ಗ್ರಾಮೀಣ ಬಾಗಗಳಲ್ಲಿ ಹೆಚ್ಚಾಗಿ ಆಹಾರ ಪದಾರ್ಥವಾಗಿ ಉಪಯೋಗಿಸುವ ಸಬ್ಬಸಿಗೆ ಸೊಪ್ಪು ಅಥವಾ ಸಬ್ಬಕ್ಕಿ ಸೊಪ್ಪು ಅನೇಕ ಪೋಷಕಂಶಗಳನ್ನು ಹೊಂದಿರುವುದರಿಂದ ಇದು ಹತ್ತು ಹಲವಾರು ರೋಗಗಳನ್ನು ವಾಸಿಮಾಡುವ ಗುಣಗಳನ್ನು ಹೊಂದಿದೆ. ಇದನ್ನು ಮನೆ ಮದ್ದಿನಲ್ಲಿಯೂ ಉಪಯೋಗಿಸುತ್ತಾರೆ. ನಿದ್ರಾಹೀನತೆಯಿಂದ ಬಳಲುತ್ತಿದ್ದವರು ಪ್ರತಿನಿತ್ಯ ಆಹಾರದಲ್ಲಿ ಸಬ್ಬಸಿಗೆ ಸೊಪ್ಪಿನ ಉಪಯೋಗ ಮಾಡುವುದರಿಂದ ನಿದ್ರೆಯ ಸಮಸ್ಯೆ ಉಂಟಾಗುವುದಿಲ್ಲ.
ಸಬ್ಬಸಿಗೆ ಸೊಪ್ಪಿನ ಜೊತೆ ಮೆಂತೆ ಸೇರಿಸಿ, ತುಪ್ಪದಲ್ಲಿ ಹುರಿದು, ಅದಕ್ಕೆ ಒಣ ಮೆಣಸು, ಕಾಯಿ ತುರಿ, ಉಪ್ಪು, ಸಾಸಿವೆ ಸೇರಿಸಿ ಚಟ್ನೆಪುಡಿ ಮಾಡಿಕೊಂಡು ಅನ್ನದ ಜೊತೆ, ಮಜ್ಜಿಗೆ ಮತ್ತು ಈ ಚಟ್ನಿಪುಡಿಯನ್ನು ಸೇರಿಸಿ, ಊಟ ಮಾಡಿದರೆ ಜೀರ್ಣಕ್ರಿಯೆ ಸರಾಗವಾಗುತ್ತದೆ.
ಮಧುಮೇಹ ರೋಗಿಗಳು ಸಬ್ಬಸಿಗೆ ಸೊಪ್ಪನ್ನು ಬಳಸುವುದರಿಂದ ರಕ್ತದಲ್ಲಿ ಸಕ್ಕೆರೆಯ ಪ್ರಮಾಣ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.
ಸಬ್ಬಸಿಗೆ ಸೊಪ್ಪನ್ನು ದಿನವೂ ಆಹಾರದ ರೂಪದಲ್ಲಿ ಸೇವಿಸುವುದರಿಂದ ಪ್ರೊಜೆಸ್ಟ್ರಾನ್ ಸ್ರವಿಸುವಿಕೆ ಹೆಚ್ಚಾಗಿ ಅನಿಯಮಿತವಾದ ಋತುಚಕ್ರ ನಿಯಮಿತವಾಗುತ್ತದೆ.
ಗಾಯಗಳಾದಾಗ ಸಬ್ಬಸಿಗೆ ಸೊಪ್ಪಿನ ರಸ ತೆಗೆದು ಹಚ್ಚುವುದರಿಂದ ಗಾಯವು ಬೇಗನೆ ವಾಸಿಯಾಗುತ್ತದೆ.
ಆಹಾರದಲ್ಲಿ ಸಬ್ಬಸಿಗೆ ಸೊಪ್ಪಿನ ಬಳಕೆ ಹೆಚ್ಚಿಸಿದರೆ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದು.
ಸಬ್ಬಸಿಗೆ ಸೊಪ್ಪಿಗೆ ಒಂದು ಚಮಚ ಎಳ್ಳು ಮತ್ತು ಒಂದು ಚಮಚ ಅಗಸೆ ಬೀಜದ ಸೇರಿಸಿ ಜ್ಯೂಸು ಮಾಡಿಕೊಂಡು ಕುಡಿದರೆ ಲಿವರ್ ನ ಸಮಸ್ಯೆಯು ಕಡಿಮೆಯಾಗುತ್ತದೆ.
ಬಾಣಂತಿಯರಿಗೆ ಸಬ್ಬಸಿಗೆ ಸೊಪ್ಪನ್ನು ನೀಡುವುದರಿಂದ ಅದರಲ್ಲಿರುವ ಕಬ್ಬಿಣ ಅಂಶವು ಎದೆಹಾಲನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ಸಬ್ಬಸಿಗೆ ಸೊಪ್ಪನ್ನು ಸೇವಿಸುವುದರಿಂದ ಅದರಲ್ಲಿರುವಂತಹ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸುವ ಕಾರ್ಯ ನಿರ್ವಹಿಸುತ್ತದೆ.
ಸಬ್ಬಸಿಗೆ ಸೊಪ್ಪಿನಲ್ಲಿ ಫೈವನೈಡ್ಸ್ ಹಾಗೂ ವಿಟಮಿನ್ ಬಿ ಕಾಂಪ್ಲೆಕ್ಸ್ ಪೋಷಕಾಂಶಗಳು ಇದ್ದು, ಇದು ದೇಹದಲ್ಲಿ ಎಂಜೈಮ್‌ಗಳು ಹಾಗು ಹಾರ್ಮೋನುಗಳ ಉತ್ಪತ್ತಿಯನ್ನು ಮಾಡುತ್ತದೆ. ಇದರಿಂದ ಮನಸಿಗೆ ಹೊಸ ಚೈತನ್ಯ ಬರುತ್ತದೆ ಹಾಗು ಒತ್ತಡ ದೂರವಾಗುತ್ತದೆ.
✍ಲಲಿತಶ್ರೀ ಪ್ರೀತಂ ರೈ