image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್ ಕ್ಷಿಪಣಿ ದಾಳಿಯಿಂದ ಇಸ್ರೇಲ್‌ನ ರಾಸಾಯನಿಕ ಕಾರ್ಖಾನೆಯೊಂದಕ್ಕೆ ಭಾರಿ ಹಾನಿ!

ಇರಾನ್ ಕ್ಷಿಪಣಿ ದಾಳಿಯಿಂದ ಇಸ್ರೇಲ್‌ನ ರಾಸಾಯನಿಕ ಕಾರ್ಖಾನೆಯೊಂದಕ್ಕೆ ಭಾರಿ ಹಾನಿ!

ಟೆಲ್ ಅವೀವ್‌: ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದ ದಕ್ಷಿಣ ಇಸ್ರೇಲ್‌ನ ನಿಯೋಟ್ ಹೊವಾವ್ ಕೈಗಾರಿಕಾ ವಲಯದ ರಾಸಾಯನಿಕ ಕಾರ್ಖಾನೆಯೊಂದಕ್ಕೆ ಭಾರಿ ಹಾನಿಯಾಗಿದೆ. ದಾಳಿಗೆ ತುತ್ತಾಗಿರುವುದು ಕೀಟನಾಶಕ ಕಾರ್ಖಾನೆ ಎಂದು ವರದಿಯಾಗಿದ್ದು, ವಿಷಕಾರಿ ಕೀಟನಾಶಕ ಸೋರಿಕೆಯಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿರುವ ಅಧಿಕಾರಿಗಳು ರಾಸಾಯನಿಕದ ಸಂಭಾವ್ಯ ಸೋರಿಕೆಯನ್ನು ತಡೆಗಟ್ಟುವ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಕಾರ್ಖಾನೆಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರು ಈ ಪ್ರದೇಶಕ್ಕೆ ಬರದಂತೆ ನಿರ್ಬಂಧಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೆ ಸ್ಥಳೀಯರು ಮನೆಯಲ್ಲೇ ಇರುವಂತೆ ಮತ್ತು ಕಿಟಕಿ ಬಾಗಿಲುಗಳನ್ನು ಮುಚ್ಚುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Category
ಕರಾವಳಿ ತರಂಗಿಣಿ