ಭಾರತದ ಪ್ರತಿ ಭಾಗದಲ್ಲಿ ಉಪಯೋಗವಾಗುವ ತರಕಾರಿಗಳಲ್ಲಿ ಕುಂಬಳಕಾಯಿ ಎಲ್ಲರಿಗೂ ಪರಿಚಿತವಾಗಿರುವ ತರಕಾರಿ. ಇದನ್ನು ಹುಳಿ, ಪಲ್ಯ ಮತ್ತು ಸಿಹಿತಿಂಡಿಗಳಲ್ಲಿ ಉಪಯೋಗಿಸುತ್ತಾರೆ. ಧಾರ್ಮಿಕವಾಗಿಯೂ ಮಹತ್ವ ಪಡೆದಿರುವ ಕುಂಬಳಕಾಯಿ ರುಚಿಕರವಾದ ತರಕಾರಿ ಮಾತ್ರವಲ್ಲದೆ ಮನುಷ್ಯನಿಗೆ ಪುಷ್ಟಿಕರವಾದ ಆಹಾರಾಂಶಗಳನ್ನೂ ಒಳಗೊಂಡಿದೆ. ನೂರು ಗ್ರಾಂ ಕುಂಬಳ ಕಾಯಿಯಲ್ಲಿರುವ ಆಹಾರ ಅಂಶಗಳಲ್ಲಿ ತೇವಾಂಶ 92.6 ಗ್ರಾಂ, ಕಾರ್ಬೊ ಹೈಡ್ರೇಟ್ 4.6 ಗ್ರಾಂ, ವಿಟಮಿನ್‌ಗಳು 1.4 ಗ್ರಾಂ, ಕೊಬ್ಬು 1.1 ಗ್ರಾಂ, ಲವಣ 0.6 ಗ್ರಾಂ, ನಾರು 0.7 ಗ್ರಾಂ ಅಲ್ಲದೆ ಶಕ್ತಿ 25 ಕೆಲೋರಿಗಳು, ಮೆಗ್ನೀಸಿಯಂ 14 ಮಿಗ್ರಾಂ, ರಂಜಕ 30 ಮಿ ಗ್ರಾಂ, ಕಬ್ಬಿಣ 0.7 ಮಿಗ್ರಾಂ, ಸೋಡಿಯಮ್ 5.6 ಮಿ ಗ್ರಾಂ, ಪೊಟ್ಯಾಸಿಯಂ 139.0 ಮಿಗ್ರಾಂ,ತಾಮ್ರ 0.20 ಮಿಗ್ರಾಂ, ಗಂಧಕ 1.6 ಮಿಗ್ರಾಂ, ಕ್ಲೋರಿನ್ 4.0 ಮಿಗ್ರಾಂ, ಥಯಾಮಿನ್ 0.06ಮಿಗ್ರಾಂ, ರಿಬೋ ಫ್ಲೇವಿನ್ 0.04 ಮಿಗ್ರಾಂ, ನಿಕೊಟಿನಿಕ್ ಅಮ್ಲ 0.5 ಮಿಗ್ರಾಂ, ಸಿ ವಿಟಮಿನ್ 2.0 ಮಿಗ್ರಾಂ ಇದೆ. ಅಷ್ಟೇ ಅಲ್ಲದೆ ಇದನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಕೆಲವು ಕಡೆಗಳಲ್ಲಿ ದೃಷ್ಟಿ ವಿವಾಳಿಸಲು ಉಪಯೋಗಿಸುತ್ತಾರೆ. ಅಷ್ಟೇ ಅಲ್ಲದೆ ಪೂಜೆಗಳಲ್ಲಿಯೂ ಬಳಕೆಯಲ್ಲಿದೆ.
ಬೂದುಗುಂಬಳದ ಬೀಜಗಳಿಗೆ ಜಂತುಹುಳು ನಾಶಕ ಗುಣವಿದೆ.
ಕುಂಗಳಕಾಯಿ ಬಹಳ ಪುಷ್ಟಿದಾಯಕದೊಂದಿಗೆ ಮೂತ್ರೋತ್ತೇಜಕವಾಗಿದೆ.
ಕಾಯಿಯಿಂದ ಅದೇ ತಾನೇ ತೆಗೆದು ರಸವನ್ನು ಅಂತರ್ ರಕ್ತಸ್ರಾವವನ್ನು ತಡೆಯಲು ಬಳಸುವುದುಂಟು.
ಕ್ಷಯರೋಗ ಮುಂತಾದ ರೋಗಗಳಲ್ಲಿ ಇದನ್ನು ಶಕ್ತಿದಾಯಕವಾಗಿ ಉಪಯೋಗಿಸುತ್ತಾರೆ.
ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಮೂಲವ್ಯಾದಿ ಕಡಿಮೆಯಾಗುತ್ತದೆ.
ಕುಂಬಳಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
ಇದರ ಜ್ಯೂಸ್ ಕುಡಿಯುವುದರಿಂದ ಮಿದುಳು ಶಾಂತವಾಗುತ್ತದೆ.
ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಆಗಬಲ್ಲದು.
ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಪರಿಹಾರ ಆಗುತ್ತದೆ.
ತೂಕ ಇಳಿಕೆಯಲ್ಲಿ ಕುಂಬಳಕಾಯಿ ಉತ್ತಮ ಆಹಾರ
✍ ಲಲಿತಶ್ರೀ ಪ್ರೀತಂ ರೈ