image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೀರಿನ ಸೆಲೆಯನ್ನು ಆಕರ್ಷಿಸುವ ಗುಣವುಳ್ಳ ಅತ್ತಿ ಮರದಲ್ಲಿದೆ ಔಷಧೀಯ ಆಗರ.....

ನೀರಿನ ಸೆಲೆಯನ್ನು ಆಕರ್ಷಿಸುವ ಗುಣವುಳ್ಳ ಅತ್ತಿ ಮರದಲ್ಲಿದೆ ಔಷಧೀಯ ಆಗರ.....

ಸಾಧಾರಣ 10-15 ಮೀಟರ್ ಎತ್ತರ ಬೆಳೆಯುವ ಸದಾ ಹಸಿರಾಗಿರುವ ಈ ವೃಕ್ಷ ಪೇಟೆ ಹಳ್ಳಿ ಎನ್ನದೆ ಎಲ್ಲಾ ಕಡೆ ಬೆಳೆೆಯುತ್ತದೆ. ಕೆಲವು ಕಡೆ ಕುರಿ, ಆಡು, ದನಕರುಗಳಿಗೆ ಇದರ ಎಲೆಯನ್ನು ಮೇವಾಗಿ ತಿನ್ನಿಸುತ್ತಾರೆ.  ಎಲೆ, ಕಾಯಿ, ಫಲ, ತೊಗಟೆಯಿಂದ ತಿಳಿ ಹಳದೀ ವರ್ಣದ, ಅಂಟಾದ ಹಾಲು ಬರುತ್ತದೆ. ಕಾಯಿ ಹಸಿರಾಗಿದ್ದು, ಗುಂಡಾಗಿರುವುದು. ಹಣ್ಣಾದಾಗ ಕೆಂಪು ಬಣ್ಣವನ್ನು ಹೊಂದುವುದು. ಮೃದು ಮತ್ತು ಪರಿಮಳಯುಕ್ತವಾದ ಇದರ ಹಣ್ಣುಗಳೆಂದರೆ ಕೋತಿ, ಅಳಿಲು, ಗಿಣಿ, ಮತ್ತು ಪಶುಪಕ್ಷಿಗಳಿಗೆ ಪ್ರಿಯ ಮತ್ತು ಪುಷ್ಟಿದಾಯಕವೂ ಹೌದು. ಇದರ ಹೂವುಗಳು ಅತಿ ಚಿಕ್ಕದಾಗಿದ್ದು ಕಾಣಸಿಗುವುದು ಅಪರೂಪ. ಯಾರಾರಾದರೂ ಸಿಗುವುದು ಅಪರೂಪವಾದರೆ ಹಳ್ಳಿಗಳ ಕಡೆ ಏನು ಅತ್ತಿ ಹೂವಿನಂತೆ ಅಪರೂಪ ಎನ್ನುವ ಮಾತಿದೆ. ಎಳೆ ಅತ್ತಿ ಕಾಯಿಯನ್ನು ತರಕಾರಿಯಾಗಿ ಉಪಯೋಗಿಸಲಾಗುತ್ತದೆ. ಅತ್ತಿ ಮರ ಇರುವ ಕಡೆ ನೀರಿನ ಸೆಲೆಯನ್ನು  ಆಕರ್ಷಿಸುತ್ತದೆ ಎನ್ನುವ ಸತ್ಯವನ್ನು ಇತ್ತೀಚೆಗೆ green man of India ಎನ್ನುವ ಖ್ಯಾತಿ  ಪಡೆದಿರುವ Dr. Nair ರಿಂದ ತಿಳಿಯಿತು. ಅವರ ಪ್ರಕಾರ ನೀಲಗಿರಿ  ಮರವಿದ್ದ ಕಡೆ ನೀರಿನ ಸೆಲೆ ದೂರ ಹೋದರೆ ಅತ್ತಿ ಮರ ನೀರಿನ ಸೆಲೆಯನ್ನು ಆಕರ್ಷಿಸುತ್ತದೆ. ಅತ್ತಿಯನ್ನು ಆಯುರ್ವೇದದಲ್ಲಿಯೂ ಉಪಯೋಗಿಸಲಾಗುತ್ತದೆ. ಅಷ್ಟೇ ಅಲ್ಲದೆ ಮನೆ ವೈದ್ಯದಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತದೆ.

ಅತ್ತಿ ಹಣ್ಣಿನ ಸೇವನೆಯಿಂದ ಜೀರ್ಣಕ್ರಿಯೆ ಹೆಚ್ಚಿಸುತ್ತದೆ. 

ಹಣ್ಣನ್ನು ಜೇನುತುಪ್ಪದೊಡನೆ ನಿಯಮಿತವಾಗಿ ಸೇವಿಸಿದರೆ ಮೂತ್ರದಲ್ಲಿ ಅಥವಾ ಮಲದಲ್ಲಿ ರಕ್ತ ಹೋಗುವುದನ್ನು ಗುಣಪಡಿಸುತ್ತದೆ. 

ಹಣ್ಣನ್ನು ತಿನ್ನುವುದರಿಂದ ಕಫದ ಬಾಧೆ, ರಕ್ತನಾಳದ ದೋಷ ಉಪಶಮನವಾಗುತ್ತದೆ.

ಚೆನ್ನಾಗಿ ಪಕ್ವವಾದ, ಹುಳುಕಿಲ್ಲದ, ಒಂದು ಹಿಡಿ ಅತ್ತಿ ಹಣ್ಣುಗಳನ್ನು ಚೆನ್ನಾಗಿ ಒಣಗಿಸಿ, ನಯವಾದ ವಸ್ತ್ರಗಾಳಿತ ಚೂರ್ಣ ಮಾಡಿ, 1/2 ಟೀ ಚಮಚ ಚೂರ್ಣಕ್ಕೆ ಸ್ವಲ್ಪ ಜೇನು ಬೆರೆಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದರಿಂದ ಬಹು ಮೂತ್ರ ಖಾಯಿಲೆ ಹತೋಟಿಗೆ ಬರುತ್ತದೆ. 

ಅತಿಯಾದ ಬೇಧಿಯಾಗುತ್ತಿದ್ದರೆ ಅತ್ತಿಯ ಹಾಲನ್ನು ಸಕ್ಕರೆ ಪುಡಿ ಸಮೇತ ಸೇವಿಸುವುದರಿಂದ ಕಡಿಮೆಯಾಗುತ್ತದೆ. 

ಅತ್ತಿ ಎಲೆಗಳ ರಸವನ್ನು ಹಿಂಡಿ, ಗೋದಿ ಹಿಟ್ಟಿನಲ್ಲಿ ಚೆನ್ನಾಗಿ ಕಲೆಸಿ ಗಟ್ಟಿಯಾದ ಬಾವುಗಳಿಗೆ  ಮತ್ತು ಕೀವು ಸೋರುತ್ತಿರುವ ಭಾಗಗಳಿಗೆ ಲೇಪಿಸಿದರೆ ಶೀಘ್ರವಾಗಿ ಗುಣವಾಗುವುವು.

ಅತ್ತಿಮರದ ಕಾಂಡಕ್ಕೆ ಗಾಯ ಮಾಡಿ ಅದರಲ್ಲಿ  ಸುರಿಯುವ ಹಾಲನ್ನು ಮಡಕೆ ಚೂರಿನಲ್ಲಿ ಶೇಖರಿಸಿ, ಕೆನ್ನೆ ಬೀಗಿರುವ ಕಡೆ ಲೇಪಿಸುವುದು ಅಥವಾ ಅತ್ತಿ ಮರದ ಬೇರನ್ನು ನೀರಿನಲ್ಲಿ ತೇದು ಸ್ವಲ್ಪ ಹಿಂಗು ಮತ್ತು ಹರಳೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಲೇಪಿಸುವುದರಿಂದ ಗಂಟಮಾಲ ಕಡಿಮೆಯಾಗುತ್ತದೆ. 

ಅತ್ತಿ ಮರದ ತೊಗಟೆಯನ್ನು ನೆರಳಲ್ಲಿ ಚೆನ್ನಾಗಿ ಒಣಗಿಸಿ ವಸ್ತ್ರಗಾಳಿತ ಚೂರ್ಣ ಮಾಡಿ, ಎರಡು ಟೀ ಚಮಚ ಪುಡಿಯನ್ನು ಕುದಿಯುವ ನೀರಿಗೆ ಹಾಕಿ, ಆರಿದ ಕಷಾಯವನ್ನು ಎರಡು ಟೀ ಚಮಚದಂತೆ ಬೆಳಿಗ್ಗೆ ಸಾಯಂಕಾಲ ಸೇವಿಸುವುದರಿಂದ ಮದುಮೇಹ ಹತೋಟಿಗೆ ಬರುತ್ತದೆ. 

ಹತ್ತಿಯ ಹಣ್ಣನ್ನು ಉಪಯೋಗಿಸುವ ಮೊದಲು  ಅದರಲ್ಲಿ ಇರುವೆ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಹತ್ತಿಯ ಹಣ್ಣಿನಲ್ಲಿ ಇರುವೆ ಅಥವಾ ಹುಳಗಳು ಹೆಚ್ಚಾಗಿ ಇರುತ್ತದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ