತನ್ ಟಾಟಾ ಎಂಬ ಭಾರತದ ರತ್ನ...

ರತನ್ ಟಾಟಾ ಎಂಬ ಭಾರತದ ರತ್ನ...

 

ಭಾರತದ ಅತ್ಯಂತ ಗೌರವಾನ್ವಿತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ಮತ್ತು ಟಾಟಾ ಸನ್ಸ್ನ ಮಾಜಿ ಅಧ್ಯಕ್ಷರಾದ ರತನ್ ಟಾಟಾ ಇಂದು ನಮ್ಮೊಡನೆ ಇಲ್ಲ. ನಮಗೇನು ಹತ್ತಿರದ ಸಂಬAಧಿಯಲ್ಲ. ಅಕ್ಕ ಪಕ್ಕದವರಲ್ಲ, ಎಲ್ಲೋ ದೂರದಲ್ಲಿ ನೋಡಿದವರಲ್ಲ. ಆದರೂ ಅದೇಕೋ ಸುದ್ದಿ ಕೇಳುತ್ತಿದ್ದಂತೆ ಬೇಜಾರಾಯಿತು. ಆದರೂ ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ದೇವರ ಪಾದ ಸೇರಲೇ ಬೇಕು.  ಭಾರತದ ನೆಲದಲ್ಲಿ ಹುದುಗಿದ್ದ ಅಮೂಲ್ಯ ರತ್ನವೊಂದು ಮರೆಯಾದ ಭಾವ ಮೂಡಿದೆ. ರತನ್ ಟಾಟಾ ಅವರಿಗೆ ಅವರ ದೇಶ ಪ್ರೇಮ ಮತ್ತು ನಮ್ಮೆಜಮಾನರಿಗೆ ರತನ್ ಟಾಟಾ ಮೇಲಿದ್ದ ಗೌರವದಿಂದ ನಮ್ಮನೆ ಮುಂದೆ ಟಾಟಾ ಬ್ರಾಂಡಿನ ಕಾರು ನಿಂತಿದೆದಿಂತಹ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ  ಟಾಟಾ ಎನ್ನುವ ಹೆಸರಿನೊಂದಿಗೆ ಲಕ್ಷಾಂತರ ಕುಟುಂಬಗಳು ಬದುಕುತ್ತಿದೆ. ಎಸ್‌ಬಿಐ ಕಾರ್ಡ್ಸ್ ನಲ್ಲಿ ಕೆಲಸ ಮಾಡುತ್ತಿರುವಾಗ ಟಾಟಾ ಕಂಪನಿ ಒಡನಾಟ ಹೆಚ್ಚಾಗಿತು. ಬೆಂಗಳೂರಿನಲ್ಲಿ ಇದ್ದ ಎಲ್ಲಾ ಟಾಟಾ ಕಂಪನಿಗಳಿಗೆ ನಮಗೆ ಮುಕ್ತ ಪ್ರವೇಶವಿದ್ದ ಕಾರಣ ಕೆಲಸದ ಮೇಲೆ ಆಗಾಗ ವಿಸಿಟ್ ಮಾಡುತ್ತಿದ್ದೆ. ಅಲ್ಲಿನ ನೌಕರರಿಗೆ ದೊರಕುತ್ತಿದ್ದ ಸೌಲಭ್ಯಗಳು ಇನ್ನಾವುದು ಆ ಮಟ್ಟಿನ ಕಂಪನಿಗಳಲ್ಲಿ ದೊರಕುತ್ತಿದ್ದ ಹಾಗೆ ಕಾಣುತ್ತಿರಲಿಲ್ಲ. ರತನ್ ಟಾಟಾ ಬಂಗಾರದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದರೂ, ಐಷಾರಾಮಿ ಜೀವನದಿಂದ ದೂರ ಇದ್ದರವರು ಎನ್ನುವುದು ವಿಶೇಷ. 1937ರಲ್ಲಿ ಜನಿಸಿದ ರತನ್‌ಜಿ ಕೇವಲ 10 ವರ್ಷದವನಿದ್ದಾಗ ಅವರ ಹೆತ್ತವರು ಒಬ್ಬರಿಗೊಬ್ಬರು ಬೇರ್ಪಟ್ಟ ನಂತರ, ಅವರನ್ನು ಅವರ ಅಜ್ಜಿ ನವಾಜ್ಬಾಯಿ ಟಾಟಾ ಬೆಳೆಸಿದರು. ಅವರ ಅಜ್ಜಿಯೊಂದಿಗಿನ ಈ ಬಲವಾದ ಸಂಬAಧವು ಟಾಟಾ ಅವರು ಚಿಂತನಶೀಲ ಮತ್ತು ವಿನಮ್ರ ನಾಯಕರಾಗಲು ಸಹಾಯ ಮಾಡುವ ಪೋಷಣೆ ವಾತಾವರಣವನ್ನು ಒದಗಿಸಿತು ಎಂದರೆ ತಪ್ಪಾಗಲಾರದು.

 

1991ರಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ರತನ್ ಟಾಟಾ ಅವರ ಹೊಸ ಪ್ರಯಾಣ ಪ್ರಾರಂಭವಾಯಿತು. ಭಾರತದ ಆರ್ಥಿಕ ಉದಾರೀಕರಣದ ಅವಧಿಯಲ್ಲಿ ಗುಂಪನ್ನು ಮುನ್ನಡೆಸಿದರು. ಅವರ ನಾಯಕತ್ವದಲ್ಲಿ, ಟಾಟಾ ಗ್ರೂಪ್ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡಿತ್ತು.  ಇದರಲ್ಲಿ ಟೆಟ್ಲಿ, ಕೋರಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್‌ನಂತಹ ಅಂತರರಾಷ್ಟ್ರೀಯ ದೈತ್ಯರನ್ನು ಸ್ವಾಧೀನಪಡಿಸಿಕೊಂಡಿದೆ. ರತನ್ ಟಾಟಾ ವ್ಯವಹಾರ ಮತ್ತು ಸಮಾಜಕ್ಕೆ ಅವರ ಗಮನಾರ್ಹ ಕೊಡುಗೆಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ರತನ್ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ, ಬಿ.ಎಸ್ಸಿ ಆರ್ಕಿಟೆಕ್ಚರ್, ವಿಷಯವನ್ನು ತೆಗೆದುಕೊಂಡು, 1962 ರಲ್ಲಿ ಪಾಸ್ ಮಾಡಿದರು. ಬೃಹತ್ ಟಾಟಾ ಉದ್ಯಮದ ನಿರ್ದೇಶಕರಲ್ಲಿ, ರತನ್ ಒಬ್ಬರೇ ಅತ್ಯಂತ ಹೆಚ್ಚು ಓದಿಕೊಂಡಿರುವವರು.  ಜೆ. ಆರ್.ಡಿ.ಟಾಟಾ ರವರು, ತಮ್ಮ ಛೇರ್ಮನ ಹುದ್ದೆಯನ್ನು ರತನ್ ರವರಿಗೆ, 1991 ರಲ್ಲಿ ಒಪ್ಪಿಸಿ, ಅವರಿಗೆ ಟಾಟಾ ಉದ್ಯಮದ ಸರ್ವಾಧಿಕಾರವನ್ನು ಕೊಟ್ಟರು. ರತನ್ ಅಧಿಕಾರಕ್ಕೆ ಬಂದ ಸ್ವಲ್ಪ ಸಮಯದಲ್ಲೇ, ಟಿ.ಸಿ ಎಸ್ ಕಂಪೆನಿಯನ್ನು ಪಬ್ಲಿಕ್ ಶೇರ್ ಕಂಪೆನಿಯಾಗಿ ಪರಿವರ್ತಿಸಿದರು. ಟಾಟಾ ಮೋಟರ್ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಛೇಂಜ್‌ನಲ್ಲಿ ಸೇರ್ಪಡೆಯಾಯಿತು.

ಟಾಟಾ ಉದ್ಯಮಗಳಾದ ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಟ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿ, ಕಂಪೆನಿಯ ಲಾಭಾಂಶವನ್ನು ಹೆಚ್ಚಿಸಿದರು. ಟಾಟಾ ವಾಣಿಜ್ಯ ಪರಿವಾರ, ಈಗಾಗಲೇ ವಿಶ್ವದ ೫೦ ವಿದೇಶಿ ಸಂಸ್ಥೆಗಳಲ್ಲಿ, ತನ್ನ ಬಂಡವಾಳವನ್ನು ಹಾಕಿ ಯಶಸ್ವಿಯಾಗಿ ವಹಿವಾಟು ನಡೆಸುತ್ತಿದೆ.  ರತನ್ ಟಾಟಾರವರಿಗೆ, ದೇಸಿ ಕಾರೊಂದನ್ನು ಟಾಟಾ ಕಂಪೆನಿ ತಯಾರಿಸಿ ದೇಶಕ್ಕೆ ಒಪ್ಪಿಸಬೇಕೆಂಬ ಆಕಾಂಕ್ಷೆ ಬಹಳ ಸಮಯದಿಂದ ಇತ್ತು. ಟಾಟಾ ಇಂಡಿಕ ತಯಾರಿಕೆಯಿಂದಾಗಿ ಆ ಕನಸು ಸಾಕಾರವಾಯಿತು. ನಂತರ ಲಕ್ಷ ಬೆಲೆಯ ನ್ಯಾನೋ ಕಾರನ್ನು ಪರಿಚಯಿಸಿದರು.

ರತನ್ ಟಾಟಾ ತಮ್ಮ ಕಂಪನಿ ತಯಾರಿಸಿರುವ ಹೊಸ ನ್ಯಾನೋ ಕಾರಿನ ಬಗ್ಗೆ ಜನ ಸಾಮಾನ್ಯರೊಟ್ಟಿಗೆ ಪ್ರಸ್ತಾವನೆ ಮಾಡುತ್ತಾ ಹೇಳಿದ್ದಾರೆ "ತಮ್ಮ ನ್ಯಾನೋ ಕಾರು ಎಲ್ಲಾ ರಕ್ಷಣಾ ಸೌಕರ್ಯಗಳನ್ನು, ಮಾಲಿನ್ಯಕಾರಕ ಹೊಗೆಯುಗುಳುವ ಪ್ರಮಾಣ ಹಾಗು ಮಾಲಿನ್ಯಕ್ಕೆ ಕಾರಣಕಾರಕಗಳ ಬಗ್ಗೆ ಬಹಳಷ್ಟು ಗಮನ ಹರಿಸಿ ತಯಾರಾಗಿರುವುದು ಹಾಗು ದ್ವಿಚಕ್ರ ವಾಹನಗಳಿಗಿಂತ ಕಡಿಮೆ ಮಾಲಿನ್ಯವನ್ನಷ್ಟೇ ಉಂಟುಮಾಡುತ್ತವೆ" ಎಂದಿದ್ದರು. ಹೀಗೆ ರತನ್ ಟಾಟಾರವರ ಬಗ್ಗೆ ಹೇಳುತ್ತಾ ಹೋದರೆ ಅದೆಷ್ಟು ಪುಸ್ತಕವನ್ನು ಬರೆಯಬಹುದೋ. ಈಗ ರತನ್ ಟಾಟಾ ಎನ್ನುವ ರತ್ನ ಅಸ್ತಂಗತವಾಗಿದೆ. ದೇಶಕ್ಕೆ ದೇಶವೇ ಮರುಗಿದೆ. ಈಗ ಜನರಿಗೆ ಅವರ ಸುಮಾರು ನಾಲ್ಕು ಸಾವಿರ ಕೋಟಿ ಆಸ್ತಿಯ ವಾರಸುದಾರರು ಯಾರು ಎನ್ನುವ ಕುತೂಹಲ ಕಾಡ ತೊಡಗಿದೆ. ಮನುಷ್ಯ ಏನೆ ಆಸ್ತಿ ಮಾಡಿದರೂ ಕೊನೆಗೆ ಬರೀ ಕೈಯಲ್ಲಿ ಹೊರಡುವುದಷ್ಟೇ ಉಳಿಯುವುದು. ಅದರ ನಡುವೆ ನಾವು ಮಾಡುವ ಒಳ್ಳೆಯ ಕೆಲಸ ಇತಿಹಾಸದ ಪುಟದಲ್ಲಿ ಮಿರುಗುತ್ತಿರುತ್ತದೆ.  

Category
ಕರಾವಳಿ ತರಂಗಿಣಿ