image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದ್ವಾಪರಯುಗದ ಕದಂಬ ವೃಕ್ಷವೇ ಈ ಅರಸಿನ ತೇಗ !

ದ್ವಾಪರಯುಗದ ಕದಂಬ ವೃಕ್ಷವೇ ಈ ಅರಸಿನ ತೇಗ !

ಸಂಸ್ಕೃತದಲ್ಲಿ ಕದಂಬ ಎಂದು ಕರೆಯಲ್ಪಡುವ ಕಡವಲಮರ ಅಥವಾ ಅರಸಿನ ತೇಗ ಒಂದು ಔಷದೀಯ ಸಸ್ಯಮೂಲಿಕೆ. ಈ ಮರವು ದ್ವಾಪರ ಯುಗದಿಂದ ಇತ್ತು ಎಂಬುದು ಭಾಗವತದ ಕಥನದಲ್ಲಿ ಬರುವ  "ಒಮ್ಮೆ ಶ್ರೀ ಕೃಷ್ಣ ಕದಂಬವನದಲ್ಲಿ ಗೋಪಿಕಾಸ್ತ್ರೀಯರೊಡನೆ ವಿಹರಿಸುತ್ತಿದ್ದನಂತೆ" ಎನ್ನುವ ಸನ್ನಿವೇಶದಿಂದ ತಿಳಿಯುತ್ತದೆ. ಮಥುರಾ ಮತ್ತು ಭರತಪುರದ ಮಧ್ಯೆ ಅಂತಹ ಕದಂಬವನದ ಅವಶೇಷಗಳನ್ನು ಈಗಲೂ ಕಾಣಬಹುದಂತೆ. ಶಿವನಿಗೆ ಈ ಮರದ ಹೂ ಶ್ರೇಷ್ಠವೆಂಬುದು ನಂಬಿಕೆ. ಈ ಮರವು 20-30 ಅಡಿ ಎತ್ತರ ಬೆಳೆಯುತ್ತದೆ. ತೊಗಟೆಯು ನೇರಳೆ ಬಣ್ಣ ಮತ್ತು ನಯವಾದ ತೊಗಟೆಗಳಿಂದ ಕೂಡಿರುತ್ತದೆ. ಹೊಳಪಿನಿಂದ ಕೂಡಿದ ಅಂಡಾಕಾರದ ಎಲೆಗಳು ಅಭಿಮುಖವಾಗಿ ಕಿರುರೆಂಬೆಗಳ ಮೇಲೆ ಜೋಡಣೆಯಾಗಿರುತ್ತದೆ. ಜೂನ್‌ನಿಂದ ಆಗಸ್ಟ್ ತಿಂಗಳುಗಳಲ್ಲಿ ಮರವು ಹೂಗಳನ್ನು ಬಿಡುತ್ತದೆ. ಚೆಂಡಿನಂತಹ ಸಣ್ಣ-ಸಣ್ಣ ಹೂಗಳು ಸೇರಿಕೊಂಡು ಪುಷ್ಪಮಂಜರಿಯಾಗಿರುತ್ತದೆ. ಹೂಗಳಿಗೆ ತೀಕ್ಷ್ಣವಾದ ಪರಿಮಳ

ವಿರುತ್ತದೆ. ಹಣ್ಣಿನ ಗಾತ್ರ ಮತ್ತು ಆಕಾರವು ಕಿತ್ತಳೆಯನ್ನು ಹೋಲುತ್ತದೆ. ಹಣ್ಣು ಹುಳಿಯಾಗಿದ್ದರೂ ತಿನ್ನಲು ರುಚಿಕರವಾಗಿರುತ್ತದೆ. ಈ ಮರದ ಎಲ್ಲಾ ಭಾಗಗಳು ಔಷಧೀಯ ಗುಣವನ್ನು ಹೊಂದಿದೆ.

ಇದರ ತೊಗಟೆಯ ಕಷಾಯವನ್ನು ಕುಡಿಯುವುದರಿಂದ ಜ್ವರ ವಾಸಿಯಾಗುತ್ತದೆ.

ತೊಗಟೆಯ ರಸ ಮತ್ತು ನಿಂಬೆರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಸಮಪ್ರಮಾಣದಲ್ಲಿ ಗಸಗಸೆ ಸೇರಿಸಿ ಅರೆದು ಕಣ್ಕಪ್ಪಿನಂತೆ ಹಚ್ಚುವುದರಿಂದ ಕಣ್ಣಿನ ಉರಿ ವಾಸಿಯಾಗುತ್ತದೆ.

ಹಣ್ಣುಗಳನ್ನು ತಿನ್ನುವುದರಿಂದ ಬಾಯಾರಿಕೆಯಿಂದ ಕೂಡಿದ ಜ್ವರ ವಾಸಿಯಾಗುತ್ತದೆ.

ಹಣ್ಣಿನ ರಸಕ್ಕೆ ಜೀರಿಗೆ ಮತ್ತು ಸಕ್ಕರೆ ಸೇರಿಸಿಕುಡಿಸುವುದರಿಂದ ಹೊಟ್ಟೆ ನೋವು ವಾಸಿಯಾಗುತ್ತದೆ.

ಪಂಚಾಂಗ ಚೂರ್ಣವನ್ನು ಗಂಜಿಯೊಡನೆ ಸೇವಿಸುವುದರಿಂದ ವಾತಾರೋಗಗಳು ಗುಣವಾಗುತ್ತದೆ.

ಮರದ ಸಮೂಲವನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಂಡು ತುಪ್ಪದೊಡನೆ ಸುಮಾರು 6 ತಿಂಗಳು ಸೇವಿಸುವುದರಿಂದ ಸರ್ವವ್ಯಾದಿಗಳು ಗುಣವಾಗುತ್ತದೆ ಎನ್ನಲಾಗುತ್ತದೆ. 

ಯಾವುದೇ ಮನೆ ಮದ್ದನ್ನು ಉಪಯೋಗಿಸುವ ಮೊದಲು ಅದರ ಅರಿವು ಇರುವವರ ಬಳಿ ಮಾಹಿತಿ ಪಡೆದುಕೊಂಡು ಉಪಯೋಗ ಮಾಡುವುದು ಉತ್ತಮ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ