image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್‌ ತಾನು ಹಾರ್ಮುಜ್ ಜಲಸಂಧಿಯಲ್ಲಿ ನೆಟ್ಟ ನೀರಿನೊಳಗಿನ ಬಾಂಬ್‌ಗಳ ಸ್ಥಳವನ್ನು ದಾಖಲಿಸಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ : ಅಮೇರಿಕ

ಇರಾನ್‌ ತಾನು ಹಾರ್ಮುಜ್ ಜಲಸಂಧಿಯಲ್ಲಿ ನೆಟ್ಟ ನೀರಿನೊಳಗಿನ ಬಾಂಬ್‌ಗಳ ಸ್ಥಳವನ್ನು ದಾಖಲಿಸಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ : ಅಮೇರಿಕ

ವಾಷಿಂಗ್ಟನ್‌ : ಹೊರ್ಮುಜ್‌ ಜಲಸಂಧಿಯಲ್ಲಿ ಇರಾನ್‌ ಅಳವಡಿಸಿರುವ ಸಮುದ್ರ ಬಾಂಬ್‌ ಪತ್ತೆ ಸಾಧ್ಯವಾಗದ ಕಾರಣ ಹಾಗೂ ಅವನ್ನು ತೆಗೆಯವ ಸಾಮರ್ಥಯ ಕೊರತೆ ಯಿಂದ ಜಲಮಾರ್ಗವನ್ನು ಸಂಪೂರ್ಣವಾಗಿ ತೆರೆಯಲು ಸಾಧ್ಯ ವಾಗುತ್ತಿಲ್ಲ ಎಂದು ಅಮೆರಿಕ ಅಧಿ ಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಅಮೆರಿಕ ಅಧ್ಯಕ್ಷ ಟ್ರಂಪ್‌, ಹೊರ್ಮುಜ್‌ ತೆಗೆಯುವಂತೆ ಎಚ್ಚರಿಕೆ ನೀಡಿದರೂ ಇರಾನ್‌ ಹಠ ಮುಂದುವರಿಸಿದೆ. ಈ ಬಗ್ಗೆ ಅಮೆರಿಕ ಅಧಿಕಾರಿಗಳು ಮಾತನಾಡಿದ್ದು, ಇರಾನ್‌ ತಾನು ನೆಟ್ಟ ಪ್ರತಿಯೊಂದು ಬಾಂಬ್‌ಗಳ ಸ್ಥಳವನ್ನು ದಾಖಲಿ ಸಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ. ದಾಖಲಾದ ಎಲ್ಲ ಸ್ಫೋಟ ಕಗಳು ಸಹ ನೆಟ್ಟ ಸ್ಥಾನದಿಂದ ಸರಿದಿರ ಬಹುದು. ಏಕೆಂದರೆ ಕೆಲವು ಸ್ಫೋಟಕಗಳನ್ನು ನೀರಿನ ಪ್ರವಾಹದೊಂದಿಗೆ ತೇಲಿಹೋಗುವಂತೆ ಅಳವಡಿ  ಸಲಾಗಿದೆ ಎನ್ನಲಾಗಿದೆ. ಟೋಲ್‌ ಪಾವತಿಸುವ ಹಡಗುಗಳು ಸಾಗಲು ಸುರಕ್ಷಿತ ಮಾರ್ಗ ತೋರಿಸುವ ಚಾರ್ಟ್‌ಅನ್ನು ಇರಾನ್‌ ಸೇನೆ ಪ್ರಕಟಿಸಿ ಅವಕಾಶ ಮಾಡಿಕೊಟ್ಟಿತು. ಸಮುದ್ರ ಬಾಂಬ್‌ ಇರುವ ಮಾರ್ಗದ ಕಡೆ ಸಂಪೂರ್ಣವಾಗಿ ನಿರ್ಬಂಧಿಸಿದೆ. ಅದು ಗೊತ್ತು ಪಡಿಸಿರುವ ಮಾರ್ಗದಲ್ಲಿ ಕೆಲವು ಹಡಗುಗಳು ಮಾತ್ರ ಸಾಗುತ್ತಿದ್ದು, ಹಲವು ನೌಕೆಗಳು ಹಿಂದೇಟು ಹಾಕುತ್ತಿವೆ ಎಂದು ವರದಿ ಹೇಳಿದೆ.

Category
ಕರಾವಳಿ ತರಂಗಿಣಿ