image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಕುರ್ದಿಶ್ ನಾಯಕ ನಿಝಾರ್ ಅಮೆದಿ ಅವರನ್ನು ದೇಶದ ನೂತನ ರಾಷ್ಟ್ರಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಇರಾಕ್ ಸಂಸತ್ತು

ಕುರ್ದಿಶ್ ನಾಯಕ ನಿಝಾರ್ ಅಮೆದಿ ಅವರನ್ನು ದೇಶದ ನೂತನ ರಾಷ್ಟ್ರಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಇರಾಕ್ ಸಂಸತ್ತು

ಬಾಗ್ದಾದ್ : ಕುರ್ದಿಶ್ ನಾಯಕ ನಿಝಾರ್ ಅಮೆದಿ ಅವರನ್ನು ಇರಾಕ್ ಸಂಸತ್ತು ದೇಶದ ನೂತನ ರಾಷ್ಟ್ರಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇದರಿಂದ ಸರ್ಕಾರ ರಚನೆಯನ್ನು ಸ್ಥಗಿತಗೊಳಿಸಿದ್ದ ರಾಜಕೀಯ ಅಸ್ಥಿರತೆಗೆ ತೆರೆ ಬಿದ್ದಿದೆ. ಪೇಟ್ರಿಯಾಟಿಕ್ ಯೂನಿಯನ್ ಆಫ್ ಕುರ್ದಿಸ್ತಾನ್ (ಪಿಯುಕೆ) ಪಕ್ಷದ ಅಭ್ಯರ್ಥಿಯಾಗಿದ್ದ ಅಮೆದಿ ಅವರು ಎರಡನೇ ಸುತ್ತಿನ ಮತದಾನದಲ್ಲಿ 227 ಮತಗಳನ್ನು ಪಡೆದು, ಸ್ವತಂತ್ರ ಅಭ್ಯರ್ಥಿ ಮುತ್ತನ್ನಾ ಅಮೀನ್ ನಾಡರ್ (15 ಮತ) ಅವರನ್ನು ಸೋಲಿಸಿದರು. 2003ರಲ್ಲಿ ಅಮೆರಿಕ ನೇತೃತ್ವದ ಆಕ್ರಮಣದಲ್ಲಿ ಸದ್ದಾಂ ಹುಸೇನ್ ಅವರನ್ನು ಪದಚ್ಯುತಗೊಳಿಸಿದ ಬಳಿಕ, ಅಮೆದಿ ಅವರು ಆರನೇ ಇರಾಕ್ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ಮತದಾನದ ಬಳಿಕ ಸಂಸತ್ತಿನಲ್ಲಿ ಮಾತನಾಡಿದ ಅಮೆದಿ, "ನಮ್ಮ ದೇಶ ಎದುರಿಸುತ್ತಿರುವ ಸವಾಲುಗಳ ಪ್ರಮಾಣ ನನಗೆ ತಿಳಿದಿದೆ" ಎಂದು ಹೇಳಿದರು. ಸರ್ಕಾರದ ಮೂರು ಅಂಗಗಳೊಂದಿಗೆ ಸಮನ್ವಯವಾಗಿ ಕೆಲಸ ಮಾಡುವುದಾಗಿ ಹಾಗೂ "ಇರಾಕ್ ಮೊದಲು" ಎಂಬ ತತ್ವಕ್ಕೆ ಬದ್ಧರಾಗುವುದಾಗಿ ಹೇಳಿದರು. ಇದೇ ವೇಳೆ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಇರಾಕ್ ಮೇಲೆ ನಡೆದ ದಾಳಿಗಳನ್ನು ಅವರು ಖಂಡಿಸಿದರು.

ಯುದ್ಧದ ಪರಿಣಾಮಗಳು ಇನ್ನೂ ಮುಂದುವರಿದಿದ್ದು, ಈ ವಾರದ ಆರಂಭದಲ್ಲಿ ಘೋಷಿಸಲಾದ ಕದನ ವಿರಾಮದಿಂದ ಪರಿಸ್ಥಿತಿ ತಾತ್ಕಾಲಿಕವಾಗಿ ಶಮನಗೊಂಡಿದೆ. ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಇರಾಕ್‌ ನಲ್ಲಿರುವ ಅಮೆರಿಕದ ನೆಲೆಗಳು ಮತ್ತು ರಾಜತಾಂತ್ರಿಕ ಸೌಲಭ್ಯಗಳ ಮೇಲೆ ದಾಳಿ ನಡೆಸಿದ್ದವು. ಇದಕ್ಕೆ ಪ್ರತಿಯಾಗಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ದಾಳಿಗಳಲ್ಲಿ ಇರಾಕಿನ ಮಿಲಿಟರಿ ಸದಸ್ಯರು ಸಾವನ್ನಪ್ಪಿದ್ದಾರೆ.

Category
ಕರಾವಳಿ ತರಂಗಿಣಿ