image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಎಲಾನ್ ಮಸ್ಕ್‌ಗೆ ಭಾರಿ ಆರ್ಥಿಕ ಆಘಾತ : 600 ಬಿಲಿಯನ್ ಡಾಲರ್ ಸಂಪತ್ತು ಭಸ್ಮ!

ಎಲಾನ್ ಮಸ್ಕ್‌ಗೆ ಭಾರಿ ಆರ್ಥಿಕ ಆಘಾತ : 600 ಬಿಲಿಯನ್ ಡಾಲರ್ ಸಂಪತ್ತು ಭಸ್ಮ!

ಅಮೇರಿಕ : ಜಗತ್ತಿನ ಅಗ್ರಮಾನ್ಯ ಉದ್ಯಮಿ ಹಾಗೂ ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಸಂಸ್ಥೆಗಳ ಮುಖ್ಯಸ್ಥ ಎಲಾನ್ ಮಸ್ಕ್ ಅವರಿಗೆ ಕಳೆದ ಒಂದೇ ತಿಂಗಳಲ್ಲಿ ಅತ್ಯಂತ ಭಾರಿ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ. ಜೂನ್ 16ರ ವೇಳೆಗೆ ಸ್ಪೇಸ್‌ಎಕ್ಸ್ ಸಂಸ್ಥೆಯ ಐತಿಹಾಸಿಕ ಐಪಿಒ (IPO) ಯಶಸ್ಸಿನ ಬಲದಿಂದ ಮಸ್ಕ್ ಅವರ ನಿವ್ವಳ ಆಸ್ತಿ ಮೌಲ್ಯವು 1.33 ಟ್ರಿಲಿಯನ್ ಡಾಲರ್‌ಗೆ ತಲುಪಿ, ವಿಶ್ವದ ಮೊದಲ 'ಟ್ರಿಲಿಯನೇರ್' ಎಂಬ ಹೊಸ ಇತಿಹಾಸ ಸೃಷ್ಟಿಸಿದ್ದರು. ಆದರೆ, ಷೇರುಪೇಟೆಯ ತೀವ್ರ ಏರಿಳಿತಗಳಿಂದಾಗಿ ಆ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಅನಿರೀಕ್ಷಿತ ಮಾರುಕಟ್ಟೆ ಬೆಳವಣಿಗೆಗಳಿಂದಾಗಿ ಮಸ್ಕ್ ಅವರ ಒಟ್ಟು ಸಂಪತ್ತಿನಲ್ಲಿ ಸುಮಾರು 600 ಬಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 57 ಲಕ್ಷ ಕೋಟಿ ರೂ.) ಕರಗಿ ಹೋಗಿದೆ. ಪ್ರಸ್ತುತ ಅವರ ನಿವ್ವಳ ಮೌಲ್ಯವು 684 ಬಿಲಿಯನ್‌ ಡಾಲರ್‌ಗೆ ಕುಸಿದಿದ್ದು, ಈ ಕುಸಿತದ ಪ್ರಮಾಣವು ಜಾಗತಿಕವಾಗಿ ಉಳಿದ ಬಿಲಿಯನೇರ್‌ಗಳ ಒಟ್ಟು ಆಸ್ತಿಗಿಂತಲೂ ಹೆಚ್ಚಾಗಿದೆ ಎಂಬುದು ವಿಶೇಷ.

ಈ ಬೃಹತ್ ಕುಸಿತಕ್ಕೆ ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾ ಕಂಪನಿಗಳ ಷೇರುಗಳು ತೀವ್ರ ಒತ್ತಡಕ್ಕೆ ಸಿಲುಕಿದ್ದೇ ಪ್ರಮುಖ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ. ಸ್ಪೇಸ್‌ಎಕ್ಸ್ ಸಂಸ್ಥೆಯು ಐಪಿಒ ಮೂಲಕ 75 ಬಿಲಿಯನ್ ಡಾಲರ್ ಸಂಗ್ರಹಿಸಿ, 150 ಡಾಲರ್‌ಗೆ ಪಟ್ಟಿಯಾಗಿತ್ತು. ಆರಂಭದ ಮೂರು ವಹಿವಾಟು ಅವಧಿಗಳಲ್ಲಿ ಷೇರು ಬೆಲೆ ಶೇ.50ಕ್ಕಿಂತ ಹೆಚ್ಚು ಏರಿಕೆಯಾಗಿ 202 ಡಾಲರ್ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತ್ತಾದರೂ, ತದನಂತರ ಷೇರು ಬೆಲೆ ಶೇ.46ರಷ್ಟು ಕುಸಿದು 108.37 ಡಾಲರ್‌ಗೆ ತಲುಪಿದೆ. ಪರಿಣಾಮವಾಗಿ ಮಸ್ಕ್ ಅವರ ಆಸ್ತಿ ಮೌಲ್ಯದಲ್ಲಿ ನೂರಾರು ಶತಕೋಟಿ ಡಾಲರ್‌ಗಳು ಭಸ್ಮವಾಗಿವೆ.

Category
ಕರಾವಳಿ ತರಂಗಿಣಿ