image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಸಹಾಯಕತೆಯೇ ಅಸ್ತ್ರವಾಗದಿರಲಿ...

ಅಸಹಾಯಕತೆಯೇ ಅಸ್ತ್ರವಾಗದಿರಲಿ...

ಮನುಷ್ಯನಿಗೆ ಅಸಾಯಕತೆ (helplessness) ಎನ್ನುವುದು ಜೀವನದ ಒಂದಲ್ಲ ಒಂದು ಹಂತದಲ್ಲಿ ಕಾಡುತ್ತದೆ. ಅಂತಹ ಪ್ರಮೇಯ ಹೆಣ್ಣು(female) ಅಥವಾ ಗಂಡು(male) ಎಂಬ ಬೇದ ಭಾವ ಇಲ್ಲದೆ ಕಾಡುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ಹೆಣ್ಣನ್ನು ಅದು ಸ್ವಲ್ಪ ಹೆಚ್ಚಾಗಿಯೇ ಕಾಡುತ್ತದೆ ಎಂದರೆ ತಪ್ಪಾಗಲಾರದು. ಕೆಲವರು ಅದೇ ಅಸಹಾಯಕತೆಯನ್ನೇ ಬಳಸಿಕೊಂಡು ಮುಂದೆ ಹೋಗುವುದನ್ನು ಕೂಡ ಕಾಣಬಹುದು. ಆದರೆ ಅಂತಹ ದಾರಿ ಹೆಚ್ಚು ದಿನ ಸಾಗಲು ಸಾಧ್ಯವಿಲ್ಲ. ಇನ್ನು ಕೆಲವರು ಬೇರೆಯವರ ಅಸಹಾಯಕತೆಯನ್ನು ಬಳಸಿಕೊಂಡು ಮುಂದೆ ಸಾಗುವುದನ್ನು ಕೂಡ ನಾವು ಕಂಡಿದ್ದೇವೆ. ಆದರೆ ಅದು ಕೂಡ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ಇನ್ನೊಬ್ಬರ ಅಸಹಾಯಕತೆ ಆ ಸಮಯಕ್ಕೆ ಅಸ್ತ್ರ ಆಗಬಹುದು. ಆದರೆ ಅವರು ಒಮ್ಮೆ ಎದ್ದು ನಿಂತರೆ ನಾವೇ ಅಸಹಾಯಕತೆಗೆ ದೂಡಲ್ಪಡುತ್ತೇವೆ. ಹಾಗಾಗಿ ಇಂತಹ ಕೆಲಸ ಮಾಡುವಾಗ ಪ್ರತಿ ಕ್ಷಣವೂ ಯೋಚಿಸಬೇಕಾಗುತ್ತದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಹೃದಯವಂತಿಕೆ ಇರಬೇಕು. ತಾನು ಹೃದಯವಂತನಂತೆ ನಟಿಸಿ (acting) ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಕೆಲವು ರಂಗದಲ್ಲಿ ಮಾತ್ರ ಸಾಧ್ಯ. ಜೀವನದಲ್ಲಿ ಹಾಗೇ ಮಾಡುತ್ತಾ ಹೋದರೆ ಒಂದಲ್ಲ ಒಂದು ದಿನ ಮುಖ ಕವಚ ಕಳಚಿ ಬೀಳುತ್ತದೆ. ಒಬ್ಬೊಬ್ಬನಿಗೆ ಒಂದೊಂದು ದೌರ್ಲಭ್ಯಗಳು ಇರುವುದನ್ನು ನಾವು ಕಾಣಬಹುದು. ಉದಾಹರಣೆಗೆ (example) ಕೆಲವರಿಗೆ ಒಬ್ಬರು ತಮ್ಮ ಮುಂದೆ ಬಂತು ಅತ್ತರೆ ಅದನ್ನು ಸಹಿಸಿಕೊಳ್ಳಲು ಸಾದ್ಯವಾಗುವುದಿಲ್ಲ.

ಎಷ್ಟೋ ಸಲ ಅಂತವರು ಅಳುವವರ ಜೊತೆಗೂಡಿ ಕಣ್ಣೀರು ಹಾಕುವುದನ್ನು ನೋಡುತ್ತೇವೆ. ಅಂದ ಮಾತ್ರಕ್ಕೆ ಅವನು ಹುಚ್ಚ ಎಂದು ಭಾವಿಸಬೇಕಾಗಿಲ್ಲ. ಅದು ಅವನ ಹೃದಯವಂತಿಕೆಯನ್ನು ಅಥವಾ ಅವನ ಮನದಲ್ಲಿ ಅಡಕವಾಗಿರುವ ಸಹಾನುಭೂತಿಯನ್ನು ತೋರಿಸುತ್ತದೆ. ಅಂತಹ ಸಹಾನುಭೂತಿ ಎಲ್ಲರಿಗೂ ಬರಲು ಸಾಧ್ಯವಿಲ್ಲ. ನಿಜವಾಗಿಯೂ ಅಂತಹ ಸಹಾನುಭೂತಿ ನಿಮ್ಮಲ್ಲಿದ್ದರೆ ನೀವು ಪುಣ್ಯವಂತರು. ಆದರೆ ಆ ಸಹಾನುಭೂತಿ ಕೆಲವು ಸಲ ನಮಗೆ ಮುಳುವಾಗುವುದುಂಟು. ಆದರೆ ಒಂದಲ್ಲ ಒಂದು ದಿನ ಅದರಿಂದ ಒಳ್ಳೆಯದೇ ಆಗುತ್ತದೆ. ಯಾವಾಗಲೂ ಇನ್ನೊಬ್ಬರಿಗೆ ಕೆಡುಕು ಮಾಡದೇ ಬದುಕುವುದು ಬಲು ಶ್ರೇಷ್ಟವಾದ ತತ್ವಗಳಲ್ಲಿ ಒಂದು. ಎಷ್ಟೋ ಸಲ ನಮಗೆ ಗೊತ್ತಿಲ್ಲದೆ ಆದ ತಪ್ಪುಗಳಿಗೆ ನಾವು ಕೊರಗುತ್ತೇವೆ. ಅಂದರೆ ನಾವು ಮಾಡಿದ ತಪ್ಪು ಎಂದೋ ನಮ್ಮನ್ನು ಕಾಡುವುದುಂಟು. ಅದಕ್ಕೆ ಕಾರಣ ನಿಮ್ಮೊಳಗಿನ ಅಂತರಾತ್ಮ. ಎಷ್ಟೋ ಸಲ ಹೃದಯವಂತರ ಅಂತರಾತ್ಮ ಅವರನ್ನು ಎಚ್ಚರಿಸುತ್ತದೆ. ಆದರೆ ಹೃದಯವೇ ಇಲ್ಲದವರಿಗೆ ಇದು ಅನ್ವಯಿಸುವುದಿಲ್ಲ. ಹಾಗಾಗಿ ಅವರಿಗೆ ತಾನು ಮಾಡಿದ ತಪ್ಪು ಗೋಚರಿಸುವುದಾಗಲಿ ಅಥವಾ ಅದಕ್ಕೆ ಪ್ರಶ್ಚಾತಾಪವಾಗಲಿ

ಅವರಲ್ಲಿ ಕಾಣುವುದಿಲ್ಲ. ಕೆಲವು ಸಲ ಜೀವನದಲ್ಲಿ ಬೇಸತ್ತಾಗ ಅನ್ನಿಸುತ್ತದೆ ಅದೇ ಸರಿಯಾದ ತತ್ವ ಎಂದು. ಅಂತವರಿಗೆ ಅಳುಕು ಅಂಜಿಕೆ ಯಾವುದು ಕಾಡುವುದಕ್ಕೆ ಸಾಧ್ಯವೇ ಇರುವುದಿಲ್ಲ. ಹಾಗಾಗಿ ಅಂತವರ ಮುಖದಲ್ಲಿ ತಪ್ಪಿತಸ್ಥ ಭಾವನೆ ಕಾಣುವುದೇ ಇಲ್ಲ. ಅದೇ ಸಹಾನುಭೂತಿ ಇರುವ ಮನುಷ್ಯನಾದರೆ ತನ್ನಿಂದಾದ ಸಣ್ಣ ತಪ್ಪಿಗೂ ತಲೆ ತಗ್ಗಿಸುತ್ತಾನೆ. ಅಷಾಡಭೂತಿಗಳಿಗೆ ಆ ಭಯವೇ ಇಲ್ಲ. ಎಂತಹ ಪರಿಸ್ಥಿತಿಯಲ್ಲೂ ತಾನೆ ಉತ್ತಮನಂತೆ ವರ್ತಿಸುತ್ತಾನೆ. ಆದರೆ ಆ ದೇವರ ತಕ್ಕಡಿಯಲ್ಲಿ ಎಲ್ಲರೂ ಒಂದೇ. ಅದಕ್ಕೆ ಜಾತಿ ನೀತಿಗಳ ಹಂಗಿಲ್ಲ. ಬಡವ ಬಲ್ಲಿದನೆಂಬ ಬೇದ ಭಾವವಿಲ್ಲ. ಹಾಗಾಗಿ ಒಂದಲ್ಲ ಒಂದು ದಿನ ದೇವರ ಮುಂದೆ ತಲೆ ಬಾಗಲೇ ಬೇಕಾಗುತ್ತದೆ ಎಂದು ನಮ್ಮ ಅಮ್ಮ ಆಗಾಗ ಹೇಳುತ್ತಿದ್ದರು. ಇದೆಲ್ಲಾ ತಿಳಿದಿದ್ದರು ಮನುಷ್ಯ ಯಾಕೆ ಸ್ವಾರ್ಥಿ ಆಗುತ್ತಾನೆ. ನೀನು ಬರುವಾಗ ತಂದಿದ್ದೇನು, ಹೋಗುವಾಗ ತೆಗೆದುಕೊಂಡು ಹೋಗುವುದೇನು?. ಕೋಟಿಗಳ ಸಾಮ್ರಾಜ್ಯ ಕಟ್ಟಿ ಮೆರೆದವರ ಕತೆಗಳು ನಮ್ಮ ಮುಂದೆ ಸಾಲು ಸಾಲಾಗಿ ಕಾಣುತ್ತದೆ. ರಾಜಾ ಮಹಾರಾಜರುಗಳೇ ಮಣ್ಣಲ್ಲಿ ಮಣ್ಣಾಗಿ ಹೋಗಿರುವಾಗ ಇನ್ನು ಹುಳು ಮಾನವರಾದ ನಾವು ಎಲ್ಲಿಯ ಲೆಕ್ಕ. ಹೆತ್ತ ತಾಯಿಗೆ ಹತ್ತು ಮಕ್ಕಳಿದ್ದರೂ ಅವಳಿಗೆ ಎಲ್ಲಾ ಮಕ್ಕಳು ಸಮಾನರು. ಅವಳು ಯಾವ ಮಕ್ಕಳಿಗೂ ತಾರತಮ್ಯ ಮಾಡಳಾರಳು. ಹಾಗೆಯೇ ಹುಟ್ಟಿಸಿದ ದೇವರು ಅವರವರ ಕರ್ಮಕ್ಕೆ ಸರಿಯಾಗಿ ಫಲವನ್ನು ಕೊಡುತ್ತಾನೆ. ಇವತ್ತು ಖುಷಿಯಾಗಿ ನಕ್ಕು ನಲಿದಾಡುವವರಿಗೆ ನಾಳೆ ಅಳುವ ಪ್ರಮೇಯ ಬರಲಾರದು ಎಂದು ತಿಳಿಯುವವನು ಮೂರ್ಖ. ಭೂಮಿ ಸುತ್ತುತ್ತಲೇ ಇರುತ್ತದೆ. ಹಾಗೇಯೇ ನಮ್ಮ ಜೀವನ ಚಕ್ರ ಇವತ್ತು ಕೆಳಗಿರುವವನು ನಾಳೆ ತುತ್ತತುದಿಯಲ್ಲಿ ಇರಬಹುದು. ಇವತ್ತು ಬಿದ್ದನೆಂದರೆ ನಾಳೆ ಏಳಲಾರನು ಎನ್ನುವ ಭ್ರಮೆಯನ್ನು ಬಿಟ್ಟು ಬದುಕುವುದು ಉತ್ತಮವಾದದ್ದು. ಯಾರನ್ನು ಯಾರು ಬೇಕಾದರೂ ಮೋಸ (cheat ) ಮಾಡಬಹುದು. ಆದರೆ ಇದು ಒಂದು ದಿನ ದೇವರು ಮಾಡಬಹುದಾದ ಮೋಸಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಅದನ್ನು ಅರಿತುಕೊಂಡು, ನಾವು ಸಹಾನಾಭೂತಿ ಇಟ್ಟುಕೊಂಡು ಯಾರಿಗೂ ಕೆಡುಕನ್ನು ಮಾಡದೇ ನಮ್ಮ ಮುಂದಿನ ಪೀಳಿಗೆ ದಾರಿದೀಪವಾಗೋಣ...

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ