image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೇನುತುಪ್ಪದಲ್ಲಿದೆ ಸಿಹಿಯ ಜೊತೆ ಆರೋಗ್ಯ ....

ಜೇನುತುಪ್ಪದಲ್ಲಿದೆ ಸಿಹಿಯ ಜೊತೆ ಆರೋಗ್ಯ ....

ಸಹಸ್ರಾರು ವರ್ಷಗಳಿಂದ ಜೇನುತುಪ್ಪ ಅಡುಗೆ ಮನೆಯಲ್ಲಿ ಮಾತ್ರವಲ್ಲದೆ, ಧಾರ್ಮಿಕವಾಗಿ, ಔಷಧೀಯವಾಗಿ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಜಗತ್ತಿನಾದ್ಯಂತ ಜೇನು ತುಪ್ಪ ಹಲವಾರು ವಿಧದಲ್ಲಿ ಉಪಯೋಗಿಸಲ್ಪಡುತ್ತಿದೆ.

ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿ ಕುಡಿದರೆ, ಅದು ರಕ್ತದ ಕೆಂಪು ರಕ್ತಕಣಗಳ ಸಂಖ್ಯೆಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ.

ತುಸು ಬೆಚ್ಚಗಿನ ನೀರಿನ ಜೊತೆಜೇನು ತುಪ್ಪವನ್ನು ಸೇರಿಸಿ ಸೇವಿಸಿದರೆ, ರಕ್ತದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ, ರಕ್ತಹೀನತೆಯನ್ನು ಗುಣಪಡಿಸುತ್ತದೆ.

ಜೇನುತುಪ್ಪದಲ್ಲಿ ಡೆಕ್ಸ್ಟ್ರಿನ್ ಎಂಬ ಪಿಷ್ಟದ ನಾರು ಇದ್ದು, ಇದು ದೇಹದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

1-2 ಚಮಚಗಳಷ್ಟು ಜೇನುತುಪ್ಪವನ್ನು ಒಂದು ಲೋಟ ನೀರಿನಲ್ಲಿ ಬೆರಸಿ, ದಿನಕ್ಕೆ ಎರಡು ಬಾರಿಯಂತೆ ಸೇವಿಸುತ್ತ ಬಂದರೆ, ಅಂಗಾಂಶಗಳು ಪೋಷಣೆಗೊಂಡು ನರಮಂಡಲದ ದೌರ್ಬಲ್ಯವನ್ನು ನಿವಾರಿಸಲು ಸಹಾಯ ಮಾಡುತ್ತದೆ.

3 ಚಮಚಗಳಷ್ಟು ಜೇನುತುಪ್ಪವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿದಾಗ, ಅದು ತ್ವರಿತ ಶಕ್ತಿಯನ್ನು ಒದಗಿಸುತ್ತದೆ ಹಾಗೂ ದೇಹದ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

ತರಚು ಗಾಯದ ಮೇಲೆ ಜೇನುತುಪ್ಪವನ್ನು ಹಚ್ಚಿದರೆ, ಅದು ಗಾಯವನ್ನು ಬೇಗ ಗುಣ ಮಾಡುತ್ತದೆ ಹಾಗೂ ಗಾಯದ ಕಲೆಯನ್ನು ಕಡಿಮೆ ಮಾಡುತ್ತದೆ.

ದಿನಕ್ಕೆರಡು ಬಾರಿ, ಜೇನುತುಪ್ಪ ಮತ್ತು ತಾಜಾ ನಿಂಬೆಯ ರಸವನ್ನು ಮುಖಕ್ಕೆ ಹಚ್ಚಿ, 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಮುಖದ ಮೇಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕಬಹುದು.

ಶುಂಠಿಯನ್ನು ಜಜ್ಜಿ, ಅದರ ರಸವನ್ನು ತೆಗೆದು 15 ನಿಮಿಷಗಳ ಕಾಲ ಇದನ್ನು ಒಂದು ಗಾಜಿನ ಬಟ್ಟಲಿನಲ್ಲಿ ಇಟ್ಟು, ಆಮೇಲೆ, ತಳಸೇರಿದ್ದನ್ನು ಹಾಗೆ ಬಿಟ್ಟು, ರಸವನ್ನು ಎರಡು ಚಮಚ ಜೇನುತುಪ್ಪದ ಜೊತೆ ಸೇರಿಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಅತಿಯಾದರೆ ಅಮೃತವೂ ವಿಷವೇ ಎನ್ನುವುದನ್ನು ಮರೆಯದಿರಿ

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ