image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗರಿಕೆಯಲ್ಲಿದೆ ಆರೋಗ್ಯ ಭಾಗ್ಯ...

ಗರಿಕೆಯಲ್ಲಿದೆ ಆರೋಗ್ಯ ಭಾಗ್ಯ...

ಶತವೀರ್ಯ, ಗೋಲೇಮಿ,ಗಂಡದೂರ್ವಾ, ಧುಬ್ ದೂಬ್, ಅರಗಂ ಪಿಲ್, ಕರಕುಗರಿಕಾ, ಗರಿಕಗಡ್ಡಿ ಎಂದೆಲ್ಲಾ ಕರೆಯಲ್ಪಡುವ ಗರಿಕೆಯಲ್ಲಿ ಸುಮಾರು ಒಂಬತ್ತು ಪ್ರಭೇದಗಳಿವೆ.  ಪೂಜಾ ಕೈಂಕರ್ಯಗಳ ಜೊತೆಗೆ ಆಯುರ್ವೆದದಲ್ಲೂ ಇದರ ಬಳಕೆಯನ್ನು ನಾವು ನೋಡಬಹುದು. ಗಣಪನಿಗೆ  ಅತೀ ಪ್ರಿಯವೆನ್ನಲಾಗುವ ಗರಿಕೆಯ ಉಪಯೋಗ ತಿಳಿದಿದ್ದರೆ ಉತ್ತಮ.

ದಿನವು ಬೆಳಿಗ್ಗೆ ಸಂಜೆ ಊಟಕ್ಕೆ ಮೊದಲು, ತಾಜಾ ಗರಿಕೆ ಹುಲ್ಲಿನ ರಸ ಸ್ವಲ್ಪ ಕುಡಿಯುತ್ತಾ ಬಂದರೆ, ಅಧಿಕ ರಕ್ತದೊತ್ತಡ, ಮಧುಮೇಹ ಹತೋಟಿಗೆ ಬರುತ್ತದೆ ಎನ್ನಲಾಗುತ್ತದೆ.

ಮೂತ್ರನಾಳ,ಮೂತ್ರಕೋಶಕ್ಕೆ ಸಂಬಂಧಿಸಿದ ಸೊಂಕು ಆದಾಗ ಜೀರಿಗೆಯೊಂದು ಗರಿಕೆ ಹಾಕಿ ಕಷಾಯ ಮಾಡಿ ಕುಡಿದರೆ ಸೋಂಕು ಮಾಯ.

ಬಾಯಿಹುಣ್ಣು,  ಮೂಗಿನಲ್ಲಿ ರಕ್ತಸ್ರಾವವಾಗುವ ಸಮಯದಲ್ಲಿ, ಗರಿಕೆ ಚಿಗುರಿನ ರಸವನ್ನು ಒಂದೆರಡು ಹನಿ ಹಾಕಿದರೆ ತಕ್ಷಣ ವಾಸಿಯಾಗುತ್ತದೆ.

ಗರಿಕೆ ಬೇರಿನ ಕಷಾಯವನ್ನು  ಕುಡಿಸಿದರೆ, ನಿಶಕ್ತಿಯಿಂದ  ಬಳಲುತ್ತಿರುವ ಮಕ್ಕಳಿಗೆ ಹಾಗು ಬೆಳವಣಿಗೆ ಕಾಣದ ಮಕ್ಕಳಿಗೆ  ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯಂತೆ.

ಗರಿಕೆ ಚಿಗುರಿನ ರಸವನ್ನು ನಿಯಮಿತವಾಗಿ  ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ತಗ್ಗಿ  ಮೂತ್ರದಲ್ಲಿನ ಉರಿ ನಿವಾರಣೆಯಾಗುತ್ತೆ. ವಾತನೊವು, ಕೀಲುನೋವುಗೂ ರಾಮಭಾಣ.

ದಿನವು ಗರಿಕೆ ರಸಕ್ಕೆ ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಕಲಸಿ ಕುಡಿಯುತ್ತಾ ಬಂದರೆ, ಮೂತ್ರಪಿಂಡದಲ್ಲಿನ ಕಲ್ಲು ಕರಗುತ್ತದೆ ಎನ್ನಲಾಗುತ್ತದೆ.

ಗರಿಕೆ ರಸ ಸೇವಿಸುವುದರಿಂದ ಮೂತ್ರಬಂಧ ಸಮಸ್ಯೆ ವಾಸಿಯಾಗಿ, ಮೂತ್ರ ಸರಾಗವಾಗುತ್ತದೆ.

ಹಸಿ ಅರಸಿಣ ಕೊಂಬಿನರಸ ಗರಿಕೆ ಹುಲ್ಲಿನರಸ ಸಮನಾಗಿ ಬೆರೆಸಿ ಸ್ವಲ್ಪ  ಸೇವಿಸಿ, ಇದನ್ನೇ ದೇಹಕ್ಕೆ ಲೇಪನ ಮಾಡಿಕೊಂಡು ಒಂದು ಗಂಟೆಯ ನಂತರ ಸ್ನಾನ ಮಾಡುವುದರಿಂದ ಚರ್ಮವ್ಯಾಧಿಗಳು ನಿವಾರಣೆಯಾಗುತ್ತದೆ.ವ್ರಣ, ಗಾಯ, ಹುಳುಕಡ್ಡಿ, ನವೆ ಕೂಡ ಗುಣವಾಗುತ್ತದೆ. 

ತಾಜಾ ಗರಿಕೆ ರಸ ನಿಯಮಿತವಾಗಿ ಸೇವಿಸುವುದರಿಂದ, ಮಾನಸಿಕ ಸಮಸ್ಯೆಗಳು, ಮೆದುಳಿನ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.

ಗರಿಕೆ ಕಷಾಯದಿಂದ ಗಂಟೆಗೊಮ್ಮೆ ಬಾಯಿ ಮುಕ್ಕಳಿಸುತ್ತಿದ್ದರೆ, ಬಾಯಿಹುಣ್ಣು, ಬಾಯಿ ದುರ್ವಾಸನೆ, ವಸಡುನೋವು, ವಸಡಿನಲ್ಲಿ ರಕ್ತಸ್ರಾವ ಗುಣವಾಗುತ್ತದೆ.

ಹೊಟ್ಟೆಯಲ್ಲಿ ಸಂಕಟ ಉರಿ, ನೋವು ಇದ್ದಾಗ ಗರಿಕೆ ರಸ ಸೇವಿಸಿದರೆ ಶೀಘ್ರ ನಿವಾರಣೆಯಾಗುತ್ತದೆ.

ಗರಿಕೆ ಕಷಾಯ ಸೇವನೆಯಿಂದ ಮೂತ್ರದಲ್ಲಿ ರಕ್ತ ಹೋಗುತ್ತಿದ್ದರೆ ನಿಲ್ಲುತ್ತದೆ.

ಗರಿಕೆ ರಸವನ್ನು ಮಜ್ಜಿಗೆಯಲ್ಲಿ ಕಲಸಿ ಕುಡಿಯುವುದರಿಂದ ಮಲಬದ್ಧತೆ, ಮೂಲವ್ಯಾಧಿ ನಿವಾರಣೆಯಾಗುತ್ತದೆ.

ಯಾವುದೇ ಮನೆ ಮದ್ದು ಉಪಯೋಗ ಮಾಡುವ ಮೊದಲು ತಜ್ಜರನ್ನು ಸಂಪರ್ಕಿಸಲು ಮರೆಯದಿರಿ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ