image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೇಲದ ಹಣ್ಣು

ಬೇಲದ ಹಣ್ಣು

ಬೇಲದ ಹಣ್ಣನ್ನು ಪವಿತ್ರ ಹಣ್ಣು ಎಂದು ಹೇಳಲಾಗುತ್ತದೆ. ಇದು ಶಿವನಿಗೆ ಪ್ರೀತಿ ಪಾತ್ರವಾದ ಹಣ್ಣು. ಶಿವರಾತ್ರಿ ದಿನ ಈ ಹಣ್ಣನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಇದನ್ನು ಕಹಿ ಕಿತ್ತಳೆ, ಚಿನ್ನದ ಸೇಬು, ಕಲ್ಲಿನ ಸೇಬು ಅಥವಾ ಮರದ ಸೇಬು ಮುಂತಾದ ಇತರ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ. ಇದನ್ನು ಕ್ಯಾನ್ಸರ್, ಮಧುಮೇಹ ಮತ್ತು ಬೊಜ್ಜಿನಂತಹ ಕಾಯಿಲೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಮತ್ತು ಜೀವಸತ್ವಗಳಿವೆ. ಹಣ್ಣನ್ನು ಆಯುರ್ವೇದ ಔಷಧಿಗಳಾಗಿ ಮತ್ತು ರುಚಿಯಾದ ಆಹಾರವಾಗಿ ಬಳಸಲಾಗುತ್ತದೆ. ಈ ಹಣ್ಣಿನ ಹೊರ ಕವಚ ತುಂಬಾ ಗಟ್ಟಿಯಾಗಿದ್ದು, ದುಂಡಾಗಿರುತ್ತದೆ, ಇದರ ಮರದ ಎಲ್ಲಾ ಭಾಗಗಳನ್ನು ಔಷಧೀಯ ಮತ್ತು ಆಯುರ್ವೇದಕ್ಕಾಗಿ ಬಳಸಲಾಗುತ್ತದೆ. ಕಾಯಿ ತಿಳಿ ಹಸಿರು ಬಣ್ಣದಿಂದ ಪ್ರಾರಂಭವಾಗಿ, ಹಣ್ಣಾದಂತೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಣ್ಣು ಸಿಹಿಯಾದ ನಾರಿನ ತಿರುಳನ್ನು ಹೊಂದಿರುತ್ತದೆ.

ಹಣ್ಣಿನ ತಿರುಳಿನ ಸೇವನೆಯೂ ಹಲ್ಲಿನ ವಸಡುಗಳನ್ನು ಬಲಪಡಿಸುತ್ತದೆ.

ಬೇಲದ ಹಣ್ಣಿನ ತಿರುಳನ್ನು ಸಕ್ಕರೆ ಜೊತೆ ಸೇರಿಸಿ ಹಸುವಿನ ಹಾಲಿನ ಜೊತೆ ತೆಗೆದುಕೊಂಡರೆ ಪಿತ್ತ ಶಮನವಾಗುವುದು.

ಬೇಲದ ಹಣ್ಣಿನ ಸೇವನೆ ಮಲಬದ್ಧತೆಯನ್ನು ನಿವಾರಿಸುತ್ತದೆ. ಇದು ಕರುಳನ್ನು ಸ್ವಚ್ಛಗೊಳಿಸಲು ಉತ್ತಮ ಆಯ್ಕೆಯಾಗಿದೆ.  

ಅತಿಸಾರ ಮತ್ತು ಭೇದಿ ಚಿಕಿತ್ಸೆಗಾಗಿ ಹಸಿ ಹಣ್ಣುಗಳನ್ನು ಕತ್ತರಿಸಿ ಒಣಗಿಸಿದ ನಂತರ ಪುಡಿಮಾಡಿ, ಮಿಶ್ರಣವನ್ನು ಬಿಸಿನೀರು ಮತ್ತು ಸಕ್ಕರೆ ದ್ರಾವಣದೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು.

ಈ ಮಿಶ್ರಣವನ್ನು ತಿನ್ನುವುದರಿಂದ ಮಲದಲ್ಲಿನ ರಕ್ತದ ಸಮಸ್ಯೆ ಕಡಿಮೆಯಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆಮ್ಲೀಯತೆಯ ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಜೇನುತುಪ್ಪದ ಜೊತೆಗೆ ಈ ಹಣ್ಣಿನ ರಸವನ್ನು ಕುಡಿದರೆ ಉತ್ತಮ. ಈ ಪಾನಕವು ಸೆಕೆ ಮತ್ತು ಬಾಯಾರಿಕೆ ಎರಡನ್ನೂ ಕಡಿಮೆ ಮಾಡುವಲ್ಲಿ ಕೆಲಸ ಮಾಡುತ್ತದೆ. ಬಾಯಿ ಹುಣ್ಣಿಗೂ ಉತ್ತಮ ಔಷಧಿ.

ಬೇಲದ ಎಳೆಯ ಹಣ್ಣಿನ ಪುಡಿ ಮಾಡಿದ ತಿರುಳನ್ನು ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ನಂತರ ಕೀಲುಗಳಲ್ಲಿ ಊತದ ಜಾಗದಲ್ಲಿ ಹಚ್ಚುವುದರಿಂದ ಊತ ಕಡಿಮೆಯಾಗುತ್ತದೆ ಮತ್ತು ನೋವು ಸಹ ಕಡಿಮೆಯಾಗುತ್ತದೆ. ಈ ಮೂಲಕ ಸಂಧಿವಾತಕ್ಕೆ ಉತ್ತಮ ಔಷಧಿಯಾಗಲ್ಲದು.

Category
ಕರಾವಳಿ ತರಂಗಿಣಿ