ವಾಶಿಂಗ್ಟನ್ : ಅಮೆರಿಕದ ಮಿಲಿಟರಿ ರಕ್ಷಿಸಿದ ಪೈಲಟ್ ಶುಕ್ರವಾರ ವಿಮಾನದಿಂದ ಕೆಳಗೆ ಹಾರುವಾಗ ಗಾಯಗೊಂಡಿದ್ದ. ಆದರೂ ಕಷ್ಟಪಟ್ಟು ನಡೆಯುತ್ತಾ ಪರ್ವತ ಪ್ರದೇಶಗಳಲ್ಲಿ 36 ಗಂಟೆ ಅಡಗಿ ಕುಳಿತಿದ್ದ. ಈತನ ಬಳಿ ರಕ್ಷಣೆಗಾಗಿ ಒಂದು ಪಿಸ್ತೂಲ್ ಮಾತ್ರವಿತ್ತು ಎಂದು ವರದಿಯಾಗಿದೆ. ಪೈಲಟ್ ಪಡೆದಿದ್ದ 'ಬದುಕುಳಿಯುವುದು, ತಪ್ಪಿಸಿಕೊಳ್ಳುವುದು, ಪ್ರತಿರೋಧ ಮತ್ತು ಪಾರಾಗುವುದು' ತರಬೇತಿಯು ಆತನನ್ನು ಉಳಿಸಿದೆ. ಅಮೆರಿಕದ ವಾಯುಪಡೆ ಸಿಬ್ಬಂದಿಗಳಿಗೆ ರೇಡಿಯೊ/ಜಿಪಿಎಸ್ ಕೋಡ್ ಹೊಂದಿರುವ ಸಾಧನ, ಕನಿಷ್ಠ ಆಹಾರ ಮತ್ತು ನೀರು, ಪ್ರಥಮ ಚಿಕಿತ್ಸಾ ಸಾಧನಗಳನ್ನು ಹೊಂದಿರುವ ಜಾಕೆಟ್ ಒದಗಿಸಲಾಗುತ್ತದೆ. ಇರಾನ್ ಹೊಡೆದುರುಳಿಸಿದ್ದ ಅಮೆರಿಕದ ಎಫ್-15 ಯುದ್ಧ ವಿಮಾನದಲ್ಲಿದ್ದ ಪೈಲಟ್ ನಾಪತ್ತೆಯಾಗಿದ್ದರು. ಅವರನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು.