ಉತ್ತರ ಭಾರತದಲ್ಲಿ ಹೆಚ್ಚಾಗಿ ಬೆಳೆಯುವ ಓಮಕಾಳನ್ನು ಕೆಲವು ಅಡುಗೆಯಲ್ಲಿ ಹಾಗೂ ಮನೆ ಮದ್ದಾಗಿ ಕೂಡ ಬಳಸಲ್ಪಡುತ್ತದೆ.
ಓಮು ಕಾಳಿನಲ್ಲಿರುವ ಆಸಿಡ್ ನಿರೋಧಕ ಗುಣ ಇರುವುದರಿಂದ ಮಜ್ಜಿಗೆಯೊಂದಿಗೆ ಸ್ವಲ್ಪ ಓಮು ಕಾಳನ್ನು ಬೆರೆಸಿ ಕುಡಿದರೆ ಜೀರ್ಣಕ್ರಿಯೆಗೆ ಒಳ್ಳೆಯದು.
ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ ಮುಂತಾದ ಕಾರಣದಿಂದ ಹೊಟ್ಟೆ ನೋವು ಬಂದಾಗ ಬಿಸಿ ನೀರಿನೊಂದಿಗೆ ಓಮು ಕಾಳನ್ನು ತಿನ್ನುವುದರಿಂದ ಉಪಶಮನಗೊಳ್ಳುತ್ತದೆ.
ಓಮು ಕಾಳು ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳುವುದನ್ನು ತಡೆಯುವಲ್ಲಿ ಪರಿಣಾಮಕಾರಿ. ಇದರ ಸೇವನೆಯಿಂದ ಲಿವರ್ ಮತ್ತು ಕಿಡ್ನಿ ಸುಲಭವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಬಿಸಿ ನೀರಿನೊಂದಿಗೆ ಕಾಳನ್ನು ಸೇವಿಸುವುದರಿಂದ ತಲೆ ನೋವು ಮತ್ತು ಎದೆ ಉರಿ ಕಡಿಮೆಯಾಗುತ್ತದೆ.
ಕೀಲು ನೋವಿನಿಂದ ಬಳಲುತ್ತಿದ್ದರೆ ಓಮದ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ನೋವು ಕಡಿಮೆಯಾಗುತ್ತದೆ.
ಹಲ್ಲು ನೋಯುತ್ತಿದ್ದರೆ ಬಿಸಿನೀರಿನಲ್ಲಿ ಓಮು ಕಾಳನ್ನು ಕುದಿಸಿ ಬಾಯಿ ಮುಕ್ಕಳಿಸಿದರೆ ನೋವು ಕಡಿಮೆಯಾಗುತ್ತದೆ.
ಓಮು ಕಾಳನ್ನು ಹುರಿದು ಹಾಲಿನೊಂದಿಗೆ ಕುಡಿದರೆ ಮುಟ್ಟಿನ ಸಮಯದಲ್ಲಿ ಉಂಟಾಗುವ ನೋವಿಗೂ ಉಪಶಮನ ನೀಡುತ್ತದೆ.
ಜೀರಿಗೆಯೊಂದಿಗೆ ಈ ಕಾಳನ್ನು ಹುರಿದು ನೀರಿನಲ್ಲಿ ಬೇಯಿಸಿ ಸೋಸಿ, ಅದಕ್ಕೆ ಸಕ್ಕರೆ ಬೆರೆಸಿ ಕುಡಿದರೆ ನೈಸರ್ಗಿಕವಾಗಿಯೇ ಅಸಿಡಿಟಿ ಕಡಿಮೆಯಾಗುತ್ತದೆ.
ಗರ್ಭಾವಸ್ಥೆ ಸಮಯದಲ್ಲಿ ಓಮು ಕಾಳಿನ ಸೇವನೆ ರಕ್ತಶುದ್ಧೀಕರಣಗೊಳಿಸಿ, ದೇಹದಲ್ಲಿ ರಕ್ತ ಸಂಚಲನ ಹೆಚ್ಚಿಸುತ್ತದೆ.
ಚಿಕ ಮಕ್ಕಳಲ್ಲಿ ಜಂತುವಿನ ಭಾಧೆಗೆ ಮತ್ತು ಅಜೀರ್ಣ ಆದಾಗ ಅರ್ಧ ಚಮಚ ಓಮ 2ಲೋಟ ನೀರಿಗೆ ಹಾಕಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಿ ಆಗಾಗ 2 ಚಮಚ ಕಷಾಯ ಕುಡಿದರೆ ಉತ್ತಮ.
ಓಮದಪುಡಿ ಮತ್ತು ಅರಿಶಿನಪುಡಿ ಸಮ ಪ್ರಮಾಣದಲ್ಲಿ ಲಿಂಬೆರಸದೊಂದಿಗೆ ಕಲಸಿ ಲೇಪಿಸಿದರೆ ಕಜ್ಜಿ ವಾಸಿಯಾಗುತ್ತದೆ.
ಚಿಟಿಕೆ ಓಮದೊಂದಿಗೆ ಕಲ್ಲುಸಕ್ಕರೆ ಸೇರಿಸಿ ಜಗಿದು ತಿಂದರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ.
ಅತಿಯಾದರೆ ಅಮೃತವೂ ವಿಷವೇ ಆದುದರಿಂದ ತಜ್ಞರ ಸಲಹೆ ಪಡೆದು ಬಳಸುವುದು ಉತ್ತಮ.
✍ಲಲಿತಶ್ರೀ ಪ್ರೀತಂ ರೈ