image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಸಿಲಿನ ರಾಣಿಯೆಂದು ಕರೆಯಲಾಗುವ ಪನ್ನೇರಳೆ ಹಣ್ಣಿನ ಔಷದೀಯ ಗುಣಗಳನ್ನು ತಿಳಿದುಕೊಳ್ಳೋಣ ಬನ್ನಿ.....

ಬಿಸಿಲಿನ ರಾಣಿಯೆಂದು ಕರೆಯಲಾಗುವ ಪನ್ನೇರಳೆ ಹಣ್ಣಿನ ಔಷದೀಯ ಗುಣಗಳನ್ನು ತಿಳಿದುಕೊಳ್ಳೋಣ ಬನ್ನಿ.....

ಬಿಸಿಲಿನ ರಾಣಿಯೆಂದು ಕರೆಯಲಾಗುವ ಪನ್ನೇರಳೆ ಹಣ್ಣು ವಿಶೇಷವಾಗಿ ಕರಾವಳಿಯಲ್ಲಿ ಹೆಚ್ಚಾಗಿ ಬೆಳೆಯುವಂತಹ ಹಣ್ಣು. ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. ಕಡುಮಣ್ಣಿನ ಪ್ರದೇಶದಲ್ಲಿ ಪನ್ನೇರಳೆ ಸಮೃದ್ಧವಾಗಿ ಬೆಳೆಯುತ್ತದೆ. ಇದನ್ನು ಕನ್ನಡದಲ್ಲಿ ಹಲವಾರು ಹೆಸರುಗಳಿವೆ. ಜಂಬೂ ನೇರಳೆ, ಪನ್ನೀರ್ ಹಣ್ಣು ,ಪನ್ನೇರಳೆ  ಎಂದೆಲ್ಲಾ ಕರೆಯುತ್ತಾರೆ. ಪನ್ನೇರಳೆ ಹಣ್ಣಿನ ಬೀಜದಿಂದ ಸುಲಭವಾಗಿ ಸಸ್ಯಾಭಿವೃದ್ಧಿ ಮಾಡಬಹುದು. ಗಿಡ ನೆಟ್ಟ ನಂತರ ಆರೇಳು ವರ್ಷಗಳಲ್ಲಿ ಫಸಲನ್ನು ಕೊಡಲಾರಂಭಿಸುತ್ತದೆ.  ಈ ಹಣ್ಣಿನ ಮರ ದೊಡ್ಡದಾಗಿ ಬೆಳೆದು ನಲವತ್ತರಿಂದ ಐವತ್ತು ವರ್ಷಗಳವರೆಗೆ ಹಣ್ಣುಗಳನ್ನು ನೀಡುತ್ತದೆ.  ಇದಕ್ಕೆ ವಿಶೇಷ ಆರೈಕೆ ಬೇಕಾಗಿರುವುದಿಲ್ಲ. ಪನ್ನೇರಳೆ ಮರದ ವಿವಿಧ ಭಾಗಗಳಿಂದ ಹಲವಾರು ಉಪಯೋಗಗಳಿವೆ. ಇದರಲ್ಲಿ ವಿಟಮಿನ್ ಬಿ1, ಬಿ2, ಬಿ3 ಗಳಿದ್ದು, ಕ್ಯಾಲ್ಸಿಯಮ್, ಮೆಗ್ನೀಷಿಯಮ್, ಕಾರ್ಬೋಹೈಡ್ರೇಟ್, ಮ್ಯಾಂಗನೀಸ್, ರಂಜಕ, ಪೊಟ್ಯಾಷಿಯಂ , ಕಬ್ಬಿಣ ಹಾಗೂ ಸತುಗಳನ್ನೊಳಗೊಂಡಿದೆ. ಈ ಹಣ್ಣಿನ ಮಿಶ್ರಣವನ್ನು ಮೂತ್ರವರ್ಧಕ ಔಷಧವಾಗಿ ಬಳಸುತ್ತಾರೆ.

ಹಣ್ಣಿನ ಸೇವನೆಯಿಂದ ದೇಹದ ಚರ್ಮವನ್ನು ಪುನರ್ಯ್ಯೌವ್ವನಗೊಳಿಸುತ್ತದೆ. 

ವಿಟಮಿನ್ ಎ ಅನ್ನು ಹೊಂದಿರುವ ಪನ್ನೇರಳೆ ಹಣ್ಣು, ಕಣ್ಣಿನ ಆರೈಕೆ ಮಾಡುತ್ತದೆ. 

ಎಲೆಯ ಕಷಾಯವನ್ನು ಸಂಧಿವಾತದ ಚಿಕಿತ್ಸೆಗೆ ಬಳಸಳಲಾಗುತ್ತದೆ. ಎಲೆ, ತೊಗಟೆ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿರುತ್ತವೆ.

ಪನ್ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹದ ಕೊಬ್ಬಿನಾಂಶವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. 

ಇದರ ಸೇವನೆಯಿಂದ ಸ್ತ್ರೀಯರನ್ನು ಸ್ತನ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. 

ಪನ್ನೇರಳೆ ಹಣ್ಣು ಮೆದುಳಿಗೆ ಶಕ್ತಿವರ್ಧಕ ಔಷಧವಾಗಿದೆ.

ನೆನೆಸಿಟ್ಟು ರುಬ್ಬಿದ ಬೀಜದ ಮಿಶ್ರಣವನ್ನು ಸೇವಿಸುವ ಮೂಲಕ ರಕ್ತಹೀನತೆಯಿಂದ ನಿವಾರಣೆ ಪಡೆಯಬಹುದು. 

ಒಣಗಿದ ಬೀಜವನ್ನು ಪುಡಿಮಾಡಿ, ಅತಿಸಾರ ಮತ್ತು ಲೈಂಗಿಕ ರೋಗಗಳ ಚಿಕಿತ್ಸೆಗೆ ಬಳಸುತ್ತಾರೆ. 

ಉಬ್ಬಸವನ್ನು ನಿಯಂತ್ರಿಸುವಲ್ಲಿ ಪನ್ನೇರಳೆಯ ಬೀಜ ಸಹಕಾರಿಯಾಗಿದೆ. 

ಪನ್ನೇರಳೆಯ ಬೀಜ ಮಧುಮೇಹವನ್ನು ಗುಣಪಡಿಸುತ್ತದೆ. ಆದರೆ ಇದರ ಬೀಜವನ್ನು ಉಪಯೋಗಿಸುವ ಮೊದಲು ತಜ್ಙರನ್ನು ಸಂಪರ್ಕಿಸುವುದು ಉತ್ತಮ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ