image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಸ್ಪೇನ್ ಗಡಿಗೆ ನುಗ್ಗಿದ ಸಾವಿರಾರು ಮೊರಾಕೊ ವಲಸಿಗರು: ಸೇನೆ ನಿಯೋಜನೆ

ಸ್ಪೇನ್ ಗಡಿಗೆ ನುಗ್ಗಿದ ಸಾವಿರಾರು ಮೊರಾಕೊ ವಲಸಿಗರು: ಸೇನೆ ನಿಯೋಜನೆ

ಸ್ಪೇನ್ : ಮೊರಾಕೊದಿಂದ ಸ್ಪೇನ್‌ನ ಉತ್ತರ ಆಫ್ರಿಕನ್ ಪ್ರಾಂತ್ಯವಾದ ಸೆಯುಟಾ (Ceuta) ಗಡಿಪ್ರದೇಶಕ್ಕೆ ಸಾವಿರಾರು ನಿರಾಶ್ರಿತರು ಹಾಗೂ ವಲಸಿಗರು ಅಕ್ರಮವಾಗಿ ನುಸುಳುತ್ತಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಸಮುದ್ರದ ಮೂಲಕ ಈಜಿಕೊಂಡು ಹಾಗೂ ದೋಣಿಗಳ ನೆರವಿನಿಂದ ಗಡಿ ದಾಟಲು ಯತ್ನಿಸಿದವರ ಪೈಕಿ 15ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಮೊರಾಕೊ ಗಡಿಗೆ ಹೊಂದಿಕೊಂಡಿರುವ ಸೆಯುಟಾಗೆ ಪ್ರತಿದಿನ ನೂರಾರು ಜನರು ಈಜಿಕೊಂಡು ಪ್ರವೇಶಿಸುತ್ತಿದ್ದರೆ, ಇನ್ನೂ ಸಾವಿರಾರು ಜನರು ಗಡಿ ದಾಟಲು ಮೊರಾಕೊ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಸಾವಿರಾರು ಜನರು ಕಾಂಪೌಂಡ್ ಹಾರಿ ಹಾಗೂ ಸಮುದ್ರದಲ್ಲಿ ಈಜಿಕೊಂಡು ಗಡಿ ಪ್ರವೇಶಿಸುತ್ತಿರುವ ದೃಶ್ಯಗಳು ಬೆಚ್ಚಿಬೀಳಿಸುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ತಡವಾಗಿ ಎಚ್ಚೆತ್ತುಕೊಂಡಿರುವ ಮ್ಯಾಡ್ರಿಡ್‌ನ ಸ್ಪೇನ್ ಸರ್ಕಾರವು ಗಡಿ ಭಾಗದ ಭದ್ರತೆಗಾಗಿ ತನ್ನ ಸೈನ್ಯವನ್ನು ನಿಯೋಜಿಸಿದೆ. ಪ್ರಸ್ತುತ ಸ್ಪ್ಯಾನಿಷ್ ಅಧಿಕಾರಿಗಳು ಮುಳುಗಿ ಮೃತಪಟ್ಟ ವಲಸಿಗರ ಶವಗಳನ್ನು ವಶಪಡಿಸಿಕೊಂಡಿದ್ದು, ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕಾವಲು ಕಾಯಲಾಗುತ್ತಿದೆ.

Category
ಕರಾವಳಿ ತರಂಗಿಣಿ