image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ಬಡವರ ನೀರಾವರಿ' ಎಂದು ಕರೆಯಲಾಗುವ 'ಲಾವಂಚ' ಬೇರಿನ ಔಷದೀಯ ಗುಣಗಳ ಬಗ್ಗೆ ತಿಳಿದುಕೊಳ್ಳೋಣ...

'ಬಡವರ ನೀರಾವರಿ' ಎಂದು ಕರೆಯಲಾಗುವ 'ಲಾವಂಚ' ಬೇರಿನ ಔಷದೀಯ ಗುಣಗಳ ಬಗ್ಗೆ ತಿಳಿದುಕೊಳ್ಳೋಣ...

ಸುಗಂಧ ತೈಲಗಳ ತಯಾರಿಕೆಗೆ ಬಳಸುವ ಸಸ್ಯಗಳಲ್ಲಿ ಪ್ರಮುಖವಾಗಿರುವ ಲಾವಂಚ ಒಂದು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ. ಇದನ್ನು "ವೆಟಿವೇರ್ ಹುಲ್ಲು', "ಮಡಿವಾಳ ಬೇರು',"ರಾಮಚ್ಚ", "ಖಸ್' ಎಂದೆಲ್ಲಾ ಕರೆಯುತ್ತಾರೆ. ಇಳಿಜಾರು ಪ್ರದೇಶಗಳಲ್ಲಿ ಲಾವಂಚದ ಗಿಡಗಳನ್ನು ನೆಡುವುದರಿಂದ ಮಳೆ ನೀರು ಹರಿದು ಹೋಗುವುದನ್ನು ತಡೆಯಬಹುದು. ಮಾತ್ರವಲ್ಲದೆ ನೀರಿನೊಂದಿಗೆ ಕೊಚ್ಚಿಹೋಗುವ ಮಣ್ಣನ್ನು ಸ್ವಲ್ಪಮಟ್ಟಿಗೆ ತಡೆಹಿಡಿಯಬಹುದು. ಇದರಿಂದಲೇ ಲಾವಂಚವನ್ನು "ಬಡವನ ನೀರಾವರಿ' ಎನ್ನುತ್ತಾರೆ. ಇದರ ಬೇರುಗಳಿಂದ ಕಂಪು ಬೀರುವ ಬೀಸಣಿಕೆಗಳು, ಚಾಪೆ, ಟೋಪಿ, ಹಾರಗಳು ತಯಾರಾಗಿ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ. ಇದರಲ್ಲಿ ಕೆಲವು ಜಾತಿಗಳಿದ್ದರೂ ಎಲ್ಲವೂ ಬೇರಿನಿಂದ ತೈಲ ಕೊಡುತ್ತವೆ.ತೈಲದಲ್ಲಿ ಬೆಂಜೋಯಿಕ್ ಆಮ್ಲ, ಪಾಮಿಟಿಕ್ಆಮ್ಲ, ವೆಟಿವೆರೋನ್ ವರ್ಗದ ಮೂವತ್ತಕ್ಕಿಂತ ಹೆಚ್ಚು ಸಂಖ್ಯೆಯ ರಾಸಾಯನಿಕ ಧಾತುಗಳು ಅಡಗಿವೆ. ಪ್ರಮುಖವಾಗಿ ನೀರನ್ನು ಶುದ್ಧಗೊಳಿಸುವ ಗುಣವಿರುವ ಲಾವಂಚವು ಅನೇಕ ಔಷಧೀಯ ಗುಣಗಳನ್ನೂ ಒಳಗೊಂಡಿದೆ. ಅಲ್ಲದೆ ಹಲವಾರು ಆಯುರ್ವೇದ ಔಷಧಗಳ ತಯಾರಿಯಲ್ಲೂ ಲಾವಂಚವನ್ನು ಬಳಸುತ್ತಾರೆ.ಲಾವಂಚದ ಬೇರುಗಳನ್ನು ಕುದಿಯುವ ನೀರಿನಲ್ಲಿ ಹಾಕಿ, ಬೇಯಿಸಿ, ಭಟ್ಟಿ ಇಳಿಸಿ ತೈಲ ಉತ್ಪಾದಿಸುತ್ತಾರೆ. ಆ ತೈಲವನ್ನು ಸೋಪು, ಅತ್ತರ,ಅಗರಬತ್ತಿಯ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಲಾವಂಚದ ತೈಲವನ್ನು ಮೈ-ಕೈನೋವು ನಿವಾರಣೆಗೆ ಬಳಸುತ್ತಾರೆ.

ವಾತ, ಹೊಟ್ಟೆ ನೋವು, ಜಂತು ಹುಳಗಳ ಸಮಸ್ಯೆಗಳು ಲಾವಂಚದ ಬೇರನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಸೋಸಿ ಕುಡಿಯುವುದರಿಂದ ನಿವಾರಣೆಯಾಗುವುದು.

ಲಾವಂಚ ತೈಲ ಮೊಡವೆ ಮತ್ತು ನೋವು ನಿವಾರಿಸುವ ಗುಣ ಹೊಂದಿದೆ.

ಬಾಯಿಹುಣ್ಣು, ಮೂಗಿನಲ್ಲಿ ರಕ್ತಸ್ರಾವ, ಕೈ ಕಾಲು ನೋವು,  ನರಗಳ ನಿಶ್ಯಕ್ತಿಯನ್ನು ನಿವಾರಿಸಲು ಇದರ ಬೇರಿನ ಕಷಾಯ ಉಪಕಾರಿ.

ಇದರ ತೈಲವು ಸಂಧಿವಾತ, ಸೊಂಟ ನೋವು, ಬೆನ್ನುನೋವು ನಿವಾರಣೆಗೆ ಬಳಸುತ್ತಾರೆ.

ಬೇರನ್ನು ಹಳೆಯ ತುಪ್ಪದಲ್ಲಿ ಅರೆದು ಹಚ್ಚಿದರೆ ಅಂಗಾಲು ಒಡೆಯುವ ಬಾಧೆ ಶಮನವಾಗುತ್ತದೆ.

ಇದರ ಬೇರು ತಂಪು ಗುಣ ಹೊಂದಿರುವುದರಿಂದ ಉರಿಮೂತ್ರ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಅಥವಾ ಮೂತ್ರದ ಇನ್‌ಫೆಕ್ಷನ್‌  ಸಮಸ್ಯೆಯನ್ನು ನಿವಾರಿಸಲು ಲಾವಂಚ ಬೇರು ಸಹಕಾರಿ.

ಲಾವಂಚ ಬೇರಿನ ಕಷಾಯ ಮಕ್ಕಳ ಕಫ, ಪಿತ್ಥಜ್ವರ, ಕೆಮ್ಮು, ಉಬ್ಬಸ, ವಾಂತಿಗಳನ್ನು ಗುಣಪಡಿಸುತ್ತದೆ.

ಅತಿಯಾದರೆ ಅಮೃತವೂ ವಿಷವೇ ಆಗಿರುವುದರಿಂದ ಇದನ್ನು ಉಪಯೋಗಿಸುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯದಿರಿ.

Category
ಕರಾವಳಿ ತರಂಗಿಣಿ