image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಚೀನಾಗೆ ಅಪ್ಪಳಿಸಿದ 'ನೌಲ್' ಚಂಡಮಾರುತ : ಭಾರಿ ಮಳೆ, ಲಕ್ಷಾಂತರ ಜನರ ಸ್ಥಳಾಂತರ

ಚೀನಾಗೆ ಅಪ್ಪಳಿಸಿದ 'ನೌಲ್' ಚಂಡಮಾರುತ : ಭಾರಿ ಮಳೆ, ಲಕ್ಷಾಂತರ ಜನರ ಸ್ಥಳಾಂತರ

ಬೀಜಿಂಗ್ : ದಕ್ಷಿಣ ಚೀನಾ ಹಾಗೂ ಹಾಂಕಾಂಗ್ ಪ್ರದೇಶಕ್ಕೆ 'ನೌಲ್' ಚಂಡಮಾರುತ ಭಾನುವಾರ ಮುಂಜಾನೆ ಅಪ್ಪಳಿಸಿದ್ದು, ಭಾರಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರದ ಮಾಹಿತಿಯಂತೆ, ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದ ಹುಯಿಝೌ ನಗರದ ಹುಯಿಡಾಂಗ್ ಕೌಂಟಿ ಕರಾವಳಿಯಲ್ಲಿ ಭಾನುವಾರ ಸ್ಥಳೀಯ ಸಮಯ ಮುಂಜಾನೆ ಸುಮಾರು 3:50ರ ವೇಳೆಗೆ ಚಂಡಮಾರುತವು ಭೂಮಿಗೆ ಅಪ್ಪಳಿಸಿದೆ. ಪ್ರಸ್ತುತ ಚಂಡಮಾರುತವು ಗಂಟೆಗೆ ಗರಿಷ್ಠ 145 ಕಿಲೋಮೀಟರ್ വേಗದ ಬಲವಾದ ಗಾಳಿಯೊಂದಿಗೆ ಒಳನಾಡಿನ ಗುವಾಂಗ್‌ಡಾಂಗ್‌ ಕಡೆಗೆ ಚಲಿಸುತ್ತಿದೆ. ಹಾಂಕಾಂಗ್ ವೀಕ್ಷಣಾಲಯದ ಪ್ರಕಾರ, ಚಂಡಮಾರುತವು ಮುನ್ನೆಡೆಯುತ್ತಿದ್ದಂತೆ ಕ್ರಮೇಣ ದುರ್ಬಲಗೊಳ್ಳಲಿದೆಯಾದರೂ, ಪ್ರದೇಶದ ವಿವಿಧ ಭಾಗಗಳಲ್ಲಿ ಭಾರಿ ಗಾಳಿ ಮತ್ತು ಮಳೆ ಮುಂದುವರಿಯಲಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ 3,40,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕೆ ವಹಿಸಿ ಪ್ರಾಂತ್ಯದಾದ್ಯಂತ ಭಾನುವಾರದ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಹಾಂಕಾಂಗ್ ವಿಮಾನ ನಿಲ್ದಾಣದಲ್ಲಿ 150ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರದ ಮುನ್ಸೂಚನೆಯಂತೆ, ವಾರಾಂತ್ಯದಲ್ಲಿ ದಕ್ಷಿಣ ಗುವಾಂಗ್‌ಡಾಂಗ್ ಮತ್ತು ಆಗ್ನೇಯ ಫುಜಿಯಾನ್ ಪ್ರಾಂತ್ಯಗಳ ಕೆಲವು ಭಾಗಗಳಲ್ಲಿ ಭಾರಿ ಮಳೆ ಹಾಗೂ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ.

Category
ಕರಾವಳಿ ತರಂಗಿಣಿ