image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ತೈವಾನ್‌ ವಿಷಯಕ್ಕೆ ಬಂದ್ರೆ ಸರಿ ಇಲ್ಲ :ಟ್ರಂಪ್‌ಗೆ ಚೀನಾ ನೇರ ವಾರ್ನಿಂಗ್‌!

ತೈವಾನ್‌ ವಿಷಯಕ್ಕೆ ಬಂದ್ರೆ ಸರಿ ಇಲ್ಲ :ಟ್ರಂಪ್‌ಗೆ ಚೀನಾ ನೇರ ವಾರ್ನಿಂಗ್‌!

ಬೀಜಿಂಗ್: ತೈವಾನ್ ವಿಷಯದಲ್ಲಿ ಅಮೆರಿಕದ ಹಸ್ತಕ್ಷೇಪ ಮುಂದುವರಿದರೆ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣವಾಗಿ ಹದಗೆಡಲಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮುಖಾಮುಖಿಯಾಗಿಯೇ ನೇರ ಎಚ್ಚರಿಕೆ ನೀಡಿದ್ದಾರೆ. ಚೀನಾ ಪ್ರವಾಸದಲ್ಲಿರುವ ಟ್ರಂಪ್ ಮತ್ತು ಜಿನ್‌ಪಿಂಗ್ ನಡುವೆ ಬೀಜಿಂಗ್‌ನ 'ಗ್ರೇಟ್ ಹಾಲ್ ಆಫ್ ದಿ ಪೀಪಲ್'ನಲ್ಲಿ ನಡೆದ ಮಹತ್ವದ ದ್ವಿಪಕ್ಷೀಯ ಮಾತುಕತೆ ವೇಳೆ ಈ ಹೈವೋಲ್ಟೇಜ್ ಜಿದ್ದಾಜಿದ್ದಿ ನಡೆದಿದೆ.

​ಅಮೆರಿಕ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ತೈವಾನ್ ಅತ್ಯಂತ ಸೂಕ್ಷ್ಮ ಹಾಗೂ ಕೆಂಪು ರೇಖೆಯಾಗಿದೆ (Red Line). ಈ ವಿಷಯವನ್ನು ಅಮೆರಿಕ ಸರಿಯಾಗಿ ನಿಭಾಯಿಸದಿದ್ದರೆ, ಉಭಯ ದೇಶಗಳ ನಡುವಿನ ಬಾಂಧವ್ಯ ಹಳಿ ತಪ್ಪಿ, ನೇರ ಸಂಘರ್ಷಕ್ಕೆ ದಾರಿಯಾಗಬಹುದು ಎಂದು ಜಿನ್‌ಪಿಂಗ್ ಕಠಿಣ ಪದಗಳಲ್ಲಿ ಎಚ್ಚರಿಸಿದ್ದಾರೆ. ತೈವಾನ್ ಅನ್ನು ತನ್ನದೇ ಅವಿಭಾಜ್ಯ ಅಂಗ ಎಂದು ಪರಿಗಣಿಸುವ ಚೀನಾ, ಅಮೆರಿಕ ಅದಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
​ಚೀನಾದ ಈ ಆಕ್ರಮಣಕಾರಿ ನಿಲುವಿನ ನಡುವೆಯೂ ಡೊನಾಲ್ಡ್ ಟ್ರಂಪ್ ಅವರು ಷಿ ಜಿನ್‌ಪಿಂಗ್ ಅವರನ್ನು ಅತ್ಯುತ್ತಮ ನಾಯಕ ಎಂದು ಹೊಗಳಿದ್ದಾರೆ. ಆದರೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಮಾತ್ರ ತೈವಾನ್‌ಗೆ ನೀಡುತ್ತಿರುವ ಬೆಂಬಲ ಮತ್ತು ಅಮೆರಿಕದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತೈವಾನ್‌ಗೆ ಸುಮಾರು 11 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಶಸ್ತ್ರಾಸ್ತ್ರಗಳನ್ನು ನೀಡಲು ಅಮೆರಿಕ ಮುಂದಾಗಿರುವುದು ಸದ್ಯ ಉಭಯ ದೊಡ್ಡ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ.

Category
ಕರಾವಳಿ ತರಂಗಿಣಿ