image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮನೆಯ ಮುಂದೆ ಹೂಕುಂಡದಲ್ಲಿ ಬೆಳೆಯಬಹುದಾದ "ಸಾಂಬ್ರಾಣಿ ಸೊಪ್ಪು" ವಿನ ಔಷಧೀಯ ಗುಣಗಳನ್ನು ತಿಳಿದುಕೊಳ್ಳಲು ಮರೆಯದಿರಿ

ಮನೆಯ ಮುಂದೆ ಹೂಕುಂಡದಲ್ಲಿ ಬೆಳೆಯಬಹುದಾದ "ಸಾಂಬ್ರಾಣಿ ಸೊಪ್ಪು" ವಿನ ಔಷಧೀಯ ಗುಣಗಳನ್ನು ತಿಳಿದುಕೊಳ್ಳಲು ಮರೆಯದಿರಿ

ಕರ್ಫೂರವಳ್ಳಿ, ಕಫುರುಳ್ಳಿ, ಓಮವಳ್ಳಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ದೊಡ್ಡಪತ್ರೆಯನ್ನು ಅನಾದಿಕಾಲದಿಂದಲೂ ಭಾರತೀಯ ಆಯುರ್ವೇದ ಹಾಗೂ ಸಿದ್ದ ಔಷದ ಪದ್ಧತಿಯಲ್ಲಿ ಬಳಸುತ್ತಾ ಬಂದಿದ್ದಾರೆ.

ದೊಡ್ಡಪತ್ರೆ ಸಸ್ಯವನ್ನು ಪ್ರತಿಯೊಂದು ಮನೆಯ ಹಿತ್ತಲಲ್ಲಿ ಅಥವಾ  ಮಣ್ಣಿನ ಕುಂಡಗಳಲ್ಲಿ ಬೆಳೆಸಬಹುದಾಗಿದೆ. 

ಇದು ಕೆಮ್ಮಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಚಿಕ್ಕ ಮಕ್ಕಳಿಗೆ ನೆಗಡಿ ಕೆಮ್ಮು ಕಫ ಇದ್ದರೆ ಒಂದು ಎಲೆಯನ್ನು ಜೇನುತುಪ್ಪದಲ್ಲಿ ಅದ್ದಿ ಅಥವಾ ಅರ್ಧ ಎಲೆಯ ರಸ ಹಿಂಡಿ ಆ ರಸಕ್ಕೆ ಮೂರು ತೊಟ್ಟು ಜೇನುತುಪ್ಪ ಸೇರಿಸಿ ತಿನ್ನಿಸಿದರೆ ಬೇಗ ಗುಣವಾಗುತ್ತೆ.

ದೊಡ್ಡಪತ್ರೆಯ 1ಚಮಚ ರಸಕ್ಕೆ ಚಿಟಿಕೆ ಹಿಪ್ಪಲಿ ಚೂರ್ಣ 1 ಚಮಚ ಜೇನುತುಪ್ಪ ಸೇರಿಸಿ ಮೂರ್ನಾಲ್ಕು ದಿನ ಬೆಳಿಗ್ಗೆ ಸಂಜೆ ಸೇವಿಸುತ್ತಾ ಬಂದರೆ ಎಂತಹ ಜ್ವರ ಇದ್ದರೂ ವಾಸಿಯಾಗುತ್ತೆ.

ದಿನವು ದೊಡ್ಡಪತ್ರೆ ಎಲೆಯ ಚಟ್ನಿ ಮಾಡಿ ಸೇವಿಸುವುದರಿಂದ ಮೂತ್ರಪಿಂಡದಲ್ಲಿನ ಕಲ್ಲುಗಳು ಕರಗಿ ಮೂತ್ರದಲ್ಲಿ ಹೊರ ಬರುತ್ತದೆ. ಹಾಗೇ ಮಧುಮೇಹ ಸಹ ತಹಬಂಧಿಗೆ ಬರುತ್ತದೆ. 

ಹಸಿವು ಅಜೀರ್ಣ ಸಮಸ್ಯೆ ಇದ್ದರೆ ದೊಡ್ಡಪತ್ರೆ ಎಲೆಗಳು ಅಥವಾ ಕಷಾಯ ಸೇವಿಸಿದರೆ ಶಮನವಾಗುತ್ತದೆ. ತಲೆನೋವಿಗೆ ಇದರ ಎಲೆಗಳ ರಸ ಹಣೆಗೆ ಲೇಪನ ಮಾಡುತ್ತಾ ಬಂದರೆ ಶೀಘ್ರ ಗುಣವಾಗುತ್ತದೆ

ಬಾಯಿ ಹುಣ್ಣು, ಹಲ್ಲು ನೋವು ಇದ್ದಾಗ ಐದಾರು ದೊಡ್ಡಪತ್ರೆಯ ಎಲೆಗಳನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಒಂದು ಲೋಟ ನೀರು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ, ಉಗುರು ಬೆಚ್ಚಗಾದ ಮೇಲೆ ಮುಕ್ಕಳಿಸುತ್ತಿದ್ದರೆ ನಿವಾರಣೆಯಾಗುತ್ತದೆ. 

ದೊಡ್ಡಪತ್ರೆ ಕಷಾಯ ಸೇವಿಸುದರಿಂದ ಅಸ್ತಮಾ ಕಾಯಿಲೆ ಸಹ ಗುಣವಾಗುವುದರೊಂದಿಗೆ  ಇದರ ರಸವನ್ನು ದಿನವು ತೆಗೆದುಕೊಂಡರೆ ಸೊಂಟನೋವು ಮೊಣಕಾಲಿನ ನೋವು ಸಹ ವಾಸಿಯಾಗುತ್ತದೆ. 

ಅತಿಯಾದರೆ ಅಮೃತವೂ ವಿಷವೇ ಎನ್ನುವ ಗಾದೆಯಂತೆ ಇಂತಹ ಗಿಡಮೂಲಿಕೆಗಳ ಉಪಯೋಗವೂ ಮಿತವಾಗಿರಲಿ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ