image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಬಹ್ರೇನ್‌ನಲ್ಲಿ ಹೈ ಅಲರ್ಟ್: ತಾತ್ಕಾಲಿಕ ಯುದ್ಧ ವಿರಾಮಕ್ಕೂ ಮುನ್ನವೇ ಮೊಳಗಿದ ಕ್ಷಿಪಣಿ ದಾಳಿಯ ಮುನ್ನೆಚ್ಚರಿಕೆ ಸೈರನ್, ಬಂದರು ಕಾರ್ಯಾಚರಣೆ ಸ್ಥಗಿತ

ಬಹ್ರೇನ್‌ನಲ್ಲಿ ಹೈ ಅಲರ್ಟ್: ತಾತ್ಕಾಲಿಕ ಯುದ್ಧ ವಿರಾಮಕ್ಕೂ ಮುನ್ನವೇ ಮೊಳಗಿದ ಕ್ಷಿಪಣಿ ದಾಳಿಯ ಮುನ್ನೆಚ್ಚರಿಕೆ ಸೈರನ್, ಬಂದರು ಕಾರ್ಯಾಚರಣೆ ಸ್ಥಗಿತ

ಬಹರೇನ್ : ಮದ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ 15 ದಿನಗಳ ತಾತ್ಕಾಲಿಕ ಯುದ್ಧ ವಿರಾಮ ಘೋಷಣೆಯಾಗುವ ಕೆಲವೇ ಗಂಟೆಗಳ ಮೊದಲು ಬಹ್ರೇನ್ ದೇಶದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಬಹ್ರೇನ್ ರಾಜಧಾನಿ ಮನಾಮ ಸೇರಿದಂತೆ ಪ್ರಮುಖ ನಗರಗಳಲ್ಲಿ ಹಠಾತ್ತನೆ ಕ್ಷಿಪಣಿ ದಾಳಿಯ ಮುನ್ನೆಚ್ಚರಿಕೆ ನೀಡುವ 'ಹೈ ಅಲರ್ಟ್' ಸೈರನ್ ಮೊಳಗಿದೆ. ಇದು ಇರಾನ್ ಪರ ಗುಂಪುಗಳಿಂದ ಸಂಭವನೀಯ ದಾಳಿಯ ಮುನ್ಸೂಚನೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ಸಡನ್ ಬೆಳವಣಿಗೆಯಿಂದಾಗಿ ಇಡೀ ದೇಶದಲ್ಲಿ ಆತಂಕದ ಛಾಯೆ ಆವರಿಸಿದೆ.

​ಯಾವುದೇ ರೀತಿಯ ಅಪಾಯವನ್ನು ತಡೆಯುವ ನಿಟ್ಟಿನಲ್ಲಿ ಮತ್ತು ನಾಗರಿಕರ ಸುರಕ್ಷತೆಯ ದೃಷ್ಟಿಯಿಂದ, ಬಹ್ರೇನ್ ಸರ್ಕಾರವು ತುರ್ತು ಕ್ರಮಗಳನ್ನು ಕೈಗೊಂಡಿದೆ. ದೇಶದ ಅತ್ಯಂತ ಮಹತ್ವದ ಬಂದರು ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಂದರಿನಲ್ಲಿರುವ ಹಡಗುಗಳು ಮತ್ತು ಕಾರ್ಮಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಕೇವಲ ಬಂದರು ಮಾತ್ರವಲ್ಲದೆ, ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲೂ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಈ ಹೈ ಅಲರ್ಟ್ ಘೋಷಣೆಯು ಈಗಾಗಲೇ ಗಗನಕ್ಕೇರಿರುವ ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Category
ಕರಾವಳಿ ತರಂಗಿಣಿ