ಉತ್ತಮ ಸಮಾಜದ ನಿರ್ಮಾಣ ಎನ್ನುವುದೇ ಉತ್ತಮ ರಾಷ್ಟ್ರದ ನಿರ್ಮಾಣವೆಂದು ಹೇಳಬಹುದು. ಸಮಾಜವೆಂದರೆ ಒಬ್ಬನಲ್ಲ. ಇದು ಒಂದು ಸಮೂಹ. ಇಲ್ಲಿ ಪರಸ್ಪರ ಸುಖ ಶಾಂತಿಯನ್ನು ಬಯಸುವುದರ ಮೂಲಕ ತನ್ನ ಸುತ್ತಲಿನವರಿಗೂ ತೊಂದರೆಯಾಗದೇ , ತಾನು ಎಂಬ ಸಂಕುಚಿತ ಮನೋಭಾವನೆಯನ್ನು ಬಿಟ್ಟು ತನ್ನ ಸಮಾಜ, ತನ್ನ ದೇಶ ಎಂಬ ವಿಶಾಲ ದೃಷ್ಟಿಯುಳ್ಳ ವ್ಯಕ್ತಿಗಳ ಸಮೂಹವನ್ನು ಮಾತ್ರ ನಾವು ಅತ್ಯುತ್ತಮ ಸಮಾಜವೆಂದು ಕರೆಯಬಹುದು. ಒಂದು ಮನೆಯು ಗಟ್ಟಿಯಾಗಿ ನಿಲ್ಲಬೇಕಾದರೆ ಪಂಚಾAಗದಿAದ ಹಿಡಿದು, ಅದರ ಒಂದೊAದು ಇಟ್ಟಿಗೆಯನ್ನು ಅವಲಂಬಿಸಿಕೊAಡಿರುವುದೋ,. ಹಾಗೆ ಸಮಾಜದ ಅಸ್ತಿತ್ವವು ಪ್ರತಿಯೊಬ್ಬ ವ್ಯಕ್ತಿಗಳನ್ನೂ ಆಧರಿಸಿದೆ. ಬಡವನಾಗಲೀ ಬಲ್ಲಿದನಾಗಲೀ ಅವನು ತನ್ನ ಸಾಮಾಜಿಕ ಕರ್ತವ್ಯವನ್ನು ಮರೆತನೆಂದರೆ ಸಮಾಜದ ಹಾಗೂ ದೇಶದ ಏಳಿಗೆಗೆ ಘಾಸಿಗೊಳಿಸಿದಂತೆ. ಹಾಗೆ ನಮ್ಮ ಸಮಾಜ, ದೇಶದ ಭವಿಷ್ಯತ್ತು ಯುವಜನರ ಕೈಯಲ್ಲಿರುತ್ತದೆ. ಅದಕ್ಕೆ ಸ್ವಾಮಿ ವಿವೇಕಾನಂದರು “ಏಳಿ, ಎದ್ದೇಳಿ ಎಚ್ಚರಗೊಳ್ಳಿರಿ ಗುರಿಮುಟ್ಟುವ ತನಕ ನಿಲ್ಲದಿರಿ” ಎಂದು ಭಾರತದ ಯುವಜನತೆಗೆ ಕರೆ ನೀಡಿದ್ದಾರೆ. ನಮ್ಮ ಯುವಪೀಳಿಗೆ ಅಳಿಲ ಸೇವೆಯನ್ನು ಸಲ್ಲಿಸಿದರೂ, ಉತ್ತಮ ಸಮಾಜದ ನಿರ್ಮಾಣದ ಕಾರ್ಯ ಸುಗಮವಾಗುತ್ತದೆ. ನಮ್ಮ ಸಮಾಜದಲ್ಲಿ ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಅನಾಚಾರ, ಅಸಮಾನತೆ, ನಿರುದ್ಯೋಗ, ದೌರ್ಜನ್ಯ, ದಬ್ಬಾಳಿಕೆಗಳನ್ನು ನಿಯಂತ್ರಿಸಬೇಕಾಗಿದೆ. ನಶಿಸಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಉಳಿಸಬೇಕಾಗಿರುವ ಜವಾಬ್ದಾರಿ ನಮ್ಮೆಲ್ಲರದ್ದು ಎನ್ನುವುದನ್ನು ನಾವು ಮೊದಲು ಮನಗಂಡು ಸುಸಂಸ್ಕೃತವಾಗಿ ತನ್ನ ನಡೆ, ನುಡಿ, ಕಾರ್ಯ ತತ್ಪರತೆಗಳ ಕುರಿತು ಯೋಚಿಸಿ, ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕು.. ತನ್ನ ಸುತ್ತ ಮುತ್ತಲಿನ ವಾತಾವರಣವನ್ನು ದೇಶದ ಅಭಿವೃದ್ದಿಗೆ ನೆರವಾಗುವಂತೆ ಮುನ್ನಡೆಸುವುದು ನಮ್ಮ ಆದ್ಯ ಕರ್ತವ್ಯ ಎನ್ನುವುದನ್ನು ಮರೆಯಬಾರದು. ಇಂದು ನಾಗರೀಕತೆ ಹೆಚ್ಚಿದಂತೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಅಪ್ಪ ಅಮ್ಮ ತನ್ನ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು. ಅಪ್ಪ ಅಮ್ಮನೇ ತನ್ನ ಹೆಣ್ಣು ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗುವಾಗ ತುಂಡು ಚಡ್ಡಿಯಂತಹ ವಸ್ತç ಹಾಕಿಸಿಕೊಂಡು ಹೋದಾಗ ಮುಂದೆ ಅದೇ ಮಗು ಬೆಳೆದು ದೊಡ್ಡವಳಾದ ಮೇಲೆ ಅವಳಿಗೆ ವಸ್ತç ಸಂಹಿತೆಯ ಬಗ್ಗ ಪಾಠ ಮಾಡಿದರೆ ಅದನ್ನು ಒಪ್ಪಕೊಳ್ಳಲು ಆ ಹೆಣ್ಣು ಮಗಳು ಸಿದ್ದರಿರಬಹುದೇ?. ಈಗ ಆಗುತ್ತಿರುವುದು ಅದೇ. ಚಿಕ್ಕ ವಯಸ್ಸಿನಲ್ಲಿ ಇಲ್ಲದ ಸಂಹಿತೆಯನ್ನು ಈಗ ಅವಳ ಮೇಲೆ ಹೇರಿದಾಗ “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ” ಎನ್ನುವ ಹಾಗೆ ಅವಳು ಅದರ ವಿರುದ್ದ ಸಟೆದು ನಿಲ್ಲುತ್ತಿದ್ದಾಳೆ. ಅದರ ಬದಲು ಮಕ್ಕಳು ಚಿಕ್ಕವರಿದ್ದಾಗಲೇ ಅಪ್ಪ ಅಮ್ಮ ತಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿದರೆ ಇಂತಹ ಪರಿಸ್ಥಿತಿಗಳು ಬರುವುದಿಲ್ಲ. ಇನ್ನು ಗಂಡು ಮಕ್ಕಳಿಗೆ ತನ್ನ ಮನೆಯ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದರ ಜೊತೆಗೆ ಸಮಾಜದ ಹೆಣ್ಣು ಮಕ್ಕಳಿಗೂ ಮರ್ಯಾದೆ ಕೊಡುವುದನ್ನು ಕಲಿಸಬೇಕಾಗಿದೆ. ಇಲ್ಲದೇ ಹೋದಲ್ಲಿ, ಈ ಸಮಾಜದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಯಲು ಸಾದ್ಯವಿಲ್ಲ ಎನ್ನುವುದು ನನ್ನ ಅನಿಸಿಕೆ. ಇನ್ನು ಯಾವಾಗ ನಮ್ಮ ಜನ, ನಮ್ಮ ಸಂಸ್ಕೃತಿ, ನಮ್ಮ ದೇಶ ಎನ್ನುವ ಅಬಿಮಾನ ನಮ್ಮಲ್ಲಿ ಹುಟ್ಟುತ್ತದೋ ಆಗ ಮಾತ್ರ ನಮ್ಮ ಸಮಾಜ ಸ್ವಾಸ್ಥವಾಗಿರಲು ಸಾದ್ಯ. ಹಾಗೆ ಧರ್ಮದ ವಿಷಯಕ್ಕೆ ಬಂದಾಗ ನಮ್ಮ ಧರ್ಮವನ್ನು ತನ್ನ ತಾಯಿಯಂತೆ ಪ್ರೀತಿಸಬೇಕು ಹಾಗೆಯೇ ಪರರ ಧರ್ಮವನ್ನು ಗೌರವಿಸಬೇಕು ಎಂದು ನಮ್ಮ ಹಿರಿಯರು ಆಗಾಗ ಹೇಳಿದ್ದಾರೆ ಆದರೆ ನಮ್ಮ ಯುವ ಪೀಳಿಗೆ ತನ್ನ ತಾಯಿಯನ್ನು ಪ್ರೀತಿಸುವ ಬದಲು ಪರರ ತಾಯಿಯನ್ನು ಪ್ರೀತಿಸಲು ಹೊರಟು, ಮುಂದೊAದು ದಿನ ಅದರಿಂದ ನೋವು ಅನುಭವಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಸೃಷ್ಠಿಯಲ್ಲಿ ವಾಸಿಸುತ್ತಿರುವ ಎಲ್ಲಾ ಜೀವಿಗಳಿಗೂ ಅದರದೇ ಆದ ಮೂಲಭೂತ ಹಕ್ಕುಗಳು ಇವೆ. ಅಂತೆಯೇ ಮೂಲಭೂತ ಜವಾಬ್ಧಾರಿಗಳು ಇವೆ. ಆದರೆ ನಮ್ಮ ಮೂಲಭೂತ ಜವಾಬ್ಧಾರಿಗಳನ್ನು ನಾವು ಮರೆಯುತ್ತಿದ್ದೇವೆ. ಸಮಾಜವನ್ನು ತಿದ್ದಲು ನಮ್ಮಿಂದ ಸಾದ್ಯವಿಲ್ಲ ಆದರೆ ಈ ಸಮಾಜದಲ್ಲಿ ನಮ್ಮನ್ನು ನಾವು ತಿದ್ದಿಕೊಂಡರೆ ಸಮಾಜವೇ ತಿದ್ದಿದಂತೆ. ನಮ್ಮ ಜನರಲ್ಲಿ ತಾಳ್ಮೆ ಇಲ್ಲ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಆದರೆ ನಮ್ಮ ಜನರಲ್ಲಿ ಎಷ್ಟು ಬೇಕೋ ಅಷ್ಟು ತಾಳ್ಮೆ ಇನ್ನೂ ಉಳಿದಿದೆ ಅಂತ ನಾನು ಹೇಳುತ್ತಿದ್ದೇನೆ. ಅದು ಹೇಗೆ ಅಂದರೆ, ಒಬ್ಬ ಮನುಷ್ಯ ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡು ಬಿಟ್ಟರೆ ಅವನ ಚಡಪಡಿಕೆ ನೋಡಿದರೆ, ಶಬ್ಧ ಮಾಲಿನ್ಯ ಮಾಡುವ ಪರಿ ನೋಡಿದರೆ, ಈ ಮನುಷ್ಯನಿಗೆ ಒಂದು ನಿಮಿಷ ಒಂದು ವರುಷವಾದ ಹಾಗೇ ಕಾಣುತ್ತದೆ. ಅದೇ ಮನುಷ್ಯ ಪಬ್ಬಾಸ್‌ನಲ್ಲಿ ಐಸ್‌ಕ್ರೀಂ ತಿನ್ನಲು ಹೋದರೆ ಅವನ ಆಸನಕ್ಕಾಗಿ ಗಂಟೆ ಗಟ್ಟಲೆ ಬಾಗಿಲ ಬಳಿಯಲ್ಲಿ ಕಾಯುವುದನ್ನು ನೋಡಬಹುದು. ಮತ್ತೆಲ್ಲಿ ಜನರಿಗೆ ತಾಳ್ಮೆ ಕಡಿಮೆ ಆಗಿದೆ ನೀವೇ ಹೇಳಿ?. ಎಲ್ಲವೂ ಅವರವರ ಬಾವಕ್ಕೆ ಬಿಟ್ಟಿದ್ದು. ವಿದೇಶ ಪ್ರಯಾಣ ಮಾಡಿ ಬಂದಿರುವ ಯಾರೇ ಆದರೂ ಪ್ರಪ್ರಥಮವಾಗಿ ಉಲ್ಲೇಖಿಸುವ ವಿಚಾರ ಅಲ್ಲಿಯ ಸ್ವಚ್ಚತೆ. ಅದೇ ಹೊರ ದೇಶಕ್ಕೆ ಹೋದ ಕೂಡಲೇ ಅಲ್ಲಿಯ ಕಾನೂನುಗಳನ್ನು ಚಾಚು ತಪ್ಪದೇ ಪಾಲಿಸುವ ನಮ್ಮ ಜನ ಅಲ್ಲಿಂದ ಊರಿಗೆ ಬಂದು ಅಲ್ಲಿ ಹಾಗೆ, ಇಲ್ಲಿ ಹೀಗೆ ಎನ್ನುತ್ತಾರೆಯೇ ಹೊರತು ಇಲ್ಲಿನ ಕಾನೂನು, ಸ್ವಚ್ಚತೆಯನ್ನು ಗಾಳಿಗೆ ತೂರುತ್ತಾರೆ. ಕಾರಣ ಅಲ್ಲಿನ ಕಾನೂನನ್ನು ಕಡೆಗಣಿಸಿದರೆ ಅಲ್ಲಿ ಆಗುವ ಶಿಕ್ಷೆಯ ಭಯ. ಆದರೆ ನಮ್ಮಲ್ಲಿ ಹಾಗಲ್ಲ. ಇಲ್ಲಿ ಕಾನೂನು ಶಿಕ್ಷೆ ವಿದಿಸಿದರೂ ಅವರಿವರ ಶಿಪಾರಾಸಿನಿಂದ ಶಿಕ್ಷೆಯನ್ನು ತಪ್ಪಿಸಕೊಳ್ಳಬಹುದು ಎನ್ನುವ ಭರವಸೆ. ಹೀಗಿರುವಾಗ ಎಲ್ಲಿ, ಹೇಗೆ ಸ್ವಚ್ಚತೆಯನ್ನು ಕಾಪಾಡಲು ಸಾದ್ಯ ನೀವೇ ಹೇಳಿ. ವಾಹನದಲ್ಲಿ ಪ್ರಯಾಣ ಮಾಡುತ್ತಿರುವಾಗ ತ್ಯಾಜ್ಯಗಳನ್ನು ಮಾರ್ಗಕ್ಕೆ ಎಸೆಯುವುದು, ಕಂಡ ಕಂಡಲ್ಲಿ ಕಸಗಳನ್ನು ಎಸೆಯುವುದು, ಅಲ್ಲಲ್ಲಿ ಉಗುಳುವುದು, ಮನೆಯ ತ್ಯಾಜ್ಯಗಳು, ಹೋÃಟೇಲ್, ಅಂಗಡಿಗಳ ತ್ಯಾಜ್ಯಗಳನ್ನು ರಸ್ತೆ ಬದಿಗೆ ಹಾಕುವುದು ಇವನ್ನೆಲ್ಲಾ ನಿಲ್ಲಿಸುವುದು ಹೇಗೆ? ಇದನ್ನೆಲ್ಲಾ ಮಾಡಬೇಕಾದವರು ಯಾರು? ಪ್ರಪಂಚದ ಯಾವುದೇ ಸ್ಥಿತಿ ಗತಿಗಳಿಗೆ ನಾವೇ ಜವಾಬ್ಧಾರರು, ಇಷ್ಟು ಜವಾಬ್ಧಾರಿ ಹೊತ್ತಿರುವ ನಾವು ಮುಂದಿನ ಪೀಳಿಗೆಗೆ ಎಂಥಹ ಸಮಾಜವನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಬಗ್ಗೆ ಯೋಚಿಸಿ, ಮುನ್ನಡೆಯೋಣ...