ಅಡುಗೆಗೆ ಬಳಸುವಂತಹ ಹಲವಾರು ಸಾಂಬಾರ ಪದಾರ್ಥ ಗಳಲ್ಲಿ ಸಾಸಿವೆಯು ಒಂದು. ಸಾಸಿವೆ ಎಣ್ಣೆಯನ್ನು ಆಯುರ್ವೇದ ಚಿಕಿತ್ಸೆಗಳಾದ ಪಂಚಕರ್ಮ ಹಾಗೂ ಮಸಾಜ್ ಗಳಲ್ಲಿ ಬಳಕೆ ಮಾಡಲಾಗುತ್ತದೆ. ಸಾಸಿವೆ ಮತ್ತು ಅದರ ಎಣ್ಣೆ ಮನುಷ್ಯನ ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ಕಾಪಾಡುವ ಕಾರಣಕ್ಕಾಗಿ ನಮ್ಮ ಹಿರಿಯರು ಮನೆ ಮದ್ದಿನಲ್ಲೂ ಇದರ ಬಳಕೆ ಮಾಡಿಕೊಂಡು ಬಂದಿದ್ದಾರೆ. ಸಾಸಿವೆಯಲ್ಲಿ ಗ್ಲುಕೋಸಿನೊಲೇಟ್ ಗಳು ಮತ್ತು ಮೈರೋಸಿನೇಸ್ ಎನ್ನುವ ಅಂಶವು ಸಾಸಿವೆ ಬೀಜಗಳಲ್ಲಿದ್ದು, ಇದು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುವುದು. ಸಾಸಿವೆ ಕಾಳುಗಳು ತಲೆನೋವು ಮತ್ತು ಮೈಗ್ರೇನ್ ಗೆ ಒಳ್ಳೆಯ ಪರಿಹಾರವಾಗಿದೆ. ಇದರಲ್ಲಿ ಇರುವಂತಹ ಮೆಗ್ನಿಶಿಯಂ ಅಂಶವು ನರ ರೋಗವನ್ನು ಶಮನ ನೀಡುವುದು. ದೇಹವ ವಿವಿಧ ಭಾಗಗಳಲ್ಲಿ ನೋವು ಹಾಗೂ ಒತ್ತಡ ಕಡಿಮೆ ಮಾಡುವುದು. ಸಾಸಿವೆಯಲ್ಲಿ ನಾರಿನಾಂಶವಿದ್ದು ಕರುಳಿನ ಕ್ರಿಯೆಯನ್ನು ಸರಾಗವಾಗಿಸುವುದು ಮತ್ತು ಜೀರ್ಣ ಕ್ರಿಯೆ ವ್ಯವಸ್ಥೆಯನ್ನು ಬಲಪಡಿಸುವುದು. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಾಸಿವೆ ತುಂಬಾ ಲಾಭಕಾರಿ. ಕೊಲೆಸ್ಟ್ರಾಲ್ ಮಟ್ಟವನ್ನು ಇದು ನಿಯಂತ್ರಿಸುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವುದು. ಸೆಲೆನಿಯಂ ಎನ್ನುವ ಅಂಶವನ್ನು ಹೊಂದಿರುವ ಸಾಸಿವೆಯು ಮೂಳೆಯನ್ನು ಬಲಿಷ್ಠಗೊಳಿಸುವುದು. ಉಗುರು, ಕೂದಲು ಮತ್ತು ಹಲ್ಲುಗಳನ್ನು ಬಲಪಡಿಸಲು ಇದು ತುಂಬಾ ನೆರವಾಗುವುದು. ಸಾಸಿವೆಯಲ್ಲಿ ಇರುವ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣವು ಒಸಡು, ಮೂಳೆ ಮತ್ತು ಹಲ್ಲಿನ ನೋವು ಕಡಿಮೆ ಮಾಡುವುದು. ಸಾಸಿವೆಯು ರ‍್ಮವನ್ನು ಹೈಡ್ರೇಟ್ ಮಾಡುವುದು ಮತ್ತು ರ‍್ಮದಲ್ಲಿ ಇರುವಂತಹ ಎಲ್ಲಾ ರೀತಿಯ ಕಲ್ಮಷವನ್ನು ಹೊರಗೆ ಹಾಕುವುದು ಮತ್ತುಮೊಡವೆಯನ್ನು ತಡೆಯುತ್ತದೆ ಮತ್ತು ಎಣ್ಣೆಯಲ್ಲಿರುವ ವಿಟಮಿನ್ ಎ, ಕೆ ಮತ್ತು ಸಿ ಅಂಶವು ವಯಸ್ಸಾಗುವ ಲಕ್ಷಣಗಳು ಮೂಡದಂತೆ ಮಾಡುವುದು. ಈ ಎಣ್ಣೆಯಲ್ಲಿ ಇರುವ ಆಂಟಿ ಬ್ಯಾಕ್ಟೀರಿಯಲ್ ಅಂಶ ಮೂತ್ರಕೋಶ, ಮೂತ್ರ ನಾಳ ಹಾಗೂ ಹೊಟ್ಟೆಯಲ್ಲಿ ಇರುವ ಸಾಕಷ್ಟು ಬ್ಯಾಕ್ಟೀರಿಯ ಗಳನ್ನು ನಿವಾರಣೆ ಮಾಡುತ್ತದೆ.
✍ ಲಲಿತಶ್ರೀ ಪ್ರೀತಂ ರೈ