image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಿವನಿಗೆ ಅತಿ ಪ್ರೀಯವಾದ 'ತುಂಬೆ ಹೂವೇ' ಸಂಸ್ಕೃತದ 'ದ್ರೋಣಪುಷ್ಪ'

ಶಿವನಿಗೆ ಅತಿ ಪ್ರೀಯವಾದ 'ತುಂಬೆ ಹೂವೇ' ಸಂಸ್ಕೃತದ 'ದ್ರೋಣಪುಷ್ಪ'

ಸಂಸ್ಕೃತದಲ್ಲಿ ದ್ರೋಣ ಪುಷ್ಪ, ಹಿಂದಿಯಲ್ಲಿ ಗೋಮ ಮಧುಪತಿ, ಮರಾಠಿಯಲ್ಲಿ ಬಹುಫೂಲ್, ತೆಲುಗಿನಲ್ಲಿ ತುಮ್ಮಿಚಿಟ್ಟು ಎಂದೆಲ್ಲಾ ಕರೆಸಿಕೊಳ್ಳುವ ಶಿವನಿಗೆ ತುಂಬಾ ಇಷ್ಟವಾದ ತುಂಬೆ ಗಿಡಕ್ಕೆ ಆಯುರ್ವೇದದಲ್ಲಿ ಬಹಳ ಮಹತ್ವವಿದೆ. ಉತ್ಕರ್ಷಣ ನಿರೋಧಕ ಮತ್ತು ಸೂಕ್ಷ್ಮಜೀವಿ ಪ್ರತಿರೋಧಕವಾಗಿ ಆಯುರ್ವೇದದಲ್ಲಿ ಬಳಸುವ ವಾಡಿಕೆಯಿದೆ. ತುಂಬೆ ಹೂವಿನ ಜೊತೆಗೆ ಗಿಡದ ಕಾಂಡ, ಬೇರು ಮತ್ತು ಎಲೆಯನ್ನು ಕೂಡ ಮನೆ ಮದ್ದಿನಲ್ಲಿ ಬಳಸಲಾಗುವುದು.

ತುಂಬೆ ಎಲೆ ರಸಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಆಗಾಗ ಕಾಡುವ ಜ್ವರಕ್ಕೆ ಅತ್ಯುತ್ತಮ ಔಷಧಿಯಾಗಬಲ್ಲದು.

ಚೆನ್ನಾಗಿ ಒಣಗಿಸಿದ ತುಂಬೆ ಗಿಡವನ್ನು ಪುಡಿ ಮಾಡಿ, ಕಷಾಯ ಮಾಡಿಕೊಂಡು ದೇಹದ ಮೇಲಿನ ಗಾಯವನ್ನು ತೊಳೆದರೆ ಗಾಯದ ನಂಜು ಮಾಯವಾಗುತ್ತದೆ.

ತುಂಬೆ ಎಲೆ ಪೇಸ್ಟ್ ಮಾಡಿ, ಅಲರ್ಜಿಯಾದಲ್ಲಿ ಹಚ್ಚಿದರೆ ಉತ್ತಮ ಔಷದಿಯಾಗುತ್ತದೆ.

ಋತುಸ್ರಾವದ ಸಮಯದಲ್ಲಿ ಅತೀವ ರಕ್ತ ಸ್ರಾವವಾಗುತ್ತಿದ್ದರೆ, ತುಂಬೆ ಎಲೆ ಪೇಸ್ಟ್ ಮಾಡಿ ನಿಂಬೆರಸ, ಎಳ್ಳೆಣ್ಣೆ ಸೇರಿಸಿ, ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ ಪಲಿತಾಂಶ ಸಿಗುತ್ತದೆ.

ಬೇಯಿಸಿದ  ತುಂಬೆಯ ಸಮೂಲವನ್ನು ಅನ್ನದೊಂದಿಗೆ ಸೇವಿಸಿದರೆ, ವೈಟ್ ಜಿಸ್ಚಾರ್ಜ್ ಸಮಸ್ಯೆ ದೂರವಾಗುತ್ತದೆ.

ಜೇನು ತುಪ್ಪದೊಂದಿಗೆ ತುಂಬೆ ಹೂ ರಸ ಕುಡಿಸಿದರೆ, ಮಕ್ಕಳ ಹೊಟ್ಟೆ ಹುಳ ತೊಲಗುತ್ತದೆ.

ತುಂಬೆ ಗಿಡವನ್ನು ಒಣಿಗಿಸಿ, ಅದರ ಪುಡಿ ಕಷಾಯವನ್ನು ಆಗಾಗ ಸೇವಿಸುತ್ತಿದ್ದರೆ, ರಕ್ತ ಶುದ್ಧಿಯಾಗುತ್ತದೆ.

ಸಂಧಿವಾತ, ಚರ್ಮರೋಗ, ಕೆಮ್ಮು, ಗಂಟಲು ಬೇನೆ, ನೆಗಡಿಗೆ ತುಂಬಾ ಒಳ್ಳೆಯ ಔಷದಿ.

ಶೀತದಿಂದ ಮೂಗು ಕಟ್ಟಿದ್ದಂತಾಗಿ ತಲೆ ನೋವು ಉಂಟಾದರೆ ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ ಅದರ ಹಬೆ ತೆಗೆದುಕೊಂಡರೆ ಉತ್ತಮ ಪರಿಣಾಮ ನೀಡುತ್ತದೆ.

ಯಾವುದೇ ಮನೆ ಮದ್ದು ಉಪಯೋಗಿಸುವ ಮೊದಲು ತಜ್ಞರ ಸಲಹೆ ಪಡೆಯಲು ಮರೆಯದಿರಿ

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ