image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಸರ್ಕಾರಕ್ಕೆ ಆರಂಭದಲ್ಲೇ ಸತ್ವಪರೀಕ್ಷೆ: ಭ್ರಷ್ಟಾಚಾರದ ಆರೋಪದಡಿ ಇಬ್ಬರು ಸಚಿವರ ರಾಜೀನಾಮೆ

ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಸರ್ಕಾರಕ್ಕೆ ಆರಂಭದಲ್ಲೇ ಸತ್ವಪರೀಕ್ಷೆ: ಭ್ರಷ್ಟಾಚಾರದ ಆರೋಪದಡಿ ಇಬ್ಬರು ಸಚಿವರ ರಾಜೀನಾಮೆ

ನೇಪಾಳ : ನೇಪಾಳದಲ್ಲಿ ಭಾರಿ ಬದಲಾವಣೆಯ ಭರವಸೆ ನೀಡಿ, ಯುವ ಸಮೂಹದ ಆಶಾಕಿರಣವಾಗಿ ಅಧಿಕಾರಕ್ಕೇರಿದ ಪ್ರಧಾನಿ ಬಾಲೇಂದ್ರ ಶಾ (ಬಾಲೆನ್) ಅವರ ಸರ್ಕಾರಕ್ಕೆ ಆಡಳಿತದ ಆರಂಭಿಕ ದಿನಗಳಲ್ಲೇ ದೊಡ್ಡ ಹಿನ್ನಡೆಯಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತದ ಸಂಕಲ್ಪದೊಂದಿಗೆ ಮಾರ್ಚ್ 27ರಂದು ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳ ಅವಧಿಯಲ್ಲಿಯೇ, ಅವರ ಸಂಪುಟದ ಇಬ್ಬರು ಸಚಿವರು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಿದ್ದಾರೆ. ರ್‍ಯಾಪರ್ ಆಗಿ ಜನಪ್ರಿಯತೆ ಗಳಿಸಿ, ಬಳಿಕ ಕಠ್ಮಂಡು ಮೇಯರ್ ಆಗಿ ಯಶಸ್ವಿಯಾದ ಬಾಲೆನ್, ಜೆನ್ ಝೀ ತಲೆಮಾರಿನ ನೆಚ್ಚಿನ ನಾಯಕನಾಗಿ ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ಎಸ್‌ಪಿ) ಮೂಲಕ ನೇಪಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. 275 ಸದಸ್ಯ ಬಲದ ಸಂಸತ್ತಿನಲ್ಲಿ 182 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿದ್ದ ಬಾಲೆನ್, ಆರಂಭದಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಹಾಗೂ ಮಾಜಿ ಗೃಹಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸುವ ಮೂಲಕ ಕಠಿಣ ನಿರ್ಧಾರಗಳ ಮುನ್ಸೂಚನೆ ನೀಡಿದ್ದರು. ಆದರೆ ಈಗ ಸ್ವಪಕ್ಷದ ಸಚಿವರೇ ಭ್ರಷ್ಟಾಚಾರದಲ್ಲಿ ಸಿಲುಕಿರುವುದು ಸರ್ಕಾರಕ್ಕೆ ಮುಜುಗರ ತಂದಿದೆ. ಭ್ರಷ್ಟಾಚಾರದ ವಿರುದ್ಧ 'ಶೂನ್ಯ ಸಹನೆ' ಹೊಂದಿದ್ದೇನೆ ಎಂದು ಬಿಂಬಿಸಲು ಸಚಿವರ ತಲೆದಂಡ ಪಡೆದಿದ್ದರೂ, ಪಕ್ಷದ ಒಳಗೆ ಹಾಗೂ ಹೊರಗೆ ವಿರೋಧ ವ್ಯಕ್ತವಾಗುತ್ತಿದೆ. ಗಡಿ ವಿವಾದ, ಹಣದುಬ್ಬರ ಮತ್ತು ಜನರ ಪ್ರತಿಭಟನೆಗಳಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಬಾಲೆನ್ ಅವರಿಗೆ, ಪಕ್ಷದ ಆಂತರಿಕ ಅಸಮಾಧಾನಗಳನ್ನು ಶಮನಗೊಳಿಸಿ ಜನರ ವಿಶ್ವಾಸ ಉಳಿಸಿಕೊಳ್ಳುವುದು ಈಗ ದೊಡ್ಡ ಸವಾಲಾಗಿದೆ.

Category
ಕರಾವಳಿ ತರಂಗಿಣಿ