image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಸುರಕ್ಷಿತವಾಗಿ ಭೂಮಿಗೆ ಮರಳಿದ ನಾಸಾದದ ಆರ್ಟೆಮಿಸ್-2ನ ಗಗನಯಾನಿಗಳ ತಂಡ

ಸುರಕ್ಷಿತವಾಗಿ ಭೂಮಿಗೆ ಮರಳಿದ ನಾಸಾದದ ಆರ್ಟೆಮಿಸ್-2ನ ಗಗನಯಾನಿಗಳ ತಂಡ

ಹೂಸ್ಟನ್ : ಚಂದ್ರನ ಸುತ್ತು ಹೊಡೆದು ನಾಸಾದದ ಆರ್ಟೆಮಿಸ್-2ನ ಗಗನಯಾನಿಗಳ ತಂಡವು ಕ್ಯಾಲಿಫೋರ್ನಿಯಾ ಬಳಿ ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿತು. ಈ ಮೂಲಕ 10 ದಿನದ ಬಾಹ್ಯಾಕಾಶ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಗಗನಯಾನಿಗಳು ಭೂಮಿಗೆ ಮರಳುವ ರೋಚಕ ಕಾರ್ಯಾಚರಣೆಯ ಸಂಪೂರ್ಣ ವಿಡಿಯೊವನ್ನು ನಾಸಾ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ನಾಸಾದ 'ಇಂಟೆಗ್ರಿಟಿ' ಎಂದು ಹೆಸರಿಸಲಾದ ಓರಿಯೊನ್‌ ಕ್ಯಾಪ್ಸುಲ್‌ (ಬಾಹ್ಯಾಕಾಶ ಕೋಶವು) ಪೆಸಿಫಿಕ್ ಕಾಲಮಾನ ಶುಕ್ರವಾರ ಸಂಜೆ 5 ಗಂಟೆಗೆ ದಕ್ಷಿಣ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಪ್ಯಾರಾಚೂಟ್ ಸಹಾಯದಿಂದ ಸಮುದ್ರಕ್ಕೆ ಇಳಿಯಿತು.

ಐದು ದಶಕಗಳ ಬಳಿಕ ಚಂದ್ರನ ಕಕ್ಷೆಗೆ ನಾಸಾ, ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನಿಗಳನ್ನು ಕಳುಹಿಸಿತ್ತು. ಈ ಪರಿಭ್ರಮಣವು 'ಅಪೋಲೊ ಯುಗ'ದ ನಂತರ ಚಂದ್ರನಲ್ಲಿ ನಾಸಾದ ಮೊದಲ ಪಯಣವಾಗಿದೆ. ಮುಂದಿನ 2 ವರ್ಷಗಳಲ್ಲಿ ದಕ್ಷಿಣ ಧ್ರುವದಲ್ಲಿ ಮಾನವ ಹೆಜ್ಜೆ ಇಡುವ ಪ್ರಯತ್ನಕ್ಕೆ ಇದು ಮುನ್ನುಡಿ ಬರೆದಿದೆ. ನಾಲ್ವರು ಗಗನಯಾನಿಗಳಿದ್ದ ಅಮೆರಿಕದ ಓರಿಯೊನ್‌ ಕ್ಯಾಪ್ಸುಲ್‌ ಚಂದ್ರನ ಸುತ್ತ ಪರಿಭ್ರಮಣ ಮಾಡಿದ ವೇಳೆ ಭೂಮಿಗೆ ಗೋಚರಿಸದ, ಚಂದ್ರನ ಇನ್ನೊಂದು ಬದಿಯ ಈ ಹಿಂದೆ ಕಂಡಿರದ ಹಲವು ಚಿತ್ರಗಳನ್ನು ಸೆರೆಹಿಡಿದು ನಾಸಾಗೆ ಕಳುಹಿಸಿತ್ತು. 'ಆರ್ಟೆಮಿಸ್-2'ರ ಗಗನಯಾನಿಗಳ ತಂಡವು ಒಟ್ಟು 6,94,392 ಮೈಲಿ (11,17,515 ಕಿಲೋಮೀಟರ್) ಪ್ರಯಾಣಿಸಿದೆ. 1972ರಲ್ಲಿ 'ಅಪೋಲೊ-13' ತಂಡವು ಚಂದ್ರನಲ್ಲಿಗೆ ಪಯಣಿಸಿತ್ತು. 2,48,655 ಮೈಲಿ (4,00,171 ಕಿಲೋಮೀಟರ್) ದೂರ ಕ್ರಮಿಸಿದ್ದ ಅಪೋಲೊದ ದಾಖಲೆಯನ್ನು 'ಆರ್ಟೆಮಿಸ್-2' ಮೀರಿದೆ. ಅಮೆರಿಕದ ರೀಡ್‌ ವೈಸ್‌ಮನ್‌, ವಿಕ್ಟರ್‌ ಗ್ಲೋವೆರ್‌, ಕ್ರಿಸ್ಟಿನಾ ಕೋಚ್‌ ಹಾಗೂ ಕೆನಡಾದ ಜೆರೆಮಿ ಹ್ಯಾನ್ಸನ್‌ ತಂಡದಲ್ಲಿದ್ದರು. 54 ವರ್ಷಗಳ ಬಳಿಕ ಚಂದ್ರನನ್ನು ಮನುಷ್ಯ ಮತ್ತೊಮ್ಮೆ ಹತ್ತಿರದಿಂದ ನೋಡಿದ ದಾಖಲೆಯನ್ನು ಈ ತಂಡ ಬರೆದಿದೆ.

Category
ಕರಾವಳಿ ತರಂಗಿಣಿ