image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?

ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತನ್ನು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಈ ಗಾದೆಗಳು ಹಿರಿಯರು ತಮ್ಮ ಸ್ವಂತ ಅನುಭವದಿಂದ ಹೇಳಿದ ನುಡಿಮತ್ತುಗಳು. ಒಂದು ಗಿಡವನ್ನು ನಮಗೆ ಬೇಕಾದಂತೆ ಬಗ್ಗಿಸಬೇಕಾದರೆ ಅದು ಎಳವೆಯಲ್ಲಿರುವಾಗಲೇ ಸಾದ್ಯ. ಗಿಡವು ಮರವಾಗಿ ಬೆಳೆದ ಮೇಲೆ ಬಗ್ಗಿಸಲು ಸಾಧ್ಯವಿಲ್ಲ. ಅದೇ ರೀತಿ ಮಕ್ಕಳಿಗೆ ಬಾಲ್ಯದಲ್ಲೇ ಒಳ್ಳೆಯ ಬುದ್ದಿ ಹಾಗೂ ಸಂಸ್ಕಾರಗಳನ್ನು ಕಲಿಸಿ ಅವರ ವ್ಯಕ್ತಿತ್ವವನ್ನು ರೂಪಿಸಬೇಕು ಎನ್ನುವ ವಿಷಯಕ್ಕೆ ಮಕ್ಕಳನ್ನು ಗಿಡಕ್ಕೆ ಹೋಲಿಸಿ ತುಂಬಾ ಚೆನ್ನಾಗಿ ಹೇಳಿದ್ದಾರೆ. ಮಕ್ಕಳು ಬೆಳೆದ ಮೇಲೆ ತಿದ್ದುವುದು ಅಸಾಧ್ಯ. ಹಾಗೆಯೇ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಗಾದೆ ಮಾತು ಇದೇ ಅರ್ಥವನ್ನು ಕೊಡುವುದರಲ್ಲಿ ಸಂದೇಹವಿಲ್ಲ. ಮೊಳಕೆ ಸಿರಿ ಒಡೆದು ಗಿಡವಾಗುವಾಗಲೇ ಅದರ ಅಭಿವೃದ್ದಿ ಗೊತ್ತಾಗುತ್ತದೆಯಂತೆ.  ಬಾಲ್ಯದಲ್ಲಿ ಹಿರಿಯರು ಹೇಳಿದ್ದನ್ನು ಹಾಗೂ ಕಲಿಸಿದ್ದನ್ನು  ಮಕ್ಕಳು ಬೇಗನೆ ಕಲಿತುಕೊಳ್ಳುತಾÀ್ತರೆ. ಮಕ್ಕಳು ದೇವರ ಸಮಾನ. ಮಕ್ಕಳು ಬಡವರದಾಗಲಿ, ಶ್ರೀಮಂತರದೇ ಆಗಲಿ ಆ ಮಕ್ಕಳು ಎಂದಿಗೂ ಕೆಟ್ಟವರಿರಲು ಸಾದ್ಯವಿಲ್ಲ. ಆದರೆ ಅವರ ಸುತ್ತಮುತ್ತಲಿನ ಪರಿಸರ ಅವರನ್ನು ಕೆಟ್ಟವರಾಗಿ ಅಥವ ಒಳ್ಳೆಯವರಾಗಿ ತಯಾರು ಮಾಡುತ್ತದೆ. ಹಾಗಾಗಿ ಮಕ್ಕಳ ಮುಂದೆ ಹೆತ್ತವರು ಒಳ್ಳೆಯ ಮಾತನ್ನಾಡಬೇಕು. ಒಳ್ಳೆಯ ಕಾರ್ಯಗಳನ್ನು ಮಾಡಬೇಕು.   ಹಿರಿಯರ, ಹೆತ್ತವರ ನಡೆ-ನುಡಿ ಹಾಗೂ ಸಂಸ್ಕಾರಗಳನ್ನು ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳುತ್ತಾರೆ. ಹೆತ್ತವರು ಯಾವ ದಾರಿಯಲ್ಲಿ ನಡೆಯುತ್ತಾರೋ ಅದೇ ನಡೆಯಲ್ಲಿ ಮಕ್ಕಳು ನಡೆಯುವುದರಲ್ಲಿ ಸಂದೇಹವಿಲ್ಲ. ಇನ್ನು ಮಕ್ಕಳ ಮುಂದೆ ಬೇಡದ ಪದ ಪ್ರಯೋಗಗಳನ್ನು ಮಾಡಿದರೆ ನಾಳೆ ಆ ಮಗು ಖಂಡಿತವಾಗಿ ಅದೇ ಪದವನ್ನು ನಕಲು ಮಾಡುತ್ತದೆ. ಮುಂದೊAದು ದಿನ ಹೆತ್ತವರಿಗೂ ಇಂತಹ ಪದ ಬಳಕೆ ಮಾಡದೇ ಇರುವುದಿಲ್ಲ.  ಆಮೇಲೆ ನನ್ನ ಮಗನೋ ಮಗಳು ಇಂತಹ ಮಾತುಗಳನ್ನಾಡುತ್ತಿದ್ದಾರೆ ಎಂದು ತಲೆಯ ಮೇಲೆ ಕೈ ಹೊತ್ತು ಕೂತರೆ ಪ್ರಯೋಜನವಿಲ್ಲ. ಕಾರಣ ಅದಕ್ಕೆ ಜವಾಬ್ಧಾರರು ನಾವೇ. ತಮ್ಮ ಮಕ್ಕಳ ಮುಂದೆ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ಆ ಮಕ್ಕಳು ಕೂಡ ನಾಳೆ ಇಂತಹದೇ ಬುದ್ದಿಯನ್ನು ಕಲಿತುಕೊಳ್ಳುವುದರಲ್ಲಿ ಸಂದೇಹವಿಲ್ಲ.  ಹೆತ್ತವರಿಗೆ ಮಕ್ಕಳಲ್ಲಿ ತಪ್ಪು ಕಂಡುಬAದರೆ ಕೂಡಲೇ ತಿದ್ದಿ, ಬುದ್ಧಿ ಹೇಳಿ ಸರಿ ದಾರಿಗೆ ತರಬೇಕು. ಮಗು ಬೆಳೆದು ದೊಡ್ಡವನಾದ ಮೇಲೆ ತಿದ್ದಲಾಗದು. ಮಕ್ಕಳು ಚಿಕ್ಕವರಾಗಿರುವಾಗಲೇ ಅವರಿಗೆ ಉತ್ತಮ ವಿಚಾರವನ್ನು ತಿಳಿಸಿಕೊಡಬೇಕು . ಇಲ್ಲವಾದಲ್ಲಿ ದೊಡ್ಡವರಾದ ಮೇಲೆ ತಪ್ಪುಮಾರ್ಗ ಹಿಡಿದಿದ್ದಾರೆಂದು ತಿದ್ದಲು ಹೋದರೆ ಅದು ಸಾಧ್ಯವಾಗುವುದಿಲ್ಲ. ಮಕ್ಕಳು ಚಿಕ್ಕವರಿರುವಾಗ ಕಳ್ಳತನ ತಪ್ಪು ಎಂಬುದನ್ನು ತಿಳಿಸಿ ಹೇಳಬೇಕು . ಬದಲಾಗಿ ಮಗು ಕದ್ದು ತಂದಿದೆ ಎಂದು ಗೊತ್ತಿದ್ದರೂ ತಿದ್ದದೆ ಹಾಗೆ ಬಿಟ್ಟರೆ , ಇಂದು ಬಳಪ ಕದ್ದ ಮಗು ಮುಂದೆ ಕಳ್ಳತನವನ್ನೇ ದುಡಿಮೆಯ ಮಾರ್ಗವಾಗಿಸಿಕೊಳ್ಳಬಹುದಾಗಿದೆ. ಆಗ ನೀನು ಮಾಡುತ್ತಿರುವುದು ತಪ್ಪೆಂದು ಹೊಡೆದರೂ, ಬಾಯಿಗೆ ಬಂದAತೆ ಬೈದರೂ ತಿದ್ದಲೂ ಸಾಧ್ಯವಾಗುವುದಿಲ್ಲ , ಆದ್ದರಿಂದ ಎಳೆಯರಾಗಿದ್ದಾಗಲೇ ಮಕ್ಕಳನ್ನು ಸರಿಯಾದ ದಾರಿಗೆ ತರುವ ಪ್ರಯತ್ನ ಮಾಡಬೇಕು. ಒಂದು ಮರದಲ್ಲಿ ನಮಗೆ ಉತ್ತಮವಾದ ಫಲ ಸಿಗಬೇಕಾದರೆ ನಾವು ಸಣ್ಣ ಸಸಿಯಿಂದಲೇ ಅದಕ್ಕೆ ಒಳ್ಳೆಯ ಗೊಬ್ಬರ, ನೀರುಣಿಸಬೇಕು. ಅಂತೆಯೇ ನಮ್ಮ ಮಕ್ಕಳು ಉತ್ತಮರಾಗಬೇಕಾದರೆ ನಾವು ಅವರಿಗೆ ಸಣ್ಣ ವಯಸ್ಸಿನಲ್ಲಿಯೆ ಒಳ್ಳೆಯ ಸಂಸ್ಕಾರ, ಪ್ರೀತಿ, ಮಮತೆ, ಕರುಣೆ ಮತ್ತು ವಿನಯತೆ ಎಂಬ ಮಾನವೀಯ ಗುಣಗಳನ್ನು ತಿಳಿಸಿ, ಪೀತಿಯಿಂದ ಬಂಧಿಸಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಆದುದರಿಂದ ಎಲ್ಲಾ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಸಿಗಬೇಕಾದ ಆ ಪ್ರೀತಿ, ಮಮತೆ, ವಾತ್ಸಲ್ಯ ಹಾಗು ಸತ್ಕಾರವನ್ನು ನೀಡಬೇಕು. ಇದರಿಂದ ಒಂದು ಒಳ್ಳೆಯ ಕುಟುಂಬದ ನಿರ್ಮಾಣ ಆಗುತ್ತದೆ. ಅದರ ಜತೆಗೆ ಬೆಳೆಯುತ್ತಿರುವ ಕೆಟ್ಟ ಸಮಾಜಕ್ಕೆ ಸಹ ಕಡಿವಾಣ ಹಾಕಬಹುದು.  ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಒಂದು ವೇಳೆ ಅನುಪಯುಕ್ತ ಅಥವಾ ವಿಷದ ಗಿಡವಾಗಿದ್ದರೆ ಅದನ್ನು ಮೊಳಕೆಯಲ್ಲೇ ಚಿವುಟಿಬಿಡಬಹುದು. ಹಾಗೆಯೇ ಇದರ ಹೋಲಿಕೆಯನ್ನು ಹಿರಿಯರು ನಮ್ಮ ಬೆಳೆಯುತ್ತಿರುವ ಮಕ್ಕಳ ಕುರಿತು ಹೇಳಿದ್ದಾರೆ. ಬೆಳೆಯುತ್ತಿರುವ ಮಕ್ಕಳು ಯಾವುದರಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅದು ಅವರ ಏಳಿಗೆಗೆ ಪೂರಕವೋ ಅಥವಾ ಮಾರಕವೋ ಎಂದು ತಿಳಿದುಕೊಂಡರೆ ಮುಂದೆ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ. ಒಂದು ವೇಳೆ ಅವರು ದಾರಿ ತಪ್ಪುತ್ತಿದ್ದರೆ ತಕ್ಷಣವೇ ಸರಿ ದಾರಿಗೆ ತರಬಹುದು. ಅಥವಾ ಅವರಲ್ಲಿ ಯಾವುದಾದರೂ ಒಳ್ಳೆಯ ಕಲೆ ಇರಬಹುದು ಅದನ್ನು ಗುರುತಿಸಿ ಮುಂದೆ ಅದರಲ್ಲಿ ಸಾಧನೆ ಮಾಡಲು ಮಕ್ಕಳನ್ನು ಪ್ರೇರೇಪಿಸಬಹುದು. ಮಕ್ಕಳಿಗೆ ಯಾವ ವಿಷಯದಲ್ಲಿ ಅತಿಯಾದ ಒಲವಿರುತ್ತದೋ ಅದೇ ದಾರಿಯಲ್ಲಿ ಬಿಡಬೇಕು. ಉದಾಹರಣೆಗೆ ಕೆಲವು ಮಕ್ಕಳಿಗೆ ವಿದ್ಯೆ ಹೆಚ್ಚು ತಲೆಗೆ ಹತ್ತುವುದಿಲ್ಲ ಸಾಮಾನ್ಯ ಅಂಕಗಳೊAದಿಗೆ ತೇರ್ಗಡೆ ಆಗುತ್ತಿರುತ್ತಾನೆ ಆದರೆ ಆಟೋಟದಲ್ಲಿ ತುಂಬಾ ಮುಂದಿರಬಹುದು. ಅಂತಹ ಮಕ್ಕಳನ್ನು ಅವರ ಇಚ್ಚೆಯಂತೆ ಬಿಟ್ಟರೆ  ಆಟೋಟ ಸ್ಪರ್ದೆಯಲ್ಲಿ ಎತ್ತರದ ಸ್ಥಾನಕ್ಕೆ ಬೆಳೆಯಬಹುದು. ಬೆಳೆಯುವ ಮಕ್ಕಳ ನಡತೆ  ಪೋಷಕರಾದವರು ಗುರುತಿಸಬೇಕಾದ ಬಹು ಮುಖ್ಯ ಅಂಶ. ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಮಗುವಾಗಿದ್ದಾಗಲೇ ಸರಿಯಾದ ಸಮಯ ಎಂಬುದು ಈ ಗಾದೆಯ ಒಳಾರ್ಥ. ನಮ್ಮ ಹಿರಿಯರು ಹಾಕಿಕೊಟ್ಟ ನೆಲೆಯಲ್ಲಿ ನಡೆದು ನಮ್ಮ ಮುಂದಿನ ಪೀಳಿಗೆಗೆ ದಾರದೀಪವಾಗೋಣ.. 

Category
ಕರಾವಳಿ ತರಂಗಿಣಿ