image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕ-ಇರಾನ್ ನೇರ ಹಣಾಹಣಿ: 'ಕಣ್ಣಿಗೆ ಕಣ್ಣು' ಎಚ್ಚರಿಕೆ

ಅಮೆರಿಕ-ಇರಾನ್ ನೇರ ಹಣಾಹಣಿ: 'ಕಣ್ಣಿಗೆ ಕಣ್ಣು' ಎಚ್ಚರಿಕೆ

ಇರಾನ್ : ಕೆಂಪು ಸಮುದ್ರ ಮತ್ತು ಜಾಗತಿಕ ತೈಲ ಸಾರಿಗೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ನಿಯಂತ್ರಣಕ್ಕಾಗಿ ಅಮೆರಿಕ ಹಾಗೂ ಇರಾನ್ ನಡುವೆ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದೆ. ಇರಾನ್ ಏನಾದರೂ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಇರಾನ್‌ನ ಪ್ರಮುಖ ಸೇತುವೆ ಅಥವಾ ವಿದ್ಯುತ್ ಸ್ಥಾವರಗಳನ್ನು ಬಾಂಬ್ ಹಾಕಿ ಧ್ವಂಸಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಈ ಬೆದರಿಕೆಗೆ ಪ್ರತಿಯಾಗಿ ತಿರುಗೇಟು ನೀಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, "ನಮ್ಮ ರಕ್ಷಣಾ ನೀತಿ ಸ್ಪಷ್ಟವಾಗಿದೆ; ಅದು ಕಣ್ಣಿಗೆ ಕಣ್ಣು (Eye for an eye)" ಎಂದು ಎಚ್ಚರಿಸಿದ್ದಾರೆ.

ಮತ್ತೊಂದೆಡೆ, ಸೌದಿ ಅರೇಬಿಯಾದ ಬಂದರುಗಳಿಗೆ ಸಂಪೂರ್ಣ ದಿಗ್ಬಂಧನ ವಿಧಿಸಿರುವುದಾಗಿ ಘೋಷಿಸಿರುವ ಹೌತಿ ಬಂಡುಕೋರರು, ಕೆಂಪು ಸಮುದ್ರದಲ್ಲಿ ಸಂಚರಿಸುತ್ತಿದ್ದ ಸೌದಿಯ 'ಎನ್ಸಿಲಿಯಾ' ಮತ್ತು 'ಲೈಲಾ' ಎಂಬ ಎರಡು ಬೃಹತ್ ತೈಲ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ್ದಾರೆ. ಬ್ರಿಟಿಷ್ ನೌಕಾ ಭದ್ರತಾ ಸಂಸ್ಥೆಯ (UKMTO) ಪ್ರಕಾರ, ಅಲ್ ಶುಕೈಕ್ ಬಳಿ ಹಡಗಿಗೆ ನಿಗೂಢ ವಸ್ತುವೊಂದು ಡಿಕ್ಕಿ ಹೊಡೆದ ಪರಿಣಾಮ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಹಾರ್ಮುಜ್ ಜಲಸಂಧಿಯಲ್ಲಿ ಮೂರು ತೈಲ ಟ್ಯಾಂಕರ್‌ಗಳನ್ನು ತಡೆದು ನಿಲ್ಲಿಸಿದ್ದು, "ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿದೆ, ಅಮೆರಿಕದ ಮಾತು ಕೇಳಿ ಬರುವ ಹಡಗುಗಳಿಗೆ ಇದೇ ಗತಿಯಾಗಲಿದೆ" ಎಂದು ಗುಡುಗಿವೆ.

Category
ಕರಾವಳಿ ತರಂಗಿಣಿ