image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಮ್ಮ ಹಿರಿಯರು ಉಪಯೋಗಿಸುತ್ತಿದ್ದ, ಔಷಧೀಯ ಆಗರವನ್ನೇ ತುಂಬಿಕೊಂಡಿದ್ದ "ಮಂತುಪುಳಿ" ಇಂದು ಮರೆಯಾಗುತ್ತಿದೆ....

ನಮ್ಮ ಹಿರಿಯರು ಉಪಯೋಗಿಸುತ್ತಿದ್ದ, ಔಷಧೀಯ ಆಗರವನ್ನೇ ತುಂಬಿಕೊಂಡಿದ್ದ "ಮಂತುಪುಳಿ" ಇಂದು ಮರೆಯಾಗುತ್ತಿದೆ....

ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಉಪ್ಪಾಗೆ ಮರಕ್ಕೆ ಗಾಂಬೋಜ್, ಕಾಚ್‌ಪುಳಿ,ಕಾಚಂಪುಳಿ, ಮಂತುಪುಳಿ, ಪಣಪ್ಪುಳಿ ಎಂಬೆಲ್ಲಾ ಹೆಸರುಗಳಿವೆ. ತಮಿಳು ಮತ್ತು ಮಲಯಾಳಂನಲ್ಲಿ ಕೋಡಂಪುಳಿ ಎಂದು ಕರೆಯಲ್ಪಡುತ್ತದೆ. ತಮಿಳುನಾಡಿನ ನೀಲಗಿರಿ, ಕೇರಳದ ತಿರುವಾಂಕೂರು, ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಈ ಮರದ ಹಣ್ಣು ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ.ಈ ಹಣ್ಣಿನ ಒಣಸಿಪ್ಪೆ ಸಂಸ್ಕರಿಸಿ ಮಂದಸಾರ ತಯಾರಿಸುತ್ತಾರೆ. ಇದು ಕೊಡಗು ಹಾಗೂ ಕೇರಳದಲ್ಲಿ ಹಂದಿಮಾಂಸದ ಮತ್ತು ಮೀನಿನ ಅಡುಗೆಗಳಿಗೆ ಬಳಸಲ್ಪಡುತ್ತದೆ. ಕೊಡಗಿನಲ್ಲಿ ಕೃಷಿಕರು ಮಳೆಗಾಲದಲ್ಲಿ ಉಪ್ಪಾಗೆ ಹಣ್ಣನ್ನು ಸಂಗ್ರಹಿಸಿ ಒಣಗಿಸಿಡುತ್ತಾರೆ. ಇದನ್ನು ಮಾಂಸಹಾರಕ್ಕೆ ಹುಳಿ ಪದಾರ್ಥವಾಗಿ ಬಳಸುತ್ತಾರೆ.

ಕೆಲವು ಪದಾರ್ಥಗಳಿಗೆ ಉಪ್ಪಾಗೆಯ ಒಣಗಿಸಿದ ಸಿಪ್ಪೆಯನ್ನು ಉಪಯೋಗಿಸಿದರೆ ಹಣ್ಣಿನ ನೀರನ್ನು ಇಂಗಿಸಿ ತಯಾರಿಸಿದ ಹುಳಿನೀರು ಕೂಡ ಹೆಚ್ಚಾಗಿ ಬಳಸುತ್ತಾರೆ.

ಹಣ್ಣಿನಲ್ಲಿ ಮಾನವನ ದೇಹದ ಕೊಬ್ಬು ಮತ್ತು ಬೊಜ್ಜನ್ನು ಕರಗಿಸಲು ಸಹಾಯವಾಗುವುದೆಂದು ಹೇಳಲಾಗುವ ಹೈಡ್ರಾಕ್ಸಿ ಸಿಟ್ರಿಕ್ ಅಂಶ ಹೊಂದಿರುವುದರಿಂದ ಇದಕ್ಕೆ ಬಹುಬೇಡಿಕೆಯಿದೆ.

ಉಪ್ಪಾಗೆ ಹಣ್ಣಿನ ಸೇವನೆಯಿಂದ ಮಲಬದ್ಧತೆ, ಮುಟ್ಟಿನ ತೊಂದರೆ, ಜಂತುಹುಳದ ಬಾಧೆ ಮುಂತಾದವುಗಳನ್ನು ನಿವಾರಿಸಬಹುದು. ಕಣ್ಣುುಕುರಿ, ಕಾಲಿನ ಒಡಕಿಗೂ ಇದು ಮದ್ದು.

ಹಣ್ಣಿನ ಬೀಜವು ಕೊಬ್ಬಿನಂಶ ಹೊಂದಿದ್ದು ಇದರಿಂದ ತುಪ್ಪವನ್ನು ತೆಗೆಯಲಾಗುತ್ತದೆ. ಇದರ ಬೀಜಗಳನ್ನು ಒಣಗಿಸಿ ಕುಟ್ಟಿ ಬೇಯಿಸಿದರೆಇದರ ಕೊಬ್ಬು ಖಾದ್ಯ ತೈಲವಾಗಿ ಉಪಯೋಗಿಸಬಹುದು.ಇದು ಹಳದಿ ಬಣ್ಣದಿಂದ ತುಪ್ಪದಂತೆ ಗಟ್ಟಿಯಾಗುವ ಗುಣವನ್ನು ಹೊಂದಿದ್ದು ತಿಂಡಿತಿನಿಸುಗಳ ತಯಾರಿಗೆ ಯೋಗ್ಯವಾಗಿದೆ. ಮಲೆನಾಡಿನಲ್ಲಿ ಇದು ಉಪ್ಪಾಗೆ ತುಪ್ಪ ಎಂದು ಬಳಸಲ್ಪಡುತ್ತದೆ.

ಪುನರ್ಪುಳಿಯಂತೆ ಶರಬತ್ತು ಕೂಡ ತಯಾರು ಮಾಡಬಹುದು ಮಾಡಿ ಕುಡಿದರೆ ಪಿತ್ತಕಾರಕವಾಗಿ ಕೆಲಸ ಮಾಡುತ್ತದೆ.

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ