ಭಾರತದ ಚರಿತ್ರೆಯಲ್ಲಿ ತೆಂಗಿಗೆ ಪ್ರಮುಖ ಸ್ಥಾನವಿದ್ದು, ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ಧಾರ್ಮಿಕವಾಗಿಯೂ ತೆಂಗಿನ ಮರಕ್ಕೆ ಮಹತ್ವವಿದೆ. ಈ ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಜನಪದರು ಕರೆಯುವುದು ಇದೆ. ಇದಕ್ಕೆ ಕಾರಣ ತೆಂಗಿನ ಮರದ ಎಲ್ಲಾ ಭಾಗಗಳು ಉಪಯೋಗಕ್ಕೆ ಬರುವುದೇ ಇರಬಹುದು. ಅದರಲ್ಲಿ ಎಳನೀರು ಒಂದು. ಎಳನೀರಿನಲ್ಲಿ ಕಡಿಮೆ ಕ್ಯಾಲರಿ ಇದ್ದು, ನೈಸರ್ಗಿಕ ಕಿಣ್ವಗಳು, ಖನಿಜಾಂಶಗಳಾಗಿರುವಂತಹ ಪೊಟಾಶಿಯಂ ಕೂಡ ಇದರಲ್ಲಿದೆ.
ವ್ಯಾಯಾಮದ ಬಳಿಕ ಎಳನೀರು ಕುಡಿದರೆ ಅದರಿಂದ ದೇಹವು ಕಳೆದುಕೊಂಡಿರುವ ಎಲೆಕ್ಟ್ರೋಲೈಟ್ಸ್ ಮರಳಿ ಪಡೆಯಲು ಸಹಕಾರಿ.
ಮಲಗುವ ಮೊದಲು ಒಂದು ಲೋಟ ಎಳನೀರು ಕುಡಿದರೆ ಒತ್ತಡ ನಿವಾರಣೆ ಆಗುವುದು ಮತ್ತು ಮನಸ್ಸು ಶಾಂತವಾಗುವುದು.
ಎಳನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಇರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಎಳನೀರಿನಲ್ಲಿ ಮೆಗ್ನೇಶಿಯಂ ಪ್ರಮಾಣ ಹೇರಳವಾಗಿರುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಿ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ.
ಇದರಲ್ಲಿ ವಿಟಮಿನ್ ಮತ್ತು ಎನರ್ಜಿ ಪೋಷಕಾಂಶಗಳು ಅಧಿಕವಾಗಿದ್ದು, ತೂಕ ಇಳಿಸಲು ಸಹಾಯ ಮಾಡುತ್ತದೆ.
ಎಳನೀರಿನಲ್ಲಿ ಸಾಕಷ್ಟು ಪೊಟ್ಯಾಶಿಯಂ ಅಂಶ ಇರುವುದರಿಂದ ರಕ್ತದೊತ್ತಡ ಕಡಿಮೆ ಮಾಡುವುದರೊಂದಿಗೆ ರಕ್ತಹೆಪ್ಪುಗಟ್ಟುವುದನ್ನು ತಪ್ಪಿಸುತ್ತದೆ.
ಎಳನೀರು ಚರ್ಮಕ್ಕೆ ಕಾಂತಿ ನೀಡುವುದರೊಂದಿಗೆ ಚರ್ಮದಲ್ಲಿನ ಹೆಚ್ಚಿನ ಎಣ್ಣೆಯ ಅಂಶವನ್ನು ಕಡಿಮೆ ಮಾಡುವುದಲ್ಲದೆ ಮುಖದ ಸುಕ್ಕು ಕಡಿಮೆ ಮಾಡುತ್ತದೆ.
ಎಳನೀರಿನಲ್ಲಿ ಒಮೆಗಾ 3 ಹೇರಳವಾಗಿ ಇರುವುದರಿಂದ ಗರ್ಭದಲ್ಲಿನ ಮಗುವಿನ ಮೆದುಳಿನ ಬೆಳವಣಿಗೆ ಚುರುಕಾಗಲು ಗರ್ಭಿಣಿಯರು ಎಳನೀರು ಕುಡಿದಷ್ಟು ಒಳ್ಳೆಯದು.
ಎಳನೀರಿನಲ್ಲಿ ಗ್ಲುಕೋಸ್ ಪ್ರಮಾಣ ಹೇರಳವಾಗಿರುವುದರಿಂದ ದೇಹಾಯಾಸವನ್ನು ನಿವಾರಿಸಿ ದೇಹಕ್ಕೆ ಹೊಸ ಚೈತನ್ಯ ನೀಡುತ್ತದೆ.
ಎಳನೀರಿನಲ್ಲಿ ಫೈಬರ್ ಅಂಶ ಜಾಸ್ತಿಯಿದ್ದು, ಕೊಬ್ಬಿನಾಂಶ ಕಡಿಮೆ ಇರುವುದರಿಂದ ಹಸಿವು ಕಡಿಮೆ ಆಗಿ ಬೊಜ್ಜು ಬೆಳೆಯುವುದನ್ನು ನಿಯಂತ್ರಿಸುತ್ತದೆ.
ದಿನದಲ್ಲಿ ಒಂದು ಎಳನೀರು ಕುಡಿಯುವುದರಿಂದ ಬಿರು ಬಿಸಿಲಿನಲ್ಲಿ ದೇಹಕ್ಕೆ ಚೈತನ್ಯ ಒದಗಿಸುತ್ತದೆ.
✍ ಲಲಿತಶ್ರೀ ಪ್ರೀತಂ ರೈ